ತಾಳಿಕೋಟೆ:
ತಾಲ್ಲೂಕಿನ ಗಡಿಸೋಮನಾಳ ಗ್ರಾಮದ ಹಿರೇಮಠದ ಗುರುಬಸವ ಮಹಾಮನೆಯಲ್ಲಿ ಗುರು ಬಸವಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜನಜಾಗೃತಿಗಾಗಿ ಬಸವಾದಿ ಸಕಲ ಶರಣರ 45ನೆಯ ಶರಣರ ಹಬ್ಬ ಮತ್ತು ಲಿಂಗೈಕ್ಯ ಇಂದುಧರ ಸ್ವಾಮೀಜಿ ಅವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮವು ಶುಕ್ರವಾರ ನೆರವೇರಿತು. ಮಾ.9 ರಿಂದ ವಿವಿಧ ಪ್ರವಚನಕಾರರಿಂದ ನಡೆದು ಬಂದ ಪ್ರವಚನ ಕಾರ್ಯಕ್ರಮ ಶುಕ್ರವಾರ ಮಹಾಮಂಗಲವಾಯಿತು.
ನಂತರ ನಡೆದ ಧರ್ಮಸಭೆಯಲ್ಲಿ ಟಿಗರಳ್ಳಿ ಮರುಳಶಂಕರದೇವರಮಠದ ಸಿದ್ಧಬಸವ ಕಬೀರ ಸ್ವಾಮೀಜಿ, ಮನಗೂಳಿ ವಿರಕ್ತಮಠದ ವೀರತೀಶಾನಂದ ಸ್ವಾಮೀಜಿ, ಕೋರವಾರ ಚೌಕಿಮಠದ ಮುರುಗೇಂದ್ರಸ್ವಾಮೀಜಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಶ್ರೀಮಠದ ಚಂದ್ರಶೇಖರಯ್ಯ ಹಿರೇಮಠ, ಸಮರ್ಥ ಹಿರೇಮಠ, ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ಪಾಟೀಲ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಠ, ವಿಜಯಪುರ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ನಾನಾಗೌಡ ಪಾಟೀಲ, ನಿವೃತ್ತ ನ್ಯಾಯಾಧೀಶ ಸಾಹೇಬಣ್ಣ ಮೇಲಗಲ್ಲ, ಶಿಕ್ಷಕಿ ಶಿವಲೀಲಾ ಮ.ಮುರಾಳ, ಮಹಾಂತೇಶ ಮುರಾಳ, ಸಂಗಣ್ಣ ಗುಳಗಿ, ರಾಮನಗೌಡ ಕುಂಟರೆಡ್ಡಿ, ಸಂಗೂ ಹರವಾಳ, ಮುತ್ತು ದೆಳೇಕರ, ಮೊದಲಾದವರಿದ್ದರು.
101 ಸಾಧು ಮಹಾತ್ಮರಿಗೆ ಹೊಸಬಟ್ಟೆ ಕಾಣಿಕೆ ನೀಡಿ ಸನ್ಮಾನಿಸಲಾಯಿತು.ನಂತರ ಸಾಮೂಹಿಕ ಮಹಾಪ್ರಸಾದ ಜರುಗಿತು. ಶಹಾಪುರದ ಸಾಹಿತಿ ಶಿವಣ್ಣ ಇಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರುದ್ರ ಹುಳ್ಳಿ ಸತ್ಯಂಪೇಠ ನಿರ್ವಹಿಸಿದರು. ಶಿಕ್ಷಕ ವೀರೇಶ ಕಾಜಗಾರ ಸ್ವಾಗತಿಸಿದರು

