ದೇವದುರ್ಗಾ : ದೇವದುರ್ಗಾ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಿಪಿಹೆಚ್‌ಎಫ್ ಜಿಇ ಹೆಲ್ತ್ ಕೇರ್ ಸಂಯುಕ್ತಾಶ್ರಯದಲ್ಲಿ ಉಚಿತ ಮಹಿಳಾ ಕ್ಷೇಮಾ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ಗಬ್ಬೂರ ವೈದ್ಯಾಧಿಕಾರಿ ಡಾ ಗೀತಾಂಜಲಿ ಉದ್ಘಾಟಿಸಿ ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿ ಒಬ್ಬ ವೈದ್ಯರು ಎಲ್ಲಾ ಕಾಯಿಲೆಗಳನ್ನ ತಪಾಸಣೆ ಮಾಡುತಿದ್ದರು, ಆದರೆ ಪಿಪಿಹೆಚ್‌ಎಫ್ ಜಿಈ ಹೆಲ್ತ್ ಕೇರ್ ಸಂಸ್ಥೆಯವರು ನುರಿತ ತಜ್ಞವೈದರನ್ನ ಗ್ರಾಮಕ್ಕೆ ಕರೆದು ಮಧ್ಯಾಹ್ನದವರೆಗೆ ಗ್ರಾಮಸ್ಥರಿಗೆ ಆರೋಗ್ಯ ಸೇವೆ ಕೊಡಿಸುತಿದ್ದಾರೆ. ಸಾವಿರಾರು ರೂ.ಖರ್ಚು ಉಳಿಸುವ ಕೆಲಸ ಮಾಡುತಿದ್ದಾರೆ. ಮಹಿಳಾ ವೈದ್ಯರಿಂದ ಆರೋಗ್ಯ ತಪಾಸಣೆ , ಬಿಪಿ ,ಶುಗರ್ ,ಹಲ್ಲು ತಪಾಸಣೆ, ಕಣ್ಣು, ಹೆಚ್‌ಬಿ ಪರೀಕ್ಷೆ,ಎಲ್‌ಎಫ್‌ಟಿ/ಆರ್‌ಎಫ್‌ಟಿ,ಹೆಚ್‌ಬಿಎ೧ಸಿ ತಪಾಸಣೆ, ಮಾನಸಿಕ ಆಪ್ತ ಸಮಾಲೋಚಕರಿಂದ ಮಾಹಿತಿ ಮತ್ತು ಸಲಹೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಬಳಕೆ ಕುರಿತು ಮಾಹಿತಿ ನೀಡಲಾಗುತ್ತಿದೆ. ಇವೆಲ್ಲವೂ ಒಂದೆ ಕಡೆ ದೊರೆಯುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಹೇಳಿದರು.
ನಂತರ ರವಿ ಶುಕ್ಲಾ ಟಿಬಿ ಮೇಲ್ವಿಚಾರಕರು ಮಾತನಾಡಿ ಮನುಷ್ಯನಿಗೆ ಆರೋಗ್ಯಕ್ಕಿಂತ ದೊಡ್ಡದು ಮತ್ತೊಂದು ಇಲ್ಲ, ಪಿಪಿಹೆಚ್‌ಎಫ್‌ಜಿಇ ಸಂಸ್ಥೆಯವರು ಗ್ರಾಮೀಣ ಮಹಿಳೆಯರಿಗೆ ಉಚಿತ ಆರೋಗ್ಯ ಸೇವೆಯನ್ನಿಟ್ಟುಕೊಂಡು ಬಡಜನರ ಮಧ್ಯಮ ವರ್ಗದ ಜನರ ನೆರವಿಗೆ ಬಂದಿದ್ದಾರೆ ಎಂದರು. ಪಿಪಿಹೆಚ್‌ಎಫ್ ಜಿಇಹೆಲ್ತ್ ಕೇರ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕರು ಮಲೈಕಾ ಅಮೀನ ರವರು ಪ್ರಾಸ್ತವಿಕವಾಗಿ ಮಾತನಾಡಿ ಗ್ರಾಮೀಣ ಜನರ ಆರೋಗ್ಯ ಹಿತದೃಷ್ಠಿಯಿಂದ ನಮ್ಮ ಸಂಸ್ಥೆವತಿಯಿAದ ಮಹಿಳಾ ಕ್ಷೇಮಾ ತಪಾಸಣೆ ಶಿಬಿರಗಳನ್ನ ಕೈಗೊಂಡು ಪ್ರಾಥಮಿಕ ಹಂತದ ಕಾಯಿಲೆಗಳ ತಪಾಸಣೆ ಜೊತೆಗೆ ಸೂಕ್ತ ಸಲಹೆ ಮಾಡುತ್ತಿದ್ದೇವೆ,ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿ ಆರೋಗ್ಯ ತಪಾಸಣೆ ಮಾಡಿಕೊಂಡು ಈ ಶಿಬಿರ ಯಶಸ್ವಿಗೊಳಿಸಬೇಕು ಎಂದು ಜನರÀಲ್ಲಿ ಕೇಳಿಕೊಂಡರು.
ಈ ತಪಾಸಣೆ ಶಿಬಿರದಲ್ಲಿ ಭಾಗಿಯಾಗಿದ್ದ ಶಿಬಿರಾರ್ಥಿಗಳಿಗೆ ಆಭಾ ಕಾರ್ಡ ನೊಂದಣಿ, ಉಚಿತ ಮಹೆಂದಿ ಬಿಡಿಸಿ ಪೌಷ್ಟಿಕ ಆಹಾರದ ಸೇವನೆ ಕುರಿತು ಮಾಹಿತಿ ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಶಲೇಂದ್ರ ನೇತ್ರಾಧಿಕಾರಿ, ರವಿ ಶುಕ್ಲಾ ಟಿಬಿ ಮೇಲ್ವಿಚಾರಕರು, ಸುವರ್ಣ ಎನ್‌ಸಿಡಿ ಮೇಲ್ವಿಚಾರಕರು, ಶಮೀಮ್ ಬೇಗಂ ಫಾರ್ಮಸಿ ಅಧಿಕಾರಿ, ಶಿವಶರಣ ಎಲ್‌ಟಿಒ, ನರಸಿಂಹ ಎಲ್‌ಟಿಒ, ಬಸವ ಎಲ್‌ಟಿಒ, ರಾಮಕೃಷ್ಣ ಎಚ್‌ಐಒ, ಅಭಿಜಿತ್ ಸಿಎಚ್‌ಒ, ರವೀಂದ್ರ ಎಚ್‌ಐಒ, ಮೇಘನಾ, ಕೆಂಚಮ್ಮ, ರೇಖಾ, ನರ್ಸಿಂಗ್ ಅಧಿಕಾರಿ, ಭೀಮಣ್ಣ ಹಾಗೂ ಪಿಪಿಹೆಚ್‌ಎಫ್‌ನ ಸಿಬ್ಬಂಧಿ ನರಸಮ್ಮ ರಾಮಮೂರ್ತಿ ಪೂಜಾ,ಸಲ್ಮಾ ಹಾಗೂ ಆಶಾ ಕಾರ್ಯಕರ್ತರು ನೂರಾರು ಜನರು ಶಿಬಿರದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.

