ಅರಕೇರಾ:
ತಾಲೂಕಿನ ಗಲಗ ಗ್ರಾಮದಲ್ಲಿ ಶ್ರೀ ಚನ್ನಬಸವೇಶ್ವರ ಪೂರ್ವ ಮತ್ತು ಕಿರಿಯ ಪ್ರಾಥಮಿಕ ಶಾಲೆಯ 15ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶ್ರೀ ಆರೂಢ ಮಠದ ಪೂಜ್ಯರಾದ ಶ್ರೀ ಅಯ್ಯಣ್ಣ ತಾತನವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ನರಸಪ್ಪ ಯಾದವ್ ಅವರು ಮೊದಲು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಎನ್ನುವ ಕಿವಿ ಮಾತನ್ನು ಪಾಲಕರಿಗೆ ಹೇಳಿದರು. ಮಕ್ಕಳ ಕಲಿಕೆ ಕೇವಲ ಶಿಕ್ಷಕರ ಜವಾಬ್ದಾರಿಯಲ್ಲ, ಪಾಲಕರು ಮತ್ತು ಶಿಕ್ಷಕರು ಕೈಜೋಡಿಸಿದಾಗ ಮಾತ್ರ ಮಕ್ಕಳ ಅಭಿವೃದ್ಧಿಯಾಗುತ್ತಾರೆ ಎಂದು ಪಾಲಕರಿಗೆ ಸಲಹೆಗಳನ್ನು ನೀಡಿದರು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮಕ್ಕಳಿಗೆ ಶಿಕ್ಷಣ ನೀಡುವುದು ಎಂದರೆ ತುಂಬಾ ಕಷ್ಟ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯವರು ಗಲಗ ಗ್ರಾಮದ ಮಕ್ಕಳ ಅಭಿವೃದ್ಧಿಗೋಸ್ಕರ ಇಡೀ ಕುಟುಂಬವೇ ತ್ಯಾಗ ಮಾಡಿದ್ದಾರೆ ಇಂತಹ ವಿದ್ಯಾ ಸಂಸ್ಥೆಯಲ್ಲಿ ಕಲಿತ ಮಕ್ಕಳು ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎನ್ನುವ ಆಸೆಯನ್ನು ವ್ಯಕ್ತಪಡಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಂಕರಲಿಂಗಯ್ಯ ತಾತನವರು ಮಾತನಾಡಿ ಮಕ್ಕಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಗುರುಗಳಾದ ಶ್ರೀ ಮತಿ ಯಲ್ಲಮ್ಮ ಯಾದವ್ ಅವರು ಸಂಸ್ಥೆಯ ವಾರ್ಷಿಕ ವರದಿಯನ್ನು ಮಂಡಿಸಿದರು. ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು 12ನೇ ಶತಮಾನದ ಶಿವಶರಣರ ವಚನಾಮೃತ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನೆರವೇರಿತು.

ಶ್ರೀ ಚನ್ನಬಸವೇಶ್ವರ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಗೌರಿ ಜಿ‌ ನಾಯಕ, ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮುದುಕಪ್ಪ ಯಾದವ್, ದುರ್ಗಪ್ಪ ಗೌಡ ಮಾಲೀ ಪಾಟೀಲ್, ಅಯ್ಯಪ್ಪ ಕೊಂಗಂಡಿ, ಮಾರೆಪ್ಪ ಕೋತ್ತದೊಡ್ಡಿ, ಮಲ್ಲಯ್ಯ ಹೂಗಾರ, ಮಿರಜ್ ಅಹ್ಮದ್ ಹೂವಿನ ಹಡಗಲಿ, ಶಾಬೂದಿನ್, ವೆಂಕಟೇಶ್ ಮಲ್ಲಟ, ಚನ್ನಬಸವ ಕೊಂಡಿಕಾರ್, ಅಬೀಬ್ ಪಾಷಾ, ಕರಿಯಪ್ಪ ಚಟ್ನಹಳ್ಳಿ, ಶಿವಣ್ಣ ಯಾದವ್, ಆಂಜನೇಯ ಯಾದವ್ ಹಾಗೂ ಸಹಶಿಕ್ಷಕ ವೃಂದದವರು ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *