ಮಾನ್ವಿ : ಹೆಣ್ಣೆಂದರೆ ಪೀಡೆ ಅಲ್ಲ ಹೆಣ್ಣೆಂದರೆ ಶಕ್ತಿ, ಹೆಣ್ಣೆಂದರೆ ಶೋಕ ಅಲ್ಲ ಹೆಣ್ಣೆಂದರೆ ಸಂಸ್ಕೃತಿ ಎಂದು ಶ್ರೀದೇವಿ ಬಳಿಗಾರ ಹೇಳಿದರು. ಪಟ್ಟಣದ ಶಾರದಾ ವಿದ್ಯಾನಿಕೇತನ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಮಾನ್ವಿ ಹಾಗೂ ತಾಲೂಕ ಕಾನೂನು ಸೇವಾ ಸಮಿತಿ, ಮಾನ್ವಿ ತಾಲೂಕ ಅಧಿಕಾರಿಗಳು ಮಾನ್ವಿ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀದೇವಿ ಬಳಿಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಉತ್ತಮವಾದ ಬದುಕನ್ನು ಕಟ್ಟಿ ಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಇಂದಿನ ಹೆಣ್ಣು ಅಬಲೆಯಲ್ಲ ಸಬಲೆಯಾಗಿದ್ದಾಳೆ. ಮಹಿಳೆಯರಿಗೆ ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರ ಕಾನೂನುಗಳು ದುರ್ಬಳಕೆ ಆಗುತ್ತಿರುವುದು ಬಹಳ ದುರಂತದ ಸಂಗತಿಯಾಗಿದೆ. ಕೌಟುಂಬಿಕ ದೌರ್ಜನ್ಯ ಕಾಯ್ದೆ ಗಳು , ವರದಕ್ಷಿಣೆ ಕಾಯ್ದೆಗಳು, ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಇನ್ನು ಹಲವಾರು ಕಾನೂನುಗಳು ಇದ್ದರು ಕೂಡ ಮಹಿಳೆಯರ ಮೇಲೆ ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೀತಾ ಇದಾವೆ ಇವುಗಳನ್ನು ತಡೆಗಟ್ಟಬೇಕೆಂದರೆ ಮಹಿಳೆಯರು ಎಚ್ಚೆತ್ತುಕೊಂಡು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಜಾಗೃತಿ ಮೂಡಿಸಿದಾಗ ಮಹಿಳೆಯರಿಗೆ ಸಮಾಜದಲ್ಲಿ ಸಾಮಾಜಿಕ ಸ್ಥಾನ ಮಾನಗಳು ದೊರಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಕಾವ್ಯ ಲಕ್ಷ್ಮೀ ವೈದ್ಯರು ಮಾತನಾಡಿ ಒಬ್ಬ ಮಹಿಳೆಯ ಹಿಂದೆ ಒಬ್ಬ ಪುರುಷನ ಸಹಕಾರ ಇದ್ದರೆ ಸಮಾಜದಲ್ಲಿ ಒಳ್ಳೇಯ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ. ಹೆಣ್ಣುಮಕ್ಕಳು ಎಂಥಹ ಕಷ್ಟ ಬಂದರು ಶಿಕ್ಷಣ ವನ್ನು ಕುಂಟಿತಗೊಳಿಸದೇ ಉತ್ತಮವಾಗಿ ಅಭ್ಯಾಸ ಮಾಡಿ ಉನ್ನತ ಸ್ಥಾನ ಪಡೆದು ಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದ ಕುರಿತು ಮಂಜುಳಾ ಕಿಶೋರ್ ಕುಮಾರ ಮಾತನಾಡಿದರು. ಹಾಗೂ ಈರಣ್ಣ ಮರ್ಲಟ್ಟಿ ಉಪನ್ಯಾಸಕರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ ಹೈoದವಿ ಮಧುಸೂದನ್ ಗುಪ್ತಾಜಿ ಕಾರ್ಯದರ್ಶಿ ಶಾರದಾ ಶಿಕ್ಷಣ ಸಂಸ್ಥೆಯಯವರು ಮಾತನಾಡಿ ಜೀವನ ಎನ್ನುವುದು ಯಾವ ಸಮಯದಲ್ಲಿ ಹೇಗೆ ಕಷ್ಟ ಬರುತ್ತೆ ಅದನ್ನು ಸ್ವೀಕರಿಸಬೇಕು ಎಂತಹ ಕಷ್ಟಗಳು ಬಂದರು ಹೆದುರಿಸುವ ಧೈರ್ಯ ಇರಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಉಮಾಮಹೇಶ್ವರಿ ಮದುಸೂಧನ ಗುಪ್ತಾಜಿ ಅಧ್ಯಕ್ಷರು ಶಾರದಾ ಶಿಕ್ಷಣ ಸಂಸ್ಥೆ ಮಾನ್ವಿ, ಜಿ.ಎಸ್ ವರ್ಷಿತಾ,ಉಪಪ್ರಚಾರ್ಯರಾದ ವೀರಭದ್ರಯ್ಯ ಹಿರೇಮಠ ಉಪನ್ಯಾಸಕರು ಹಾಗೂ ಬಿ.ಈಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಿಯದರ್ಶಿನಿ ಪ್ರಶಿಕ್ಷಣಾರ್ಥಿ ಹಾಗೂ ಬಂಡೆಮ್ಮ ನಿರೂಪಿಸಿದರು. ಲಲಿತಾ ಪ್ರಾರ್ಥನೆ ಗೀತೆಯನ್ನು ಹಾಡಿದರು. ವನಿತಾ ಸ್ವಾಗತಿಸಿದರು. ಅಂಬಿಕಾ ವಂದಿಸಿದರು.

