ಜವಳಗೇರಾ : ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2025-26 ಕಾರ್ಯಕ್ರಮ ನಡೆಯಿತು.
ಜವಳಗೇರಾ ಕ್ಲಸ್ಟರ್ ವತಿಯಿಂದ 2025 26 ನೇ ಸಾಲಿನ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ದಿನಾಂಕ 27-11-2025 ರಂದು ಶ್ರೀ ದೊಡ್ಡ ಬಸವರಾಜ್ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಪಂಚಾಯಿತಿ ಅಧ್ಯಕ್ಷರಾದಂತ ನಾಗಲಿಂಗಪ್ಪ ವಹಿಸಿಕೊಂಡರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಸವಲಿಂಗಯ್ಯ ಕೆಪಿಎಸ್ ಕಾಲೇಜು ಜವಳಗೇರಾ ಇವರು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಇಂತಹ ಹಂತದಲ್ಲಿ ತಮ್ಮ ಹಸಜ ಪ್ರತಿಭೆಯನ್ನು ಹೊರ ಹಾಕಿ ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಎಡೆಗೆ ಹೆಜ್ಜೆ ಇಡಬೇಕು ಎಂದು ಹೇಳಿದರು. ಮತ್ತು ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷರಾದ ರಾಮಣ್ಣ ಬೋವಿ ಭಾಗವಹಿಸಿ ಕಾರ್ಯಕ್ರಮ ಸುಗಮವಾಗಿ ನಡೆಯಲು ಎಲ್ಲಾ ಸಹಕಾರವನ್ನು ನೀಡಿದರು ಮತ್ತೋರ್ವ ಎಸ್ ಡಿ ಎಂ ಸಿ ಸದಸ್ಯರಾದ ಆರೋಗ್ಯಪ್ಪ ( ರಂಗಪ್ಪ) ಭಾಗವಹಿಸಿ ಮಾತನಾಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸಂಭ್ರಮ ಭರಿತವಾಗಿ ನಮ್ಮ ಊರಿನಲ್ಲಿ ಜರುಗುತ ಇರುವುದು ನಮ್ಮ ಹೆಮ್ಮೆ ಎಂದು ತಿಳಿಸುತ್ತಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಇಂಥ ವೇದಿಕೆಯನ್ನು ಉಪಯೋಗಿಸಿ ಇನ್ನು ಎತ್ತರಕ್ಕೆ ಮುಂದಿನ ದಿನಗಳಲ್ಲಿ ಬೆಳೆಯಬೇಕಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯವಾಗಿ ಸಾಂಸ್ಕೃತಿಕ ನೃತ್ಯ ಮತ್ತು ಕಲಾತ್ಮಕ ಪ್ರದರ್ಶನ ನಡೆದವು ಮತ್ತು ಹಾಡು ಗುಂಪು ನೃತ್ಯ ನಾಟಕ ಮತ್ತು ಪ್ರತಿಭಾ ಪ್ರದರ್ಶನಗಳು ಜರುಗಿದವು.
ಕಾರ್ಯಕ್ರಮದಲ್ಲಿ ಊರಿನ ಗುರುಹಿರಿಯರು, ಕಲಾಭಿಮಾನಿಗಳು , ಶಾಲೆಯ ಹಳೆಯ ವಿದ್ಯಾರ್ಥಿ ಗಳು ಎಸ್ ಡಿ ಎಂ ಸಿ ಉಪಾಧ್ಯಕ್ಷರು ಮತ್ತು ಸದಸ್ಯರು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಅತ್ಯಂತ ಉತ್ಸಾಹಭರಿತವಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು


