ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿರುವುದು ತಮಗೆ ಗೊತ್ತಿರುವ ವಿಚಾರ.
ಒಬ್ಬ ಸರ್ಕಾರಿ ಅಧಿಕಾರಿಯಾಗಿ ಕೇವಲ ಸರಕಾರಿ ಕೆಲಸ ಎಂದು ಪರಿಗಣಿಸದೆ ಬಡವರ ಅಶಕ್ತರ ಅಭಿವೃದ್ಧಿಗಾಗಿ ಅಂತಕರಣದಿಂದ ಕೆಲಸ ಮಾಡಿದ ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟು ಜನಸೇವೆಗೈದ
ಮಹಾಂತೇಶ್ ಬೀಳಗಿಯವರು ಒಬ್ಬ ಆದರ್ಶ ಅಧಿಕಾರಿಯಾಗಿದ್ದರು. ಅವರ ಆಕಾಲಿಕ ನಿಧನವು ಕೇವಲ ಅವರ
ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ನಷ್ಟವನ್ನುಂಟು ಮಾಡಿದೆ.
ಈ ಹಿಂದೆ ಅಧಿಕಾರಿಗಳು ಆಕಾಲಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರಿಗೆ ಕ್ಲಾಸ್-1 ಅಧಿಕಾರಿ ಹುದ್ದೆಯನ್ನು ನೀಡಿದ ಹಲವು ನಿದರ್ಶನಗಳಿವೆ. ಅದರಂತೆ ಶ್ರೀ ಮಹಾಂತೇಶ್ ಬೀಳಗಿ ಅವರ ಅಕಾಲಿಕ ನಿಧನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಅವರ ಪತ್ನಿ ಅಥವಾ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಕ್ಲಾಸ್-1 ಅಧಿಕಾರಿ ಹುದ್ದೆಯನ್ನು ನೀಡುವಂತೆ ತಮ್ಮನ್ನು ಕೋರುತ್ತೇನೆ. ಎಂದು ವಿರೋಧ ಪಕ್ಷದ ನಾಯಕರಾದ ಬಿವೈ ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆಯುವುದರ ಮೂಲಕ ಆಗ್ರಹಿಸಿದ್ದಾರೆ
