ಮಸ್ಕಿ : ತಾಲೂಕಿನ ಬಳಗಾನೂರ ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಸಿರಿ ಪೌಂಡೇಷನ್(ರಿ)ರಾಯಚೂರು ವತಿಯಿಂದ ಶತಾಯುಷಿ ಪದ್ಮ ಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರಗೆ ಶ್ರದ್ಧಾಂಜಲಿ ಪ್ರಯುಕ್ತ 114 ಸಸಿಗಳನ್ನು ನೆಡುವ ಮೂಲಕ ಹಸಿರು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮಸ್ಕಿ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಅವರು ಸಸಿ ನೆಟ್ಟು ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮತ್ತು ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು, ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರು 114 ಸಸಿಗಳನ್ನು ನೆಟ್ಟು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಇದೇವೇಳೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಸಿಗಳನ್ನು ಹಿಡಿದು ಪರಿಸರ ಘೋಷಣೆ ಕೂಗುತ್ತಾ ಪರಿಸರ ಜಾಥಾ ಮಾಡಲಾಯಿತು.
ನಂತರ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಮಾತನಾಡಿ ಗಿಡಮರಗಳೆ ನನ್ನ ಮಕ್ಕಳು ಎಂದು ಇಡೀ ಜನತೆಗೆ ಪರಿಸರ ಪ್ರಜ್ಞೆ ಮೂಡಿಸಿದ್ದು ಸಾಲುಮರದ ತಿಮ್ಮಕ್ಕ. ಪ್ರತಿಯೊಂದು ಮಗುವಿಗೂ ಪರಿಸರ ಪ್ರಜ್ಞೆ ಇರಬೇಕು,ಪರಿಸರವನ್ನು ಉಳಿಸಿ ಬೆಳಸಬೇಕು,ಪರಿಸರ ಅಸಮತೋಲನದಿಂದ ಉಂಟಾಗುವ ಹಾನಿಗಳನ್ನು ಮಕ್ಕಳಿಗೆ ಶಿಕ್ಷಕರು ತಿಳಿಸಬೇಕು.ಸುಮಾರು 10 ವರ್ಷಗಳಿಂದ ವನಸಿರಿ ಪೌಂಡೇಷನ್ ಪರಿಸರ ಜಾಗೃತಿ ಮೂಡಿಸುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ.ವನಸಿರಿ ಪೌಂಡೇಷನ್ ಸಂಸ್ಥೆಗೆ ಸ್ಫೂರ್ತಿದಾಯಕವಾಗಿರುವ ಮಹಾತಾಯಿ ಸಾಲುಮರದ ತಿಮ್ಮಕ್ಕ ಅವರ ಸವಿನೆನಪಿಗಾಗಿ 114 ಸಸಿಗಳನ್ನು ನೆಟ್ಟು ಸ್ಪರ್ಧಾತ್ಮಕವಾಗಿ ಉತ್ತಮವಾಗಿ ಬೆಳಸಿದ ವಿದ್ಯಾರ್ಥಿಗಳಿಗೆ ಮುಂದಿನ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನೀಡುವ ಕಾರ್ಯ ಉತ್ತಮವಾದದು.ಯಾವುದೆ ಅನುದನವಿಲ್ಲದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ.