ಸಿಂಧನೂರು ಮಾರ್ಚ್ 26: ತಾಲೂಕಿನ ಸಮೀಪದ ಪುನರ್ವಸತಿ ಕೇಂದ್ರದ ಬಾದರ್ಲಿ ಬಸವನಗೌಡ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ತಾಯಿಂದಿರಿಗೆ ಪೌಷ್ಟಿಕ ಆಹಾರದ ಮಹತ್ವ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದ ಕುರಿತು ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ. ಮಗುವಿನ ಆರೈಕೆ ಮಾಡುವುದು ಬಹಳ ಮಹತ್ವದ್ದು ಹುಟ್ಟಿದ ಅರ್ಧ ಗಂಟೆಯಿಂದ ಆರು ತಿಂಗಳು ವರೆಗೆ ತಾಯಿ ಎದೆ ಹಾಲು ಬಹಳ ಮಹತ್ವದ್ದು ಮಗುವಿಗೆ ಸರಿಯಾದ ರೀತಿಯಲ್ಲಿ ಎದೆ ಹಾಲುಣಿಸುವುದು ಮಗುವಿನ ಆರೋಗ್ಯದ ಬೆಳವಣಿಗೆ ಸಹಕಾರಿ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬೆಳವಣಿಗೆ ಅಗತ್ಯವಾಗಿದೆ ತಾಯಿಯ ಮೊದಲ ಗಿಣ್ಣು ಹಾಲು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ನಂತರ ಮಾತನಾಡಿದ ನಿಂಗಮ್ಮ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಮಗುವಿನ ಆರೋಗ್ಯದ ಬೆಳವಣಿಗೆ ಆರು ತಿಂಗಳು ಕಾಲ ಎದೆ ಹಾಲು ಅವಶ್ಯಕವಾಗಿದೆ ಆರು ತಿಂಗಳು ನಂತರದ ದಿನಗಳಲ್ಲಿ ಮಕ್ಕಳಿಗೆ ಎದೆ ಹಾಲು ಜೊತೆಯಲ್ಲಿ ಲಘುವಾದ ಪೌಷ್ಟಿಕ ಆಹಾರ ಅಗತ್ಯವಿದೆ ಹಾಲಿನ ಜೊತೆಯಲ್ಲಿ ದ್ರವ ರೂಪದ ಅಹಾರವನ್ನು ಕೊಡುವುದು ಬಹಳಷ್ಟು ಅವಶ್ಯಕವಾಗಿದೆ ಬಾಲ್ಯದಲ್ಲಿ ಮಕ್ಕಳು ಆರೋಗ ಬೆಳವಣಿಗೆ ಜೊತೆಯಲ್ಲಿ ಬಾಲ್ಯವಸ್ಥೆ ಬರುವ ಕಾರ್ಯಗಳನ್ನು ತಡೆಗಟ್ಟಲು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ಕಡ್ಡಾಯವಾಗಿ ಕೊಡಸಿಬೇಕು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿ ಬಹಳಷ್ಟು ಅವಶ್ಯಕವಾಗಿದೆ ಸುರಕ್ಷಿತ ಹೆರಿಗೆ ಮತ್ತು ಸುರಕ್ಷಿತ ಬಾಲ್ಯ ನಮ್ಮದಾಗಿರಲಿ ತಾಯಿ ಮತ್ತು ಮಗುವಿನ ಆರೋಗ್ಯದ ಸುರಕ್ಷತೆಗಾಗಿ ಆಗಾಗ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳನ್ನು ಮತ್ತು ಆಶಾ ಕಾರ್ಯಕರ್ತರನ್ನು ಭೇಟಿ ಮಾಡಿ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಭೇಟಿಯಾಗಿ ಆರೋಗ್ಯ ತಪಾಸಣೆ ಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಾದ ಆದಿಲಕ್ಷ್ಮಿ . ವಿಜಯಲಕ್ಷ್ಮಿ. ಆಶಾ ಕಾರ್ಯಕರ್ತರದ ಲಕ್ಷ್ಮಿ. ತಾಯಂದಿರು ಹಾಗೂ ಸಾರ್ವಜನಿಕರು ಹಾಜರಿದ್ದರು


