ಮಾನ್ವಿ: ಪಟ್ಟಣದ ಕಲ್ಮಠದ ಪೂಜ್ಯ ಶ್ರೀ ವಿರೂಪಾಕ್ಷ ಶಿವಾಚಾರ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಸಭಾಂಗಣದಲ್ಲಿ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನ ಅಂಗವಾಗಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ರಿಮ್ಸ್ ರಕ್ತ ಭಂಡರಾ,ಹೆಚ್,ಡಿ.ಎಫ್.ಸಿ.ಬ್ಯಾಂಕ್ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಸ್ವಯಂ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿ ತಾ.ಆರೋಗ್ಯಧಿಕಾರಿ ಡಾ.ಶರಣಬಸವರಾಜು ಮಾತನಾಡಿ ಇದುವರೆಗೂ ಕೂಡ ರಕ್ತವನ್ನು ಕೃತಕವಾಗಿ ತಯಾರಿಸುವುದಕ್ಕೆ ವೈದ್ಯ ವಿಜ್ಞಾನ ಶಾಸ್ತ್ರ ದಿಂದ ಸಾಧ್ಯವಾಗಿಲ್ಲ ಅದ್ದರಿಂದ ಪ್ರತಿ ಆರೋಗ್ಯ ವಂತ ಮನಷ್ಯನ ದೇಹದಲ್ಲಿರುವ 5ರಿಂದ 6 ಲೀಟರ್ ರಕ್ತದಲ್ಲಿ 3ನೂರು ಎಂ.ಎಲ್.ರಕ್ತವನ್ನು ದಾನವಾಗಿ ನೀಡುವುದರಿಂದ ಆರೋಗ್ಯದ ಮೇಲೆ ಯಾವ ಪರಿಣಾಮವು ಉಂಟಾಗುವುದಿಲ್ಲ ಕೇಲವೆ ದಿನಗಳಲ್ಲಿ ರಕ್ತ ಮರು ಉತ್ಪತ್ತಿಯಾಗುತ್ತದೆ ಅದ್ದರೆ ನೀವು ದಾನವಾಗಿ ನೀಡುವ ರಕ್ತದಿಂದ ಅತ್ಯವಸರ ಪರಿಸ್ಥಿತಿಯಲ್ಲಿರುವ ರೋಗಿಗಳ ಪ್ರಾಣವನ್ನು ಉಳಿಸಬಹುದಾಗಿದೆ ಇಂದಿನ ದಿನಗಳಲ್ಲಿ ರಕ್ತದಿಂದ ಪ್ಲಾಸ್ಮ,ಬಿಳಿ ರಕ್ತ ಕಣಗಳನ್ನು, ಬೆರ್ಪಡಿಸಿ ಅಗತ್ಯವಿರುವವರಿಗೆ ನೀಡಿ ಜೀವ ಉಳಿಸುವುದಕ್ಕೆ ಸಾಧ್ಯವಾಗುತ್ತದೆ ಅದ್ದರಿಂದ ಪ್ರತಿ ಯೊಬ್ಬರು ಕೂಡ ಸಾಮಾಜಿಕ ಜವಬ್ದಾರಿಗೆ ಅನುಗುಣವಾಗಿ ರಕ್ತವನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ನೀಡಬಹುದಾಗಿದೆ ಎಂದು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು,ವೈದ್ಯರು,ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ,ಜೀವನೇಶ್ವರಯ್ಯ,ಉಪಾಪ್ರಾಚಾರ್ಯರಾದ ಡಾ,ಸುಮಂಗಲ ಹೆಚ್.ಎಂ.,ಉಮಶಂಕರ ಹೆಚ್.ಎಂ. ಡಾ.ಹಿರೇಮಠ ಶಿವರಾಜ ಒಡೆಯರ್, ಹೆಚ್,ಡಿ.ಎಫ್.ಸಿ.ಬ್ಯಾಂಕ್‌ನ ಮಾನ್ವಿ ಶಾಖಾ ವ್ಯವಸ್ಥಪಕರಾದ ಸುದೀಪ್ ಸೌದ್ರಿ, ಕಾರ್ಯನಿರ್ವಹಕ ವ್ಯವಸ್ಥಾಪಕರಾದವೀರೇಶ, ರಿಮ್ಸ್ ರಕ್ತ ಭಂಡರಾದ ವೈದ್ಯರಾದ ಹಮ್ಮಿದ್ ಹುಸೇನ್,ಸೇರಿದಂತೆ ಕಾಲೇಜಿನ ವೈದ್ಯ ಉಪನ್ಯಾಸಕರು, ವೈದ್ಯ ವಿದ್ಯಾರ್ಥಿಗಳು,ಸಾರ್ವಜನಿಕರು ಭಾಗವಹಿಸಿದರು.
ಮಾನ್ವಿ: ಪಟ್ಟಣದ ಕಲ್ಮಠದ ಪೂಜ್ಯ ಶ್ರೀ ವಿರೂಪಾಕ್ಷ ಶಿವಾಚಾರ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಸಭಾಂಗಣದಲ್ಲಿ ತಾ.ಆರೋಗ್ಯಧಿಕಾರಿ ಡಾ.ಶರಣಬಸವರಾಜು ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *