ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿಸೆಂಬರ್ 1 ರಿಂದ ಬಿಸಿಯೂಟ ನೌಕರರು ಕೇಂದ್ರ ಸಚಿವರ ಕಚೇರಿಗಳ ಮುಂದೆ ಅನಿರ್ಧಿಷ್ಟ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಸಿಐಟಿಯು ತಾಲೂಕು ಸಮಿತಿ ವತಿಯಿಂದ ಬಿಸಿಯೂಟ ಯೋಜನಾ ಅಧಿಕಾರಿ ಸಾಬಣ್ಣ ವಗ್ಗರ್ ಅವರಿಗೆ ತಿಳುವಳಿಕೆ ಪತ್ರ ನೀಡಲಾಯಿತು.
ನಗರದ ತಾಲೂಕು ಪಂಚಾಯತಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಸಿಐಟಿಯು ತಾಲೂಕು ಸಮಿತಿಯ ಪದಾಧಿಕಾರಿಗಳು ಸೇರಿ ಡಿಸೆಂಬರ್ 1 ರಿಂದ ಬಿಸಿಯೂಟ ಕೆಲಸವನ್ನು ನಿಲ್ಲಿಸಿ ಬೆಂಗಳೂರು, ತುಮಕೂರು, ಹುಬ್ಬಳ್ಳಿ, ಮತ್ತು ಮಂಡ್ಯ ಜಿಲ್ಲೆಯಲ್ಲಿ ಇರುವ ಕೇಂದ್ರ ಸಚಿವರ ಮನೆಯ ಮುಂದೆ ಅನಿರ್ಧಿಷ್ಟ ಹೋರಾಟ ಹಮ್ಮಿಕೊಂಡಿದ್ದು, ಪ್ರಮುಖವಾಗಿ 2009 ರಿಂದ ಕೇವಲ 600 ರೂ.ಗಳಿಗೆ ದುಡಿಸಲಾಗುತ್ತಿದ್ದು, ಮುಂಬರುವ ಬಜೆಟ್ ನಲ್ಲಿ ಕನಿಷ್ಠ ವೇತನ ನೀಡಬೇಕು.
ಈಗಾಗಲೇ 6 ಗಂಟೆಗೆ ಕೆಲಸದ ಅವಧಿಯ ಹೆಚ್ಚಳದ ಆದೇಶ ಹೊರಡಿಸಬೇಕು. ಯಾವುದೇ ಸ್ವರೂಪದಲ್ಲಿ ಬಿಸಿಯೂಟವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು. 10 ಸಾವಿರ ನಿವೃತ್ತ ವೇತನ ನೀಡಬೇಕು. ಪ್ರಮುಖವಾಗಿ ಐಎಲ್ ಸಿ ಶಿಫಾರಸ್ಸಿನಂತೆ ಉದ್ಯೋಗಸ್ಥರೆಂದು ಪರಿಗಣಿಸಿ ಶಾಸನಬದ್ಧ ಸವಲತ್ತುಗಳನ್ನು ಕೊಡಬೇಕು. ಕೆಪಿಎಸ್ ಶಾಲೆಗಳ ಪರಿಕಲ್ಪನೆಯಿಂದ ಶಾಲೆಗಳು ವಿಲೀನವಾದಾಗ ಬಿಸಿಯೂಟ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಅವರ ಕೆಲಸಕ್ಕೆ ಭದ್ರತೆ ಖಚಿತ ಪಡೆಸಬೇಕು ಬಿಸಿಯೂಟ ನೌಕರರಿಗೆ ಆರೋಗ್ಯ ವಿಮೆ ಜಾರಿಗೆ ಗೊಳಿಸಬೇಕೆಂದು ತಿಳುವಳಿಕೆ ಪತ್ರ ಸಲ್ಲಿಸಲಾಯಿತು.
ಈ ವೇಳೆ: ಜಿಲ್ಲಾಧ್ಯಕ್ಷರಾದ ರೇಣುಕಮ್ಮಾ ಕೆ, ತಾಲೂಕು ಅಧ್ಯಕ್ಷರಾದ ವಿಶಾಲಾಕ್ಷಮ್ಮ, ಕಾರ್ಯದರ್ಶಿ ಶರಣಮ್ಮ ಪಾಟೀಲ್, ಅನುಸೂಯಾ ಕಲ್ಮಂಗಿ, ಶಾರದಾ ತುರ್ವಿಹಾಳ, ಶ್ರೀದೇವಿ ಸುಕಾಲಪೇಟೆ, ವಾಣಿ ಎಸ್.ಖಾದ್ರಿ, ಶರಣಮ್ಮ ಜಿ, ಸಮುದಾಯದ ಎಂ.ಗೋಪಾಲಕೃಷ್ಣ, ಸೇರಿದಂತೆ ಅನೇಕ ಬಿಸಿಯೂಟ ನೌಕರರು ಇದ್ದರು.

