ರಾಯಚೂರು:ಮಾ:ಸಾವಿರಾರೂ ವರ್ಷಗಳಿಂದ ಸಮಾಜದಲ್ಲಿ ಮನೆ ಮಾಡಿರುವ ಸಾಂಕ್ರಾಮಿಕ ಖಾಯಿಲೆ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ಹಾಗೂ ಸಮುದಾಯವು ಕೈಜೊಡಿಸಬೇಕಿದೆ ಎಂದು ಹೆಚ್ಚುವರಿ ಪೋಲಿಸ್ ಅಧಿಕ್ಷಕರು ಎಸ್ ಜಿ ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ರಿಮ್ಸ್ ಮೆಡಿಕಲ್ ಕಾಲೇಜ್, ನವೋದಯ ಮೆಡಿಕಲ್ ಕಾಲೇಜ್, ರಿಮ್ಸ್ ನರ್ಸಿಂಗ್ ಕಾಲೇಜ್, ಪೋಲಿಸ್ ಇಲಾಖೆ, ಮಹಾನಗರ ಪಾಲಿಕೆ ಜಿಲ್ಲಾ ತರಬೇತಿ ಕೇಂದ್ರ, ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಜಾಗೃತಿ ಜಾಥಾ ಚಾಲನೆಗೊಳಿಸಿ ಮಾತನಾಡುತ್ತಾ, ವರ್ಷ ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವಂತೆ ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇದ್ದಲ್ಲಿ ಯಾರು ನಿರ್ಲಕ್ಷ್ಯ ಮಾಡಬೇಡಿ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವ, ಉಗುಳುವ, ರೂಡಿಗಳನ್ನು ನಿಯಂತ್ರಣ ಮಾಡಿದಲ್ಲಿ ಹಾಗೂ ಆರೋಗ್ಯಇಲಾಖೆಯ ಕಾರ್ಯ ಚಟುವಟಿಕೆಗಳಿಗೆ ಬೆಂಬಲವಾಗಿ ಇದ್ದಲ್ಲಿ ಕ್ಷಯರೋಗ ನಿರ್ಮೂಲನೆ ಸಾಧ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸುರೇಂದ್ರ ಬಾಬು ಮಾತನಾಡಿ ಜಗತ್ತಿನ ಒಟ್ಟು ಪ್ರಕರಣಗಳಲ್ಲಿ ಶೇಕಡ 25 ರಷ್ಟು ಭಾರತದಲ್ಲಿ ಪ್ರಕರಣಗಳಿವೆ. ಪ್ರಸಕ್ತ ವರ್ಷ “ಹೌದು, ಭಾರತದ ನೇತೃತ್ವದಲ್ಲಿ, ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು” ಎಂಬ ಘೋಷ ವಾಕ್ಯದಡಿ ಜನ ಸಮುದಾಯಕ್ಕೆ ನಿರಂತರ ಜಾಗೃತಿಯೊಂದಿಗೆ ಕ್ಷಯರೋಗದ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದ್ದೆವೆ. ಈಗಾಗಲೆ ರಾಷ್ಟ್ರೀಯ ಮಾರ್ಗಸೂಚಿಯನ್ವಯ ಜಿಲ್ಲೆಯ 18 ಗ್ರಾಮ ಪಂಚಾಯತಗಳು ಕ್ಷಯ ಮುಕ್ತ ಗ್ರಾಮಪಂಚಾಯತ ಪ್ರಶಸ್ತಿಗೆ ಭಾಜನರಾಗಿವೆ. ಕ್ಷಯರೋಗ ಪತ್ತೆಗಾಗಿ ಕಫ ಪರೀಕ್ಷೆ, ಸಿಬಿ ನ್ಯಾಟ್, ಟ್ರ್ಯೂನಾಟ್ ಮೂಲಕ ಆಸ್ಪತ್ರೆಗಳಲ್ಲಿ ಹಾಗೂ ಇತ್ತೀಚಿಗೆ ಸಮುದಾಯದಲ್ಲಿ ಸ್ಥಳದಲ್ಲಿಯೇ ಹ್ಯಾಂಡ್‌ಹೇಲ್ಡ್ ಎಕ್ಸ್‌ರೇ ಮೆಷಿನ್ ಮೂಲಕ ರೋಗ ಪತ್ತೆ ಮಾಡಲಾಗುವುದು. ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವವರೊಂದಿಗೆ ಅವರ ಕುಟುಂಬದ ಸದಸ್ಯರ ತಪ್ಪದೆ ಕಫ ಪರೀಕ್ಷೆ ಮಾಡಿಸಲು ಮರೆಯಬಾರದು ಎಂದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಮಹಮ್ಮದ್ ಶಾಕೀರ್ ಮೊಹಿನುದ್ದೀನ್ ಪ್ರಸ್ತಾವಿಕವಾಗಿ ಮಾತನಾಡಿದರು.
ನವೋದಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಂದ ಕಿರು ನಾಟಕ ಜಾಥಾ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ನಂತರ ತೀನ್‌ಕಂದಿಲ್ ಚೌಕ್ ಹತ್ತಿರ ಕ್ಷಯರೋಗ ಜಾಗೃತಿಯ ಕುರಿತು ವೈದ್ಯ ವಿಧ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ರಿಮ್ಸ್ ಆಸ್ಪತ್ರೆ ಡಾ ವಿಜಯಶಂಕರ, ರಿಮ್ಸ್ ಪ್ರಾಂಶುಪಾಲರಾದ ಡಾ ರಾಹುಲ್ ಕೀರ್ತೆ, ಡಾ ರಂಜನ್ ಮುಖ್ಯಸ್ಥರು ಸಮುದಾಯ ವೈದ್ಯಕೀಯ ವಿಭಾಗ, ಪ್ರಾಧ್ಯಾಪಕರು ಡಾ ಚಂದ್ರಶೇಖರ್, ಡಿಎಸ್‌ಓ ಡಾ ಗಣೇಶ ಕೆ, ಟಿಹೆಚ್‌ಓ ಅಮೃತ್ ಹುಕ್ಕೇರಿ, ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಪಿಎಸ್‌ಎಮ್ ವಿಭಾಗದ ಡಾ ಆರ್ಶಿಯಾ, ಡಾ ಸುಜಾತಾ, ಡಾ ರೂಪಕಲಾ, ಡಾ ಪ್ರತಿಭಾ, ರಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಅರ್ಚನಾ, ಶಿವರಾಜ, ಡಿಹೆಚ್‌ಇಓ ಈಶ್ವರ ಹೆಚ್ ದಾಸಪ್ಪನವರ, ಡಿಪಿಸಿ ಅಮರೇಶ ಕುಮಾರ, ಡಿಪಿಪಿಎಮ್‌ಸಿ ಮೊಹೀನ್ ಪಾಶಾ, ಏಡ್ಸ್ ಮೇಲ್ವಿಚಾರಕ ಮಲ್ಲಯ್ಯ ಮಠಪತಿ ಸೇರಿದಂತೆ ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳು, ಎಸ್‌ಟಿಎಸ್, ಎಸ್‌ಎಲ್‌ಎಸ್, ಟಿಬಿ ವಿಭಾಗ, ಏಡ್ಸ್ ವಿಭಾಗದ ಹಾಗೂ ಪೋಲಿಸ್ ಸಿಬ್ಬಂದಿಯರು ಹಾಜರಿದ್ದರು.

