ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪಿ.ಯು. ಕಾಲೇಜ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ಮುಖಂಡರಾದ ಬಾಲಸ್ವಾಮಿ ಕೊಡ್ಲಿ ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿನ ಸಾಹಿತಿಗಳನ್ನು,ಸಾಹಿತ್ಯ ಪ್ರಕರಗಳನ್ನು ಜನರಿಗೆ ಪರಿಚಯಿಸುವುದರ ಜೋತೆಗೆ ನಾಡು ,ನುಡಿ,ಜಲ,ಬಾಷೆ ರಕ್ಷಣೆಯ ವಿಚಾರದಲ್ಲಿ ಸಾದ ಮುಂಚುಣಿಯಲ್ಲಿದ್ದು ಹೋರಾಟ ನಡೆಸುತ್ತ ಬಂದಿದೆ ನಮ್ಮ ರಾಜ್ಯದಲ್ಲಿ ಅನೇಕ ರಾಜ್ಯಗಳಿಂದ ಬಂದಿರುವ ಬಹುಬಾಷಿಕರನ್ನು ಕೂಡ ಸೌಹಾರ್ಧಯುತವಾಗಿ ಬದುಕುವುದಕ್ಕೆ ಅವಕಾಶ ನೀಡುವ ಮೂಲಕ ನಮ್ಮ ಕನ್ನಡಿಗರು ಸೌಹಾರ್ದತೆಗೆ ಹೆಸರಾಗಿದ್ದಾರೆ ಮುಂದಿನ ದಿನಗಳಲ್ಲಿ ಕ.ಸಾ.ಪ. ತಾಲೂಕು ಘಟಕವು ಗ್ರಾಮೀಣ ಭಾಗದಲ್ಲಿನ ಜನಪದರ ಸಾಹಿತ್ಯವನ್ನು ಜನಪದರನ್ನು ಪರಿಚಯಿಸುವ ಕಾರ್ಯವನ್ನು ಮಾಡಬೇಕು ಎಂದು ಕರೆ ನೀಡಿದರು.
ಕ.ಸಾ.ಪ. ತಾಲೂಕು ಅಧ್ಯಕ್ಷರಾದ ಶರಣಬಸವ ನೀರಮಾನ್ವಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ದತ್ತಿ ದಾನಿಗಳಿಂದ ದತ್ತಿಯನ್ನು ಪಡೆದು ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತಿಗಳನ್ನು ಹಾಗೂ ಕನ್ನಡ ಸಾಹಿತ್ಯವನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ. ನಮ್ಮ ಬದುಕಿನ ಬಾಷೆ ಮಾತೃಬಾಷೆ ಕನ್ನಡಕ್ಕೆ ಇಂದು ಹೆಚ್ಚಿನ ಅದ್ಯತೆಯನ್ನು ನೀಡಬೇಕಾಗಿದೆ ಅಂಗ್ಲ ಮಾಧ್ಯಮ ಶಿಕ್ಷಣ ನಮ್ಮ ವೃತ್ತಿಗೆ ಅನುಕೂಲವಾದರು ಕೂಡ ನಮ್ಮ ಮಾತೃಬಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.
ದಿ.ದ್ಯಾಸನೂರು ತಿಪ್ಪಣ್ಣಶೆಟ್ಟಿ, ದಿ.ಕು, ಸೌಮ್ಯ ದ್ಯಾಸನೂರು ಮಾನ್ವಿ ಸ್ಮಾರಕ ದತ್ತಿಗಳಾದ ಶಿಕ್ಷಣ ಮತ್ತು ಸ್ವಾತಂತ್ರ,ಶಿಕ್ಷಣ ಅಂದು ಮತ್ತು ಇಂದು ವಿಷಯ ಕುರಿತು.ನಿವೃತ್ತ ಕನ್ನಡ ಉಪನ್ಯಾಸಕರಾದ ರೇವಣಸಿದ್ದಯ್ಯ ಹಿರೇಮಠ ಉಪನ್ಯಾಸ ನೀಡಿ ವ್ಯಕ್ತಿಯನ್ನು ಪರಿಪೂರ್ಣವಾಗಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಬ್ಬ ವ್ಯಕ್ತಿ ಶಿಕ್ಷಣದಿಂದ ಮಾತ್ರ ಉನ್ನತವಾದ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ಪರಿಪೂರ್ಣವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯವಿದೆ ಇಂದಿನ ಅಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಕೂಡ ತಮ್ಮ ಆಯ್ಕೆಯ ವಿಷಯದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೆ ಅನೇಕ ಅವಕಾಶವಿದೆ ಶಿಕ್ಷಣದಿಂದ ಮಾತ್ರ ಜ್ಞಾನವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ದ್ಯಾಸನೂರುರಾಮಚಂದ್ರಶೆಟ್ಟಿ, ಉಪನ್ಯಾಸಕರಾದ ಸೈಯಾದ್ ಮಿನಾಜ್ ಉಲ್ ಹಸನ್ ,ಕಾ,ನಿ.ಪ.ತಾಲೂಕು ಅಧ್ಯಕ್ಷರಾದ ಅಶೋಕ ತಡಕಲ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ನಾಗಮಲ್ಲೇಶ, ಹಿರಿಯ ಮುಖಂಡರಾದ ಜಿ,ನಾಗರಾಜ ,ಮಹಿಮೂದಾಬೇಗಂ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಹಣಪಣ್ಣ ಚಂಡೂರು,ರವಿಶರ್ಮ,ಲಕ್ಷö್ಮಣ ಜಾನೇಕಲ್ ,ಚನ್ನಬಸವ ಮಾಡಗೀರಿ ಉಪನ್ಯಾಸಕರು, ಹನುಮಂತ ಕೋಟೆ, ಸೇರಿದಂತೆ ಇನ್ನಿತರರು ಇದ್ದರು.ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪಿ.ಯು. ಕಾಲೇಜ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ಮುಖಂಡರಾದ ಬಾಲಸ್ವಾಮಿ ಕೊಡ್ಲಿ ಉದ್ಘಾಟಿಸಿದರು.

