ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ದೇವಸೂಗುರ ಗ್ರಾಮದ ಆರಾಧ್ಯ ದೈವ ಕ್ಷೇತ್ರಾಧಿಪತಿ ಶ್ರಿ ಸೂಗುರೇಶ್ವರ ಜಾತ್ರಾ ಮಹೋತ್ಸವ ಹಾಗೂ ಜೋಡು ರಥೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ದದ್ದಲ್ ಅವರು ಭಾಗಿಯಾಗಿ ದೇವರ ಆಶೀರ್ವಾದ ಪಡೆದರು.
ನವೆಂಬರ್ 26ರಂದು ನಡೆದ ಜಾತ್ರೋತ್ಸವದಲ್ಲಿ ಭಾಗಿಯಾದ ಶಾಸಕರು ಮಾತನಾಡಿ, ಶ್ರೀ ಸೂಗೂರೇಶ್ವರರ ಜೋಡು ರಥೋತ್ಸವವು ಅದ್ದೂರಿಯಾಗಿ ಶಾಂತಿಯುತವಾಗಿ ವಿಜೃಂಭಣೆಯಿಂದ ಜರುಗಲು ಸಹಕರಿಸಿದ ದೇವಸುಗೂರು ಸೇರಿದಂತೆ ಸುತ್ತಲಿನ ಎಲ್ಲ ಗ್ರಾಮಸ್ಥರಿಗೆ ವಂದನೆಗಳು ತಿಳಿಸುವೆ. ಶ್ರೀ ಸೂಗೂರೇಶ್ವರರ ಆಶೀರ್ವಾದವು ನಮ್ಮೆಲ್ಲರ ಮೇಲೆ ಸದಾಕಾಲ ಇರಲಿ. ಗ್ರಾಮದ, ಜಿಲ್ಲೆಯ, ರಾಜ್ಯದ, ದೇಶದ ಎಲ್ಲ ಜನತೆಗೆ ಸದಾಕಾಲ ಒಳಿತು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಮುಖಂಡರು, ಪೊಲೀಸ್ ಸೇರಿದಂತೆ, ಕಂದಾಯ, ಆರೋಗ್ಯ ಇಲಾಖೆ ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಇನ್ನೀತರರು ಇದ್ದರು
