ಪೋತ್ನಾಳ : ಮಾನ್ವಿ ತಾಲೂಕಿನ ಉಟಕನೂರು ಶ್ರೀ ಅಡವಿಸಿದ್ದೇಶ್ವರ ಸುಕ್ಷೇತ್ರದ ಮುಂದಿನ ಜಾತ್ರೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗುತ್ತಿರುವ ನೂತನ ಮಹಾ ರಥ ಬೀದಿ ಕಾಮಗಾರಿಗೆ ಇಂದು ಪೂಜ್ಯ ಪೀಠಾಧಿಪತಿಗಳು ಷ.ಬ್ರ ಶ್ರೀ ಮರೀಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು ಭಕ್ತಿ–ಶ್ರದ್ಧೆಗಳಿಂದ ಪೂಜೆ ನೆರವೇರಿಸಿ ಅಧಿಕೃತ ಚಾಲನೆ ನೀಡಿದರು.

ಜಾತ್ರೆಯ ವೇಳೆ ಸಾಗುವ ಮಹಾ ರಥಕ್ಕೆ ಅನುಗುಣವಾಗಿ 520 ಅಡಿ ಉದ್ದ, 30 ಅಡಿ ಅಗಲ ಹಾಗೂ 3 ಅಡಿ ಆಳದಲ್ಲಿ ಗಟ್ಟಿಮುಟ್ಟಾದ ಸಿಸಿ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನು ಶ್ರೀಗಳು ತಿಳಿಸಿದರು. ಈ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಶ್ರೀ ಮಠದ ಸರ್ವ ಭಕ್ತರು ತನು–ಮನ–ಧನಗಳಿಂದ ಸೇವೆ ಸಲ್ಲಿಸಿ ಕೈಜೋಡಿಸಿರುವುದನ್ನು ಶ್ಲಾಘಿಸಿದ ಶ್ರೀಗಳು, ಈ ಭಕ್ತಿ–ಸಹಕಾರಕ್ಕೆ ಗ್ರಾಮದ ಅಧಿದೇವನ ಕೃಪೆ ಇರಲೆಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಠದ ಪರಮಭಕ್ತರಾದ ಡಾ. ಬಿ. ಬಸವರಾಜಪ್ಪ ಪೋತ್ನಾಳ, ಉಟಕನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಶ್ರೀಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *