ತಾಳಿಕೋಟಿ: ಪಟ್ಟಣದಲ್ಲಿ ಈಗಾಗಲೇ ಪುರಸಭೆಯಿಂದ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣಕ್ಕೆ ಕಾಯ್ದಿರಿಸಿದ ನಿವೇಶನವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ಥಾಂತರಿಸಿ ಭವನ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು ಹಾಗೂ 19ನೇ ವಾಡಿನ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಬಾಬು ಜಗಜೀವನ್ ರಾಮ್ ಯುವಕ ಸಂಘ ಹಾಗೂ ಶಿವಶರಣ ಮಾದರ ಚೆನ್ನಯ್ಯ ಸಮಾಜದ ಪದಾಧಿಕಾರಿಗಳು ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಪಟ್ಟಣದ ಶಿವಶರಣ ಮಾದರ ಚೆನ್ನಯ್ಯ ಸಮಾಜದ ಬಾಂಧವರಿಗೆ ಸಭೆ ಸಮಾರಂಭ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಮುದಾಯ ಭವನದ ಅಗತ್ಯವಿದ್ದು ಈ ಕುರಿತು ನೀಡಿದ ಮನವಿಗೆ ಪುರಸಭೆಯವರು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಲು ಠರಾವು ಮಾಡಿದ್ದು ಆದಷ್ಟು ಬೇಗ ನಿವೇಶನವನ್ನು ಸಮಾಜ ಕಲ್ಯಾಣ ಇಲಾಖೆಗೆ ಪೂರೈಸಬೇಕು ಹಾಗೂ ಪಟ್ಟಣದ ವಾರ್ಡ್ ನಂಬರ್ 19ರಲ್ಲಿ ಮೂಲಸೌಕರ್ಯಗಳ ಕುರಿತು ಸಾಕಷ್ಟು ಸಮಸ್ಯೆಗಳಿವೆ ಇಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದು ಅದು ಬಳಕೆಯಲ್ಲಿ ಇಲ್ಲ, ಸಮೀಪದಲ್ಲಿಯೇ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬಡವರಿಗೆ ವಸತಿ ಗೃಹಗಳನ್ನು ನಿರ್ಮಾಣ ಮಾಡುತ್ತಿದ್ದು ಇಲ್ಲಿವರೆಗೆ ಮುಗಿದಿಲ್ಲ ಇದರಿಂದ ಬಡವರಿಗೆ ಸಾಕಷ್ಟು ಅನಾನುಕೂಲ ಆಗುತ್ತಿದೆ. ಇಲ್ಲಿರುವ ಅಂಗನವಾಡಿ ಕೇಂದ್ರದ ಕೆಲವು ಸಮಸ್ಯೆಗಳಿವೆ ಇವುಗಳನ್ನು ಆದಷ್ಟು ಬೇಗ ಪರಿಹರಿಸದೆ ಹೋದಲ್ಲಿ ನಾವು ಬರಲಿರುವ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದವರು ಭಾಗವಹಿಸದೆ ಅದನ್ನು ನಿರಾಕರಿಸಿ ಅಂದಿನಿಂದಲೇ ಧರಣಿ ಸತ್ಯಾಗ್ರ ಆರಂಭಿಸುತ್ತೇವೆ ಎಂದು ತಿಳಿಸಲಾಗಿದೆ. ಈ ಸಮಯದಲ್ಲಿ ಸಮಾಜದ ಪ್ರಮುಖರಾದ ಬಸ್ಸು ಮಾದರ, ರಾಮಣ್ಣ ಕಟ್ಟಿಮನಿ, ದೇವೇಂದ್ರ ಹಾದಿಮನಿ, ಗೋಪಾಲ ಕಟ್ಟಿಮನಿ, ಯಮನಪ್ಪ ಕಟ್ಟಿಮನಿ, ಬಾಗಪ್ಪ ಬಿಳೇಬಾವಿ, ದೇವಪ್ಪ ತುಂಬಿಗಿ ಮಹಾದೇವ ಅಸ್ಕಿ, ಕಾಶಿನಾಥ ಕಟ್ಟಿಮನಿ, ಯಮನಪ್ಪ ಹಿರೂರ, ರಮೇಶ ಮಾದರ, ಕಾಳಪ್ಪ ಮಿಣಜಗಿ,ಪರಸಪ್ಪ ತಾಳಿಕೋಟಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *