ಸಿಂಧನೂರು: ನಗರದ ಮಿಲಾಪ್ ಶಾದಿ ಮಹಲ್ ನಲ್ಲಿ ದಿನಾಂಕ 03-04-2026 ರಂದು ಸಂಜೆ 7.00 ಗಂಟೆಗೆ ಸದ್ಭಾವನಾ ವೇದಿಕೆ ಸಿಂಧನೂರು ಜಮಾಅತೆ ಇಸ್ಲಾಮೀ ಹಿಂದ್ ಸಿಂಧನೂರು ಹಾಗೂ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ಸಿಂಧನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂಭ್ರಮದ ನಿಮಿತ್ತ ಸಹಭಾಗಿತ್ವ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಹಾಂತ ಸ್ವಾಮೀಜಿಗಳು (ಸಾಲಿಮಠ), ಕಲ್ಯಾಣ ಆಶ್ರಮ ಮಠಾಧೀಶರು ಆಗಮಿಸುತ್ತಿದ್ದಾರೆ ಹಾಗೂ ಮಹಮ್ಮದ್ ಕುಂಞ,ವ್ಯವಸ್ಥಾಪಕರು ಶಾಂತಿ ಪ್ರಕಾಶನ ಮಂಗಳೂರು ಆಗಮಿಸಲಿದ್ದಾರೆ. ಹಾಗೂ ಶ್ರೀಮತಿ ಮಧುಮತಿ ದೇಶಪಾಂಡೆ, ನಿವೃತ್ತ ಉಪನ್ಯಾಸಕರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ಚನ್ನನ ಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷರು ಸದ್ಭಾವನಾ ವೇದಿಕೆ ಸಿಂಧನೂರು ಹಾಗೂ ಪ್ರಸಿದ್ಧ ನೇತ್ರ ತಜ್ಞರು ಸಿಂಧನೂರು ಮೊಹಮ್ಮದ್ ಹುಸೇನ್ ಅಧ್ಯಕ್ಷರು ಜಮಾಅತೆ ಇಸ್ಲಾಮೀ ಹಿಂದ್ ಸಿಂಧನೂರು ಶ್ರೀ ಪಂಪಯ್ಯ ಸ್ವಾಮಿ ಹಿರೇಮಠ ಅಧ್ಯಕ್ಷರು ಭಾವೈಕ್ಯ ಶಾಂತಿ ಸಂದೇಶ ಸಿಂಧನೂರು ಸೇರಿದಂತೆ ಹಲವರು ಉಪಸ್ಥಿತರಿರುವರು.
ನಗರದ ಸರ್ವ ಧರ್ಮದ ಶಾಂತಿ-ಸೌಹಾರ್ದತೆಗೆ ಹಾರೈಸುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಜಕರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *