Month: December 2025

ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪ್ರವೇಶ ಪ್ರಾರಂಭ; ಸದುಪಯೋಗಕ್ಕೆ ವಿದ್ಯಾರ್ಥಿಗಳಿಗೆ ಸಲಹೆ

ರಾಯಚೂರು ಡಿಸೆಂಬರ್ 24 (ಕರ್ನಾಟಕ ವಾರ್ತೆ): ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2026-27 ಸಾಲಿಗಾಗಿ ಸ್ನಾತಕೋತ್ತರ ಕೋರ್ಸಗಳಿಗೆ ಪ್ರವೇಶಾತಿ ಆರಂಭವಾಗಿದೆ. ವಿಶ್ವವಿದ್ಯಾಲಯದಿಂದ ಪ್ರಸ್ತುತ ಪಿಜಿ ಕೋರ್ಸ್ ಗಳಿಗೆ ಸಿಯುಇಟಿ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದ್ದು, ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ…

ಗ್ರಾಮೀಣ ಪ್ರದೇಶದಲ್ಲಿ ಡಿ.26ರಂದು ವಿದ್ಯುತ್ ವ್ಯತ್ಯಯ

ರಾಯಚೂರು ಡಿಸೆಂಬರ್ 24 (ಕರ್ನಾಟಕ ವಾರ್ತೆ): ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಗೆ ಬರುವ 110/11 ಕೆವಿ ವಡವಟ್ಟಿ ವಿದ್ಯುತ್ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಪ್ರಯುಕ್ತ ಡಿಸೆಂಬರ್ 26ರ ಬೆಳಗ್ಗೆ 10 ಗಂಟೆಯಿಂದ ಸಂಜೆ…

ಪಿಹೆಚ್.ಡಿ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ರಾಯಚೂರು ಡಿಸೆಂಬರ್ 24 (ಕರ್ನಾಟಕ ವಾರ್ತೆ): ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಹೆಚ್.ಡಿ ಅಧ್ಯಯನವನ್ನು ಪ್ರಾರಂಭಿಸಿರುವ ಅರ್ಹ ಹೊಸ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನ ಅಥವಾ ಫೆಲೋಶಿಪ್‌ಗಾಗಿ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.…

ರಾಯಚೂರು ಸಿಟಿಯ ವಿವಿಧೆಡೆ ಡಿ.26ರಂದು ವಿದ್ಯುತ್ ವ್ಯತ್ಯಯ

ರಾಯಚೂರು ಡಿಸೆಂಬರ್ 24 (ಕರ್ನಾಟಕ ವಾರ್ತೆ): ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ ಎಪಿಎಮ್‌ಸಿ ಯಾರ್ಡ ಉಪಕೇಂದ್ರದಲ್ಲಿ ಪರಿವರ್ತಕ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಡಿಸೆಂಬರ್ 26ರ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು…

ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ: ಕೆ.ವಿ.ಸುರೇಂದ್ರ ಕುಮಾರ್

ರಾಯಚೂರು ಡಿಸೆಂಬರ್ 24 (ಕರ್ನಾಟಕ ವಾರ್ತೆ): ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಗ್ರಾಹಕರು ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಕೆ.ವಿ.ಸುರೇಂದ್ರ ಕುಮಾರ್ ಅವರು ಹೇಳಿದರು.…

ತಾಲೂಕ ಮಟ್ಟದ ಅಧಿಕಾರಿಗಳ ತ್ರೈಮಾಸಿಕ ಕೆ ಡಿ ಪಿ ಸಭೆ

ತಾಳಿಕೋಟೆ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ತ್ರೈಮಾಸಿಕ ಕೆಡಿಪಿ ಸಭೆಯು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ವಿವಿದ ಿಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದ ಻ವರು ಸರ್ಕಾರದ ನಿರ್ದೇಶನ…

ಮನವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ

ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪಿ.ಯು. ಕಾಲೇಜ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ಮುಖಂಡರಾದ ಬಾಲಸ್ವಾಮಿ ಕೊಡ್ಲಿ ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿನ ಸಾಹಿತಿಗಳನ್ನು,ಸಾಹಿತ್ಯ ಪ್ರಕರಗಳನ್ನು ಜನರಿಗೆ ಪರಿಚಯಿಸುವುದರ…

ಡಿ.27ಕ್ಕೆ ಬಸವ ಗೀತೆ ಸತ್ಯ ಸಂವಾದ 9 ಸಂಪುಟಗಳ ಗುಚ್ಚ ಗ್ರಂಥ ಲೋಕಾರ್ಪಣೆ

ಮಾನ್ವಿ : ಪಟ್ಟಣದ ಬಿ.ವಿ.ಆರ್ ಇ-ಟೆಕ್ನೋ ಸ್ಕೂಲ್ ಆವರಣದಲ್ಲಿ ಡಿಸೆಂಬರ್ 27ರಂದು ಸಂಜೆ 5 ಗಂಟೆಗೆ ಶ್ರೀ ಬಸವ ಸೇವಾ ಪ್ರತಿಷ್ಠಾನ ಹಾಗೂ ಸುದ್ದಿಮೂಲ ದಿನಪತ್ರಿಕೆ ರಾಯಚೂರು, ಬಸವ ಕೇಂದ್ರ ಮಾನ್ವಿ, ಶರಣ ಸಾಹಿತ್ಯ ಪರಿಷತ್ತು ಮಾನ್ವಿ, ತಾಲೂಕಾ ಕನ್ನಡ ಸಾಹಿತ್ಯ…

