ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು, ಪ್ರಾಥಮಿಕ ಆರೋಗ್ಯ ಕೇಂದ್ರ ದಡೆಸುಗೂರು ಇವರ ಸಂಯುಕ್ತ ಆಶ್ರಯದಲ್ಲಿ ಲಕ್ಷ್ಮಿ ಕ್ಯಾಂಪ್ ಉಪ ಕೇಂದ್ರ ವ್ಯಾಪ್ತಿಯ ಬಂಗಾರಿ ಕ್ಯಾಂಪ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ಹಾಕಲಾಗುವ ಹೆಚ್‌ಪಿವಿ ಲಸಿಕೆಯ ಕುರಿತು ಜಾಗೃತಿಗಾಗಿ ಏರ್ಪಡಿಸಿದ ಪೋಷಕರ ಸಭೆಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಮಾತನಾಡಿ, ಗರ್ಭಕಂಠ ಕ್ಯಾನ್ಸರ್ ಹೆಣ್ಣು ಮಕ್ಕಳ ಜೀವನದಲ್ಲಿ ಅತ್ಯಂತ ಗಂಭಿರವಾಗಿದ್ದು, ಗರ್ಭ ಕೊರಳಿಗೆ ಸಂಬಂಧಪಟ್ಟ ಆಗುವ ಸೊಂಕುಗಳಿಂದ ಸಂರಕ್ಷಿಸಲು ಎಚ್‌ಪಿ‌ವಿ ಲಸಿಕೆ ಅತ್ಯಂತ ಅಗತ್ಯವಾಗಿರುವುದರಿಂದ ತಪ್ಪು ವದಂತಿಗಳಿಗೆ ಆಸ್ಪದ ನೀಡದೆ, ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಸಹಕರಿಸಿ ಎಂದು ತಿಳಿಸಿದರು.
ನಂತರ ಮಕ್ಕಳಿಗೆ ಹೆಚ್‌ಪಿವಿ ಲಸಿಕೆ ಯಶಸ್ವಿಯಾಗಿ ಹಾಕಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಪಿಹೆಚ್‌ಸಿಓ ಶಾಹಿಲಾ ಬೇಗಂ, ಮುಖ್ಯ ಗುರುಗಳಾದ ಶಿವಲಿಂಗಮ್ಮ, ಆಶಾ ಕಾರ್ಯಕರ್ತೆ ಅಂಬಿಕಾ, ಪೋಷಕರಾದ ರಾಘವೇಂದ್ರ, ರಾಜು, ಮೀನಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *