ಮಸ್ಕಿ ಪಟ್ಟಣದ ಅಭಿವೃದ್ಧಿಗೆ ಪ್ರಮುಖ ಆದ್ಯತೆ – ಆರ್. ಸಿದ್ದನಗೌಡ ತುರ್ವಿಹಾಳ

ಮಸ್ಕಿ : ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿರುವ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಮಸ್ಕಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆಪಿಸಿಸಿ ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿಯಾದ ಸಿದ್ದನಗೌಡ ತುರವಿಹಾಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಮಸ್ಕಿ ನಗರ ಯೋಜನಾ ಕಾರ್ಯಾಲಯದಲ್ಲಿ
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನಂತರ ಮಾತನಾಡಿದ ಅವರು ನಗರ ಯೋಜನಾ ಪ್ರಾಧಿಕಾರದ ಕಛೇರಿಯಲ್ಲಿ ಯಾವುದೇ ಅರ್ಜಿಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಉಳಿಯಬಾರದು. ಬಡವರ ಬಗ್ಗೆ ಕಾಳಜಿ ಇರಲಿ. ಅವರ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕು. ಕಚೇರಿಗೆ ಬರುವವರಿಗೆ ಯಾವುದೇ ತೊಂದರೆ ಇಲ್ಲದಂತೆ ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸಬೇಕು. ನಗರದ ಅಭಿವೃದ್ಧಿ ಬಗ್ಗೆ ಮಾಸ್ಟರ್ ಪ್ಲಾನ್ ಅಗಬೇಕು. ಲೇ ಔಟ್, ರಿಯಲ್ ಎಸ್ಟೇಟ್, ಉದ್ಯಮಗಳಿಂದ ತೆರಿಗೆ ಬರುತ್ತಿದ್ದು ಅದಕ್ಕೆ ಪೂರಕವಾಗಿಯೂ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸರಕಾರದಿಂದ ಪ್ರಾಧಿಕಾರದ ಜವಾಬ್ದಾರಿ ತನಗೆ ವಹಿಸಿದ್ದಾರೆ. ಉತ್ತಮವಾಗಿ, ಬಡವರ ಕೆಲಸಗಳನ್ನು ನಡೆಸಲಾಗುತ್ತದೆ. ನನ್ನ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಅಗದಂತೆ ಶೇ.೧೦೦ರಷ್ಟು ಬದ್ಧವಾಗಿ ಅಧಿಕಾರ ನಡೆಸಲಿದ್ದೇನೆ. ಮಸ್ಕಿ ಜನತೆ ಏನನ್ನು ಬಯಸುತ್ತಾರೆಯೋ ಅದನೆ ಮಾಡಲಾಗುವುದು ಎಂದರು. ಸಾಧ್ಯವಾದಷ್ಟು ಸರ್ಕಾರದಿಂದ ಪಟ್ಟಣದ ಅಭಿವೃದ್ಧಿ ಜೊತೆಗೆ ಕುಡಿಯುವ ನೀರಿಗೆ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡಿ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜನರ ಸೇವೆ ಮಾಡುವೆ ಎಂದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ತಾಲೂಕು ಪಂಚಾಯತ್ ಇಒ ಅಮರೇಶ್ ಯಾದವ, ಪರಶುರಾಮ ಪುರಸಭೆ ಮುಖ್ಯ ಅಧಿಕಾರಿ ನರಸಡ್ಡಿ ಸೇರಿದಂತೆ ಇತರರು ಇದ್ದರು.
ಬಾಕ್ಸ್ :—
ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳಿಂದ ಸನ್ಮಾನ : ನೂತನವಾಗಿ ಮಸ್ಕಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಆರ್ ಸಿದ್ಧನಗೌಡ ತುರುವಿಹಾಳ ಅವರಿಗೆ ಕಾಂಗ್ರೆಸ್ ಮುಖಂಡರು ಸೇರಿದಂತೆ ಅವರ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.

ಹೇಳಿಕೆ :– ಸರಕಾರದಿಂದ ಪ್ರಾಧಿಕಾರದ ಜವಾಬ್ದಾರಿ ನನಗೆ ವಹಿಸಿದ್ದಾರೆ. ಆದ್ದರಿಂದ ಉತ್ತಮವಾಗಿ, ಬಡವರ ಕೆಲಸಗಳನ್ನು ಮಾಡುವೆ ನನ್ನ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಅಗದಂತೆ ಶೇ.100 ರಷ್ಟು ಪ್ರಾಮಾಣಿಕವಾಗಿ ಅಧಿಕಾರ ನಡೆಸುವೆ . ಮಸ್ಕಿ ಜನತೆ ಏನನ್ನು ಬಯಸುತ್ತಾರೆಯೋ ಅದನ್ನೇ ಮಾಡಲಾಗುವುದು –
ಆರ್ ಸಿದ್ಧನಗೌಡ ತುರುವಿಹಾಳ.

Leave a Reply

Your email address will not be published. Required fields are marked *