ರಾಯಚೂರು ಮಾರ್ಚ್ 18 (ಕರ್ನಾಟಕ ವಾರ್ತೆ): ರಾಯಚೂರು ನಗರದ ವಾರ್ಡ ನಂ:32ರ ಅರಬ್ ಮೊಹಲ್ಲಾ ಕಾಲೋನಿಯಲ್ಲಿ ಬರುವ ಆಸ್ತಿ ಸಂ:12-11-136 ಮತ್ತು 12-11-204ರಲ್ಲಿ ಅರಬ್ ಮೊಹಲ್ಲಾ ಮಸ್ಜಿದ್ ಅವರು ಧಾರ್ಮಿಕ ಉದ್ದೇಶಕ್ಕಾಗಿ ಪ್ರೇಯರ್ ಹಾಲ್ ಕಟ್ಟಡ ನಿರ್ಮಾಣ ಮಾಡಲು ಅರಬ್ ಮೊಹಲ್ಲಾ ಮಸ್ಜಿದ್ ಅರ್ಜಿದಾರರು ಅರ್ಜಿ ಸಲ್ಲಿಸಿದ್ದು, ಈ ಸ್ಥಳದಲ್ಲಿ ನಕ್ಷೆ ಪ್ರಕಾರ ಕಟ್ಟಡ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿರುವುದರಿಂದ ಇದಕ್ಕೆ ಅಕ್ಕ-ಪಕ್ಕದ ಹಾಗೂ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ ಈ ನೊಟೀಸ್ ಪ್ರಕಟಿಸಿದ (15) ದಿನಗಳ ಒಳಗಾಗಿ ದಾಖಲೆಳೊಂದಿಗೆ ಈ ಕಾರ್ಯಾಲಯಕ್ಕೆ ದೂರು ಸಲ್ಲಿಸತಕ್ಕದ್ದು, ಅವಧಿ ಮುಗಿದ ಮೇಲೆ ಆಕ್ಷೇಪಣೆ ತಕರಾರು ಸಲ್ಲಿಸಿದ್ದಲ್ಲಿ ಅದನ್ನು ಪರಿಗಣಿಸಲಾಗುವುದಿಲ್ಲವೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
