ಮಾನ್ವಿ :
ರಾಯಚೂರು ಜಿಲ್ಲೆಯ ವಿಕಲಚೇತನರ ಹಕ್ಕು, ಕಲ್ಯಾಣ, ಸಬಲೀಕರಣ ಹಾಗೂ
ಸರ್ಕಾರಿ ಯೋಜನೆಗಳ ಅರಿವು ಮತ್ತು ಸಹಾಯವನ್ನು ತಲುಪಿಸುವ ಉದ್ದೇಶದಿಂದ
ಇತ್ತೀಚೆಗೆ ಪ್ರಾರಂಭವಾದ “ಸಂಕಲ್ಪ ವಿಕಲಚೇತನರ ಒಕ್ಕೂಟ – ರಾಯಚೂರು”
ಒಗ್ಗೂಡಿಸುವ, ಬೆಂಬಲಿಸುವ ಮತ್ತು ಸೇವೆ ನೀಡುವ ಸಮಾಜಮುಖಿ ವೇದಿಕೆಯಾಗಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಪ್ರಾರಂಭವಾದ ಸಂಕಲ್ಪ ವಿಕಲಚೇತನರ ಒಕ್ಕೂಟದ ನೂತನ ಲೋಗೋವನ್ನು
ಮಾನ್ವಿ ಕಲ್ಮಠದ ಪರಮ ಪೂಜ್ಯ ಶ್ರೀ ವಿರೂಪಾಕ್ಷ ಷ.ಬ್ರ. ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು
ಇಂದು ತಮ್ಮ ಅಮೃತಸ್ಥದಿಂದ ಉದ್ಘಾಟನೆ ಮಾಡಿದ್ದಾರೆ.
ಲೋಗೋವನ್ನು ಅನಾವರಣ ಮಾಡಿದ ಬಳಿಕ ಶ್ರೀಗಳು ಮಾತನಾಡಿ—
ಒಕ್ಕೂಟದ ಹೊಸ ಲೋಗೋ ಸಮಾಜಕ್ಕೆ ಸ್ಪಷ್ಟವಾದ ಸಂದೇಶ ನೀಡುತ್ತದೆ ಹಾಗೂ
ವಿಕಲಚೇತನರ ಸೇವೆ, ಸಮಾನತೆ ಮತ್ತು ಸಬಲೀಕರಣಕ್ಕೆ ಈ ಒಕ್ಕೂಟ ದಾರಿ ತೋರಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅದೇ, ಒಕ್ಕೂಟದ ಭವಿಷ್ಯದ ಎಲ್ಲ ಸಮಾಜಮುಖಿ ಕಾರ್ಯಕ್ರಮಗಳಿಗೆ
ತಮ್ಮ ಸಂಪೂರ್ಣ ಆಶೀರ್ವಾದ ಮತ್ತು ಬೆಂಬಲ ಇರುತ್ತದೆ ಎಂದು ಶ್ರೀಗಳು ಭರವಸೆ ನೀಡಿದರು.
ನಂತರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ್ ಚಲ್ಮಲ್ ರವರನ್ನು
ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಮಹಾಂತೇಶ ಸ್ವಾಮಿ ರೌಡುರ್, ಜಿ. ನಾಗರಾಜ್, ಹನುಮಂತ ಕೋಟಿ ಇದ್ದರು.

