ಕವಿತಾಳ:
ಗೃಹ ಬಳಕೆ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ, ಆದರೇ ನಗರ ಪ್ರದೇಶದ ಜನತೆಗೆ ಗೃಹ ಬಳಕೆಗೆ ೩೦ ದಿನಗಳ ಅಂತರ ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ೪೫ ದಿನಗಳ ಅಂತರದಲ್ಲಿ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಬುಕಿಂಗ್ ಮಾಡಿ ಅನಿಲ ಸಿಲೇಂಡರ್ ಪಡೆಯಬಹುದಾಗಿದೆ, ಗ್ರಾಹಕರು ಸಹಕರಿಸುವ ಮೂಲಕ ತಮ್ಮ ಗ್ಯಾಸ್ ಸಿಲೆಂಡರ್ ಬುಕ್ ಮಾಡಿಕೊಂಡು ಪಡೆಯಲು ಯಾವುದೆ ತೊಂದರೆ ಇಲ್ಲ’ಎಂದು ಅಡುಗೆ ಅನಿಲ ವಿತರಕರು ತಿಳಿಸಿದ್ದಾರೆ.
ಗ್ರಾಹಕರು ಅನಗತ್ಯ ಆತಂಕ ಮತ್ತು ಅವಸರ ಪಡುವ ಅಗತ್ಯ ಇಲ್ಲ ತಮ್ಮ ಬುಕಿಂಗ್ ದಿನಾಂಕಕ್ಕೆ ತಕ್ಕಂತೆ ಸಿಲೆಂಡರ್ ವಿತರಿಸಲಾಗುವುದು ಹಾಗೂ ಹೋಟಲ್, ಶಾಲೆಗಳಿಗೆ ಮತ್ತು ಇನ್ನಿತರ ಕಮರ್ಷಿಯಲ್ ಬಳಕೆಗೆ ಕಮರ್ಷಿಯಲ್ ಗ್ಯಾಸ್ ವಿತರಿಸಲಾಗುವುದು’ ಎಂದು ಹೇಳಿದ್ದಾರೆ.
`ಕಾಳ ಸಂತೆಯಲ್ಲಿ ಮಾರಾಟ ಮಾಡುವವರಿಗೆ ಬುಕಿಂಗ್ ಕಡ್ಡಾಯಗೊಳಿಸಿದ್ದರಿಂದ ತೊಂದರೆ ಯಾಗಿದ್ದು ಅಡುಗೆ ಅನಿಲವಿತರಣೆ ಕುರಿತು ಇಲ್ಲಸಲ್ಲದ ಸುದ್ದಿಗಳನ್ನು ಹರಡುತ್ತಿದ್ದು ಗ್ರಾಹಕರು ಯಾವುದಕ್ಕು ಕಿವಿಗೊಡಬೇಡಿ ಮತ್ತು ಎಲ್ಲರೂ ಬುಕಿಂಗ್ ಮಾಡುತ್ತಿರುವ ಕಾರಣ ಸರ್ವರ್ ಬ್ಯುಸಿ ಇರುತ್ತದೆ ಇದರಿಂದ ಬುಕಿಂಗ್ ತಡವಾಗಬಹುದು ಆದ್ದರಿಂದ ಕಡ್ಡಾಯವಾಗಿ ಬುಕಿಂಗ್ ಮಾಡಿ ತಮ್ಮ ಬುಕಿಂಗ್ ಸಮಯ್ಕಕೆ ತಕ್ಕಂತೆ ಅಡುಗೆ ಅನಿಲ ಪಡೆಯಬಹುದಾಗಿದೆ’ ಎಂದು ಹೇಳಿದರು.

