ಕಳೇದ ಹಲವು ವರ್ಷಗಳಿಂದ ಜಾಗತಿಕವಾಗಿ ಹೆಚ್‌ಐವಿ ಸೋಂಕು ನಿಯಂತ್ರಣವಾಗುತ್ತಿದೆ ಎಂದು ನಿಟ್ಟುಸಿರು ಬಿಡುವಾಗಲೆ ಕ್ರಮೇಣ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವದು ಎಚ್ಚರಿಕೆಯ ಗಂಟೆಯಾಗಿದ್ದು, ಯುವಜನತೆಗೆ ಹೆಚ್ಚಿನ ಜಾಗೃತಿಯನ್ನು ನಾವೆಲ್ಲರೂ ಸೇರಿ ನಿಡೋಣವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೆಂದ್ರಬಾಬು ತಿಳಿಸಿದರು.

ರಾಯಚೂರು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ, ಡ್ಯಾಪ್ಕೋ ರವರ ಮೂಲಕ ತುಂಗಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಗಳು ರಾಯಚೂರು ರವರ ನಿರ್ದೇಶನದಂತೆ ಬರುವ ಡಿಸೆಂಬರ್- 01 ರಂದು ಜರಗುವ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳೊಂದಿಗಿನ ಪೂರ್ವ ಭಾವಿ ಸಭೆಯಲ್ಲಿ ಮಾತನಾಡುತ್ತಾ, ಯುವಜನತೆಯ ಇತ್ತೀಚಿನ ಸಾಮಾಜಿಕ ಜಾಲತಾಣಗಳ ಬಳಕೆ, ಕುಟುಂಬದ ಹಿರಿಯರ ಮಾರ್ಗದರ್ಶನದ ನಿರ್ಲಕ್ಷತೆಯು ಬಹುಶಃ ಯುವಜನತೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿರಬಹುದು, ಭವಿಷ್ಯದ ಗುರಿ ಸಾಧನೆ ಕುರಿತು, ಹೆಚ್‌ಐವಿಯಿಂದ ಆರೋಗ್ಯದ ಮೇಲೆ ಉಂಟಾಗುವ ಗಂಭೀರತೆ ಕುರಿತು ಹೆಚ್ಚಿನ ಜಾಗೃತಿ ನೀಡೋಣವೆಂದು ತಿಳಿಸಿದರು.
ಡಿಸೆಂಬರ್‌ 1 ರಂದು ವಿವಿಧ ಕಾಲೇಜುಗಳ, ರೆಡ್‌ಕ್ರಾಸ್‌, ರೋಟರಿ, ಹೆಲ್ಪೇಜ್‌‌ ಇಂಡಿಯಾ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್‌ ಜಾಥಾ, ಹೆಚ್‌ಐವಿ ನಿರ್ಮೂಲನೆಗೆ ದುಡಿಯುತ್ತಿರುವ ಸಾಧಕರಿಗೆ ಸನ್ಮಾನ, ಏರ್ಪಡಿಸಲಾಗುವ ಕುರಿತು ಸಲಹೆ ಸೂಚನೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ, ಡಾ ಮಹಮ್ಮದ್ ಶಾಕೀರ್‌ ಮೊಹಿಯುದ್ದೀನ್‌, ಜಿಲ್ಲಾ ರೋಟರಿ ಗವರ್ನರ್, ಪವನ ಕಿಶೋರ್‌ ಪಾಟೀಲ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಏಡ್ಸ್‌ ‌ ಮೇಲ್ವಿಚಾರಕರಾದ ಮಲ್ಲಯ್ಯ ಮಠಪತಿ, ರೋಟರಿ ಸಂಸ್ಥೆಯ ಲಕ್ಷ್ಮಿಕಾಂತ್‌ರೆಡ್ಡಿ, ರೆಡ್‌ಕ್ರಾಸ್‌‌ ಕಾರ್ಯದರ್ಶಿ ಅತ್ತಾವುಲ್ಲಾ, ಎಫ್‌ಪಿಎಐ ವ್ಯವಸ್ಥಾಪಕರು ವಿಜಯಕುಮಾರ‌, ಹೆಲ್ಪೇಜ್‌ನ ಡಾ ಶ್ರೀನಿವಾಸ, ಹನುಮಂತಪ್ಪ, ದೇವರಾಜ್‌ ಮಾರೆಪ್ಪ, ಈರಣ್ಣ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *