ತಾಳಿಕೋಟಿ: ಎಲ್ಲ ಧರ್ಮದ ಜನರ ನಡುವೆ ಸಾಮರಸ್ಯ ಬೆಳೆಸುವ ಆಶಯದಿಂದ ಇಫ್ತಾರ ಕೂಟಗಳನ್ನು ಅಸ್ಕಿ ಫೌಂಡೇಶನ್ ದಿಂದ ಆಯೋಜಿಸಲಾಗಿದೆ ಎಂದು ಪೌಂಡೇಶನ್ ಉಪಾಧ್ಯಕ್ಷ ವಿರೇಶ ಅಸ್ಕಿ ಹೇಳಿದರು. ತಾಲೂಕಿನ ಬಾವೂರ ಗ್ರಾಮದಲ್ಲಿ ಪವಿತ್ರ ರಮಜಾನ ಮಾಸದ ನಿಮಿತ್ಯ ಅಸ್ಕಿ ಫೌಂಡೇಶನದಿಂದ ಆಯೋಜಿಸಿದ ಸೌಹಾರ್ದ ಇಫ್ತಾರ ಕೂಟ ಕಾರ್ಯಕ್ರಮದಲ್ಲಿ ಅವರು ಮಂಗಳವಾರ ಮಾತನಾಡಿದರು. ಶ್ರಾವಣ ಮಾಸ ಹಿಂದುಗಳಿಗೆ ಹಾಗೂ ರಮಜಾನ್ ತಿಂಗಳು ಮುಸ್ಲಿಂ ಸಮಾಜದವರಿಗೆ ಪವಿತ್ರವಾದ ದಿನಗಳು ಎಲ್ಲರಲ್ಲಿ ಹರಿಯುವ ರಕ್ತ ಒಂದೇ ನಾವೆಲ್ಲರೂ ಸಹೋದರತ್ವ ಭಾವನೆಯಿಂದ ಬದುಕಬೇಕಾಗಿದೆ. ಧರ್ಮ ಮತ್ತು ಆಚರಣೆಗಳು ಭಿನ್ನವಾಗಿದ್ದರೂ ನಾವೆಲ್ಲರೂ ಮನುಷ್ಯರು ನಾವೆಲ್ಲರೂ ಒಂದೇ ಎಂಬ ಭಾವನೆ ಮುಖ್ಯವಾಗಿದೆ ಎಂದರು. ಸಮಾಜ ಸೇವಕರಾದ ಸಿ.ಬಿ.ಅಸ್ಕಿ ಅವರು ಜಾತಿ ಮತ ಭೇದವಿಲ್ಲದೆ ಎಲ್ಲ ಸಮಾಜದ ಜನರ ಸೇವೆಯನ್ನು ಮಾಡುತ್ತಿದ್ದಾರೆ.ಕಳೆದ 8 ವರ್ಷಗಳಿಂದ ಇಂಥಹ ಸೌಹಾರ್ದ ಇಫ್ತಾರ ಕೂಟಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ ಇದಕ್ಕೆ ನಿಮ್ಮೆಲ್ಲರ ಸಹಕಾರವೇ ಕಾರಣವಾಗಿದೆ. ಮುಂದೆಯೂ ನಿಮ್ಮ ಈ ಪ್ರೀತಿ ಸಹಕಾರ ಇದೇ ರೀತಿ ಆಗಿರಲಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ಅಕ್ಬರ್ ಪಟೇಲ ಬಿರಾದಾರ, ಸಯ್ಯದ್ ಪಟೇಲ ಬಿರಾದಾರ,ಶಿವರಾಜ ಗುಂಡಕನಾಳ, ಖಾದೀರಸಾಬ ನಿಡುಗುಂದಿ, ಅಲ್ಲಾಭಕ್ಷ ಬಿರಾದಾರ,ಹುಮಾಯೂನ ತಾರಘರ, ಆಸೀಫ ಕೆಂಭಾವಿ,ಗೋಪಾಲ ಕಟ್ಟಿಮನಿ, ರಾಜೇಶಸಾಬ ನಿಡುಗುಂದಿ, ಬಸೀರ ಅಹ್ಮದ್ ಬೀಳಗಿ ಹಾಗೂ ಮೆಹಬೂಬ ಕಮತಗಿ ಮತ್ತಿತರರು ಇದ್ದರು.


