2026-27 ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಅನುಮೋದನೆ ಹಾಗೂ ಕ್ರಿಯಾ ಯೋಜನೆಗಾಗಿ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಹಾಲ್ ಸಿದ್ದಪ್ಪ ಪೂಜಾರಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
30 ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 3497 ರಷ್ಟು ಕಾಮಗಾರಿಗಳಿಗೆ 330 ಕೋಟಿ ಗುರಿ ಹೊಂದಲಾಗಿದ್ದು, ಎಲ್ಲಾ ಅಧಿಕಾರಿಗಳು ಸರಿಯಾದ ಅಂಕಿ ಅಂಶಗಳನ್ನು ಕೊಡಬೇಕು, ತಪ್ಪಿದಲ್ಲಿ ಅನುದಾನ ಸಿಗುವುದು ಕಷ್ಡಕರ ನೀವು ಸರಿಯಾಗಿ ಅಂಕಿ-ಅಂಶಗಳನ್ನು ಕೊಟ್ಟಾಗ ಮಾತ್ರ ಜಿಲ್ಲಾ ಅಭಿವೃದ್ಧಿ ಯೋಜನಾ ಸಮಿತಿಯು ಸಕರತ್ಮಾಕವಾಗಿ ಸ್ಪಂದಿಸುತ್ತದೆ. ಇಲ್ಲದಿದ್ದರೆ ಅನುದಾನ ಸಿಗುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ವಾರ್ಷಿಕ ಕರಡು ಅಭಿವೃದ್ಧಿ ಯೋಜನಾ ಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದನ್ನ ಕಂಡ ಅವರು, ಗೈರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದರು.
ಈ ವೇಳೆ: ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಸಹಾಯಕ ನಿರ್ದೇಶಕ ಅಮರಗುಂಡಪ್ಪ ಇದ್ದರು.

