ಅರಕೇರಾ : ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಏಕಾಗ್ರತೆ,ಬರೆದು ಅಭ್ಯಾಸ ಮಾಡುವುದು ನಿರಂತರ ಪರಿಶ್ರಮ ಅತ್ಯಗತ್ಯ ಕೇವಲ ಪುಸ್ತಕ ಜ್ಞಾನವಿದ್ದರೆ ಸಾಲದು ಮಕ್ಕಳಿಗೆ ಒಳ್ಳೆಯ ಸಂಸ್ಕಾರ- ಸಂಸ್ಕೃತಿ ಆಧಾರಿತ ಜೀವನ ಶಿಕ್ಷಣ ಸಿಗುವಂತಾಗಬೇಕೆAದು ಕೆ.ಅನಂತರಾಜನಾಯಕ ಅಭಿಪ್ರಾಯಪಟ್ಟರು.
ಅವರು ಅರಕೇರಾ ಪಟ್ಟಣದಲ್ಲಿನ ಶ್ರೀಸಿದ್ದಯ್ಯ ಹವಲ್ದಾರ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣ ಕ ಜೀವನದ ಒಂದು ಮಹತ್ವದ ಹಂತಕ್ಕೆ ವಿದಾಯ ಹೇಳಿ ಹೊಸ ಅಧ್ಯಾಯದತ್ತ ಹೆಜ್ಜೆ ಇಡುವ ಈ ಕ್ಷಣವನ್ನು ವಿದ್ಯಾರ್ಥಿಗಳ ಶೈಕ್ಷಣ ಕ ಸಾಧನೆ,ಶಾಲೆಯಲ್ಲಿ ಕಳೆದ ಅಮೂಲ್ಯ ಕ್ಷಣಗಳು ಮಕ್ಕಳಿಗೆ ಶಿಕ್ಷಣದೊಂದಿಗೆ ಜೀವನ ಮೌಲ್ಯ ಮಾನವೀಯ ಗುಣ ನಡೆತೆಗಳನ್ನು ಅಳವಡಿಸಿಕೊಳ್ಳಿ. ಶಿಕ್ಷಕರ ಮಾತನ್ನು ಚಾಚೂ ತಪ್ಪದೇ ಪಾಲಿಸಬೇಕು ೧೦ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ಉನ್ನತ ಸ್ಥಾನ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚಂದ್ರಶೇಖರ ಬಂಡಾರಿ ಉಪನಿರ್ದೇಶಕರು ಅಭಿವೃದ್ದಿ ಡಯಟ್ ಯರಮರಸ್ ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ನಾಗರಿಕರಾಗಲು ಸತತ ಪರಿಶ್ರಮ ಅಗತ್ಯ.ವಿದ್ಯಾರ್ಥಿ ಜೀವನ ಬಂಗಾರದ ಜೀವನ ಅದನನು ಸದುಪಯೋಗ ಪಡಿಸಿಕೊಳ್ಳಿ ಪರಿಕ್ಷೆಯನ್ನು ಧೈರ್ಯದಿಮದ ಎದುರಿಸಿ ಉನ್ನತ ಗುರಿಗಳನ್ನು ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಹೆಚ್ಚಿನ ಸಮಯವನ್ನು ನೀಡಬೇಕು .ಭಯದಿಂದ ಪರಿಕ್ಷೆಯನ್ನು ಬರೆಯದೆ ಸಂತೋಷದಿAದ ದೈರ್ಯದಿಂದ ಪರಿಕ್ಷೆಯನ್ನು ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದರು.ಪ್ರಾಸ್ತವಿಕವಾಗಿ ಹುಸೇನಬಾಷ ಮುಖ್ಯೋಪಾದಯ್ಯರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೆ.ಅನಂತರಾಜನಾಯಕರವರು ಶ್ರೀಸಿದ್ದಯ್ಯ ಹವಲ್ದಾರ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ, ಬಸವಲಿಂಗಯ್ಯಸ್ವಾಮಿ ಹಿರೇಮಠ,ಬಾಲರಾಜ, ಶಿವಕರಣ ತಂದೆ ಶರಣಯ್ಯಸ್ವಾಮಿ,ಅಭಿಮಾನ್ಯು, ಅಜೀತಕುಮಾರ ಶಾಖೆ, ಇಮ್ರಾನ್,ಸಮುದಾನಿ ಇವರನ್ನು ಸನ್ಮಾನಿಸಿಗೌರವಿಸಲಾಯಿತು.ಸಂದರ್ಭದಲ್ಲಿ ವೇದಿಕೆ ಮೇಲೆ ಸಿದ್ದಾರ್ಥ ಹವಲ್ದಾರ,ನಾಗರಾಜನಾಯಕ ಕರ್ನಾಳ ಮಾಜಿ ಎಸ್ ಡಿ ಎಂಸಿ ಅಧ್ಯಕ್ಷರು,ಸೂಗೂರೇಶ್ವರ ಎಸ್ ಗುಡಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಾದ್ಯಕ್ಷರು, ಮುಖ್ಯೋಪಾಧಯ್ಯರಾದ ಹುಸೇನಬಾಷ,ದೇವದತ್ತಾ ಉಪಸ್ಥಿತರಿದ್ದರು.ಸರಸ್ವತಿ ಭಾವಚಿತ್ರಕ್ಕೆ ಬಸಲಿಂಗಯ್ಯಸ್ವಾಮಿ ಹಿರೇಮಠ ಪೂಜೆ ಸಲ್ಲಿಸಿದರು. ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಶುಭಹಾರೈಸಿ ಮಕ್ಕಳಿಗೆ ನೆನೆಪಿನಕಾಣ ಕೆಯನ್ನು ವಿತರಿಸಲಾಯಿತು.
ಸ್ವಾಗತ ಪ್ರಾರ್ಥನೆ ಗೀತೆ ಬಾಲರಾಜ,ಕೊನೆಯಲ್ಲಿ ಇಮ್ರಾನ ವಂದಿಸಿದರು.
ಚಿತ್ರಸುದ್ದಿ ಸಂಖ್ಯೆ 7(೩) ಶ್ರೀಸಿದ್ದಯ್ಯ ಹವಲ್ದಾರ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ, ಅತಿಥಿ ಶಿಕ್ಷಕರಿಗೆ ಕೆ.ಅನಂತರಾಜನಾಯಕ ಸನ್ಮಾನಿಸಿ ಗೌರವಿಸಿದರು.

Leave a Reply

Your email address will not be published. Required fields are marked *