ಇದಕ್ಕೆ ರಾಜ್ಯ ಸರ್ಕಾರವು ಕೂಡಾ ಹೆಚ್ಚಿನ ಆದ್ಯತೆ ಕೊಡಬೇಕು.ಉತ್ತಮ ಪರಿಸರ ನಿರ್ಮಾಣ ಮಾಡಿದಾಗ ಮಾತ್ರ ದೇಶದಲ್ಲಿ ಉತ್ತಮ ಆಹಾರ ಸೇವಿಸಲು ಸಾಧ್ಯ,ಪರಿಸರ ಅಸಮತೋಲನದಿಂದ ಅತೀ ವೃಷ್ಟಿ ಅನಾವೃಷ್ಟಿ ಗಿಡಮರಗಳೆ ನನ್ನ ಮಕ್ಕಳು ಎಂದು ಇಡೀ ಜನತೆಗೆ ಪರಿಸರ ಪ್ರಜ್ಞೆ ಮೂಡಿಸಿದ್ದು ಸಾಲುಮರದ ತಿಮ್ಮಕ್ಕ.ಹಾಗಾಗಿ ಪ್ರತಿಯೊಂದು ಮಗುವಿಗೂ ಪರಿಸರ ಪ್ರಜ್ಞೆ ಇರಬೇಕು, ಪರಿಸರವನ್ನು ಉಳಿಸಿ ಬೆಳಸಬೇಕು, ಪರಿಸರ ಅಸಮತೋಲನದಿಂದ ಉಂಟಾಗುವ ಹಾನಿಗಳನ್ನು ಮಕ್ಕಳಿಗೆ ಶಿಕ್ಷಕರು ತಿಳಿಸಬೇಕು.ಸುಮಾರು 10 ವರ್ಷಗಳಿಂದ ವನಸಿರಿ ಪೌಂಡೇಷನ್ ಪರಿಸರ ಜಾಗೃತಿ ಮೂಡಿಸುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ.ವನಸಿರಿ ಪೌಂಡೇಷನ್ ಸಂಸ್ಥೆಗೆ ಸ್ಫೂರ್ತಿದಾಯಕವಾಗಿರುವ ಮಹಾತಾಯಿ ಸಾಲುಮರದ ತಿಮ್ಮಕ್ಕ ಅವರ ಸವಿನೆನಪಿಗಾಗಿ 114 ಸಸಿಗಳನ್ನು ನೆಟ್ಟು ಸ್ಪರ್ಧಾತ್ಮಕವಾಗಿ ಉತ್ತಮವಾಗಿ ಬೆಳಸಿದ ವಿದ್ಯಾರ್ಥಿಗಳಿಗೆ ಮುಂದಿನ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನೀಡುವ ಕಾರ್ಯ ಉತ್ತಮವಾದದು.ಇದಕ್ಕೆ ರಾಜ್ಯ ಸರ್ಕಾರವು ಕೂಡಾ ಹೆಚ್ಚಿನ ಆದ್ಯತೆ ಕೊಡಬೇಕು.ಉತ್ತಮ ಪರಿಸರ ನಿರ್ಮಾಣ ಮಾಡಿದಾಗ ಮಾತ್ರ ದೇಶದಲ್ಲಿ ಉತ್ತಮ ಆಹಾರ ಸೇವಿಸಲು ಸಾಧ್ಯ,ಪರಿಸರ ಅಸಮತೋಲನದಿಂದ ಅತೀ ವೃಷ್ಟಿ ಅನಾವೃಷ್ಟಿ ಆಗುತ್ತಿದೆ. ಆದ್ದರಿಂದ ಪರಿಸರ ಸಮತೋಲನ ಕಾಪಾಡಲು ವನಸಿರಿ ಪೌಂಡೇಷನ್ ಜೊತೆಗೆ ಕೈ ಜೋಡಿಸುವ ಮೂಲಕ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು ಎಂದರು.
ಈ ಸಂಧರ್ಭದಲ್ಲಿ ಬಸವರಾಜ ಹಸಮಕಲ್,ಎರಿಯಪ್ಪ PSI ಬಳಗಾನೂರ,ಗಣೇಶ ಪ.ಪಂ.ಸದಸ್ಯರು, SDMC ಅಧ್ಯಕ್ಷರಾದ ಶರಣಬಸವ ಕಂದಗಲ್,ಉಪಾಧ್ಯಕ್ಷ ಹನುಮಂತ ನಾಯಕ,ಮುಖ್ಯಗುರು ಮುತ್ತುರಾಜ ಅಂಗಡಿ,ಊರಿನ ಹಿರಿಯರಾದ ಗೋವಿಂದ ರಡ್ಡಿಗೌಡ,ವನಸಿರಿ ಪೌಂಡೇಷನ್ ಮಸ್ಕಿ ತಾಲೂಕ ಅಧ್ಯಕ್ಷ ರಾಜು ಪತ್ತಾರ, ಸದಸ್ಯರಾದ ಚನ್ನಪ್ಪ ಕೆ ಹೊಸಹಳ್ಳಿ,ರಮೇಶ ಕುನ್ನಟಗಿ,ಚಂದ್ರು ಗದ್ದಿಗೌಡ ಹಾಗೂ SDMC ಸರ್ವ ಸದಸ್ಯರು,ಶಿಕ್ಷಕರು,ವಿದ್ಯಾರ್ಥಿಗಳು ಇನ್ನೂ ಹಲವಾರು ಊರಿನ ಮುಖಂಡರು ಭಾಗವಹಿಸಿ ಯಶಸ್ವೀಗೊಳಿಸಿದರು.


