ಲಿಂಗಸಗೂರು, ಮಾ.27 -ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ವತಿಯಿಂದ ಪಟ್ಟಣದ ನಾರಾಯಣ ಪುರ ರಸ್ತೆಯ ವಿ ಎನ್ ಆರ್ ಕಾಂಪ್ಲೆಕ್ಸ್
ಮುಂಭಾಗದ ಬಳಿ ಬೇರೆಬೇರೆ ಗ್ರಾಮಗಳಿಂದ ವ್ಯಾಪಾರ ವಹಿವಾಟಿಗಾಗಿ ದಿನಾಲೂ ಸಾವಿರಾರು ಸಾರ್ವಜನಿಕರು ಓಡಾಡುತ್ತಿದ್ದು ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ನೀರಿನ ದಾಹ ತಣಿಸಲು ಕುಡಿಯುವ ನೀರಿನ ಅರವಟಿಗೆ ಪ್ರಾರಂಭಿಸಿದ್ದೇನೆಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲೂಕ ಅಧ್ಯಕ್ಷ ವೆಂಕಟೇಶ್ ಎನ್ ರಾಠೋಡ್ ಕುಡಿಯುವ ನೀರಿನ ಅರವಟಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು
ಈ ವರ್ಷ ಈಗಾಗಲೆ ತಾಪಮಾನ ಹೆಚ್ಚಾಗಿದೆ. ಪಟ್ಟಣಕ್ಕೆ ವ್ಯಾಪಾರ ವಹಿವಾಟಿಗಾಗಿ ಬರುವ ಸಾವಿರಾರು ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ವಿವಿಧ ಕೆಲಸಗಳು ಮತ್ತು ಅಗತ್ಯ ವಸ್ತುಗಳ ಖರೀದಿಗಾಗಿ ಪ್ರತಿದಿನ ಪಟ್ಟಣಕ್ಕೆ ಆಗಮಿಸುತ್ತಾರೆ. ಬೇಸಿಗೆಯ ತೀವ್ರ ಬಿಸಿಲಿನ ತಾಪದಿಂದ ಜನರು ತತ್ತರಿ ಸುತ್ತಿದ್ದು, ದಾಹವಾಗುವ ಸಂದರ್ಭದಲ್ಲಿ ಕುಡಿಯುವ ನೀರನ್ನು ಪಡೆಯುವುದು ಕಷ್ಟಕರವಾಗುತ್ತಿದೆ ಎಂದು ತಿಳಿಸಿದರು. ಜನರು ಹಣ ಕೊಟ್ಟು ನೀರು ಖರೀದಿಸಿ ಕುಡಿಯಬೇಕಾದ ಪರಿಸ್ಥಿತಿ ಇದೆ ಎಂದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದಾಹ ನೀಗಿಸಿಕೊಳ್ಳಲು ಉಚಿತವಾಗಿ ಕುಡಿಯುವ ನೀರು ದೊರೆಯುವಂತೆ ಮಾಡಲು ನಮ್ಮ ಬಂಜಾರ ಸಮುದಾಯದ ವತಿಯಿಂದ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸಲಾಗಿದೆ.
ಈ ಸಂದರ್ಭದಲ್ಲಿ ಲಾಲಪ್ಪ ರಾಠೋಡ್ ಜಿಲ್ಲಾ ಉಪಾಧ್ಯಕ್ಷ , ತಾಲೂಕ ಪ್ರದಾನ ಕಾರ್ಯದರ್ಶಿ ನೀಲೇಶ್ ಡಿ ಪವಾರ್ , ರಾಜ್ಯ ಜಂಟಿ ಕಾರ್ಯದರ್ಶಿ ದೇವಪ್ಪ ರಾಠೋಡ್ , ತಾಲೂಕ ಗೌರವಧ್ಯಕ್ಷರು ಲಕ್ಷ್ಮಣ್ ರಾಠೋಡ್ , ತಾಲೂಕ ಯುವ ಘಟಕದ ಅಧ್ಯಕ್ಷರು ಚಂದ್ರು ರಾಠೋಡ್ , ತಾಲೂಕ ಖಜಾಂಚಿ ಚಲುವಪ್ಪ ಚೌಹಾಣ್ , ತಾಲೂಕ ಉಪಾಧ್ಯಕ್ಷ ಚಂದ್ರು ಚೌಹಾಣ್ , ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಬಂದುಗಳು ಇದ್ದರು