ಅರಕೇರಾ: ತಾಲೂಕಿನ ಬಿ.ಗಣೇಕಲ್ ಗ್ರಾಮದ ಶ್ರೀ ಮಾರುತೇಶ್ವರ ದೇವರ ಹಾಲುಗಂಬ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ಅದ್ದೂರಿಯಾಗಿ ನಡೆಯಿತು. ಶ್ರೀ ಮಾರುತೇಶ್ವರ ದೇವರ ಜಾತ್ರಾ ಮಹೋತ್ಸವ ಎಳ್ಳ ಅಮವಾಸ್ಯೆಯ ಆರನೇ ದಿನ ನಡೆಯುವ ಹಾಲುಗಂಬ ಹತ್ತುವ ಸ್ಪರ್ಧೆಯಲ್ಲಿ ಚಿಕ್ಕ ಮಕ್ಕಳು, ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸತತ ಎರಡು ಗಂಟೆಗೂ ಅಧಿಕ ಸಮಯ ಹಾಲುಗಂಬ ಉತ್ಸವ ಸ್ಪರ್ಧೆ ನಡೆಯಿತು. ಒಬ್ಬರ ಮೇಲೆ ಒಬ್ಬರು ಹಾಲುಗಂಬ ಹತ್ತುತ್ತಾ ಕೆಳಗೆ ಜಾರಿ ಬೀಳುವ ದೃಶ್ಯಗಳನ್ನು ಕಂಡು ನೆರೆದಿದ್ದ ಯುವಕರು ಶಿಳ್ಳೆ, ಚಪ್ಪಾಳೆಗಳ ಮೂಲಕ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿದ್ದರು. ಹಲುಂಗಬಕ್ಕೆ ಎರಚುತ್ತಿದ್ದ ನೀರಿನ ರಸಭಸಕ್ಕೆ ಕಂಬ ಹತ್ತಲು ಹರಸಾಹಸ ಪಡುವಂತಾಯಿತು. ಬಸವರಾಜ ಪಿಲಿಗುಂಡ ಅವರ ಕಂಬ ಹತ್ತುವ ಮೂಲಕ ಪ್ರಥಮ ಸ್ಥಾನ ಪಡೆದರು. ಶ್ರೀ ಮಾರುತೇಶ್ವರ ದೇವಸ್ಥಾನದ ಸಮಿತಿಯವರು ಪ್ರಥಮ ಸ್ಥಾನ ಪಡೆದ ವ್ಯಕ್ತಿಗೆ ಬೆಳ್ಳಿ ಕಡಗ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನೂತನವಾಗಿ ತಯಾರಿಸಿದ ಹಾಲುಗಂಬವನ್ನು ಎಳ್ಳು ಅಮಾವಾಸ್ಯೆಯ ಮರುದಿನ ಶ್ರೀ ಮಾರುತೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಸ್ಥಾಪಿಸಲಾಯಿತು. ಬುಧವಾರ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಶ್ರೀ ಮಾರುತೇಶ್ವರ ಮೂರ್ತಿಗೆ ಎಲೆ ಪೂಜೆ ಜೊತೆಗೆ ವಿಶೇಷ ಪೂಜೆಗಳು ನಡೆದವು. ಸುತ್ತಲಿನ ತಾಂಡಾಗಳಿಂದ, ವಿವಿಧ ಗ್ರಾಮಗಳ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರುಗು ನೀಡಿದರು.

ಅರಕೇರಾ: ತಾಲೂಕಿನ ಬಿ.ಗಣೇಕಲ್ ಗ್ರಾಮದ ಶ್ರೀ ಮಾರುತೇಶ್ವರ ದೇವರ ಹಾಲುಗಂಬ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ಅದ್ದೂರಿಯಾಗಿ ನಡೆಯಿತು. ಶ್ರೀ ಮಾರುತೇಶ್ವರ ದೇವರ ಜಾತ್ರಾ ಮಹೋತ್ಸವ ಎಳ್ಳ ಅಮವಾಸ್ಯೆಯ ಆರನೇ ದಿನ ನಡೆಯುವ ಹಾಲುಗಂಬ ಹತ್ತುವ ಸ್ಪರ್ಧೆಯಲ್ಲಿ ಚಿಕ್ಕ…

ಸನ್ ರೈಸ್ ಶಿಕ್ಷಣ ಸಂಸ್ಥೆಯಿಂದ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಸನ್ಮಾನ.

ಸಿಂಧನೂರು : ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆ, ಬಹಳ ಮುಖ್ಯ, ಜೊತೆಗೆ ಶ್ರದ್ಧೆಯಿಂದ ಓದಿದಾಗ ಮಾತ್ರ ಏನಾದರೊಂದು ಸಾಧಿಸಬಹುದು. ನೀವು ಅಭ್ಯಾಸ ಮಾಡುತ್ತಿರುವ ನರ್ಸಿಂಗ್, ಪ್ಯಾರಾಮೆಡಿಕಲ್, ಜಿಎನ್ಎಮ್, ಹೀಗೆ ಅನೇಕ ಕೋರ್ಸ್ ಗಳನ್ನು ಕಲಿತು ಅನೇಕ ಉದ್ಯೋಗ ಸೃಷ್ಟಿಸಿಕೊಳ್ಳಬಹುದು.…