Category: ಜಿಲ್ಲಾ

ರಾಜ್ಯದ ಪೋಲಿಸ್ ಇಲಾಖೆಗೆ ಆದರ್ಶವಾಗಿದ್ದ ಮಧುಕರ್ ಶೆಟ್ಟಿ ಪುಣ್ಯತಿಥಿ ಆಚರಣೆ

ಕವಿತಾಳ: ಡಿ 30 ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಪುಣ್ಯತಿಥಿ ಕವಿತಾಳ ಪೋಲಿಸ್ ಠಾಣೆಯಲ್ಲಿ ಆಚರಿಸಲಾಗಿದೆ. ಅನಾರೋಗ್ಯದಿಂದ ಹಠಾತ್ ನಿಧನರಾದ ಅವರು ತಮ್ಮ ಕರ್ತವ್ಯವನ್ನು ಅತ್ಯುತ್ತಮ ದಕ್ಷತೆ, ಶಿಸ್ತಿನೂಡಿ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದ ರಾಜ್ಯದ ಹೆಮ್ಮೆಯ…

ಕವಿತಾಳ: ಶಂಕ್ರಪ್ಪ ಯಡವಲ್ ನೆನಪಿನಲ್ಲಿ ಸೇವಾ ಕಾರ್ಯ

ಕವಿತಾಳ: ಡಿ 30 ಪಟ್ಟಣದಲ್ಲಿ ಇಂದು ದಿವಂಗತ ಶಂಕ್ರಪ್ಪ ಯಡವಲ್ ನೊಲಕೊಳ ಅವರ ಮೊದಲನೇ ಪುಣ್ಯತಿಥಿಯ ಅಂಗವಾಗಿ ಶಿವಶಂಕ್ರಪ್ಪ ನೆಲಕೊಳ ಸೇವಾ ಸಂಸ್ಥೆ (ರಿ) ವತಿಯಿಂದ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ನಡೆಯುವ ಮೂಲಕ ಸಾರ್ಥಕತೆ ಪಡೆದವು. ಈ ಸಂದರ್ಭದಲ್ಲಿ ಪಟ್ಟಣದ ನವ…

ಮಾನವಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವತಿಯಿಂದ ಕುವೆಂಪು ಜನ್ಮದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಾನ್ವಿ,ಡಿ. 29-ತಾಲೂಕಿನ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪದಗ್ರಹಣ ಕಾರ್ಯಕ್ರಮವು ಕುವೆಂಪು ಅವರ ಜನ್ಮದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮುಖಾಂತರ ಆರಂಭವಾಯಿತು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು…

ಬಂಗಾರದ ಅಂಗಡಿ ಮಾಲೀಕರೇ ಎಚ್ಚರ..! ನಿಮ್ಮ ಅಂಗಡಿಗೆ ಬಂತು ಪೊಲೀಸ್ ನೋಟಿಸ್!

ಬಳಗಾನೂರು,ಡಿ,29:- ರಾಯಚೂರು ಜಿಲ್ಲೆಯ ಬಳಗಾನೂರು ಪಟ್ಟಣದಲ್ಲಿ ಇಂದು ಪೊಲೀಸರು ಬಂಗಾರದ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಕಳ್ಳತನದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ,ಬಳಗಾನೂರು ಠಾಣೆಯ ಆರಕ್ಷಕ ಉಪ ನಿರೀಕ್ಷಕ ಎರಿಯಪ್ಪ ಅಂಗಡಿ,ಸಹಾಯಕ…

ಜಿಲ್ಲೆಗೆ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ

ರಾಯಚೂರು:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ 2024-25ನೇ ಸಾಲಿನ ಜಿಲ್ಲೆಯ ಸಮಗ್ರ ಚಟುವಟಿಕೆಗಳ ಅಭಿವೃದ್ಧಿಯನ್ನು ಪರಿಗಣಿಸಿ ರಾಯಚೂರು ಜಿಲ್ಲೆಗೆ ಕಲಬುರಗಿ ವಿಭಾಗೀಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವುದಕ್ಕೆ ಪ್ರೋ.ಕೆ ಶಿವಶಂಕರ್ ಪರ್ಯಾಯ ಪಾರಿತೋಷಕ ಪ್ರಶಸ್ತಿಯನ್ನು ಮಾನ್ಯ ಶ್ರೀ ಪಿ.ಜಿ.ಆರ್ ಸಿಂಧ್ಯ ರಾಜ್ಯ…

ಜಾತಿಗಳ ಜಾಡ್ಯಕ್ಕೆ ಕುವೆಂಪು ಸಾಹಿತ್ಯವೇ ಔಷಧಿ:ನರಸಿಂಹ ಹೆಚ್

ಮನವಿ : ಧರ್ಮವು ಒಂದು ನಡಾವಳಿಯೆ ಹೊರತು ಅದು ನಂಬಿಕೆಯಲ್ಲ. ಪರಸ್ಪರ ಧರ್ಮಗಳನ್ನು ದ್ವೇಷಿಸದೆ ಪ್ರೀತಿ, ಸಹೋದರತೆಯಿಂದ ಸರ್ವಧರ್ಮಗಳನ್ನು ಗೌರವಿಸುವ ವ್ಯಕ್ತಿಯೆ ವಿಶ್ವಮಾನವನಾಗಲು ಸಾಧ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೆಚ್ ಶಿವರಾಮೇಗೌಡ ಬಣದ ತಾಲೂಕ ಅಧ್ಯಕ್ಷ ನರಸಿಂಹ ಹೆಚ್ ಹೇಳಿದರು.…

ಜೀವಮಾನ ಸಾಧನೆ, ವಿಶಿಷ್ಟ ಸೇವಾ ಪ್ರಶಸ್ತಿಗಳ ಪ್ರದಾನ – ವೈಜ್ಞಾನಿಕ ಸಮ್ಮೇಳನ

ಮೈಲಾಪುರ ಅಗಸಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಲಂಕೃತವಾದ ಸಾರೋಟ ಮಾದರಿಯ ತೆರೆದ ವಾಹನದಲ್ಲಿ ಸಮ್ಮೇಳನ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ, ಅವರೊಂದಿಗೆ ಪತ್ನಿ ಹಾಗೂ ಪರಿಷತ್ತಿನ…

ಹಾಲುಮತ ಪೂಜಾರಿಗಳಿಗೆ ತರಬೇತಿ, ಸಾಹಿತ್ಯ ಸಮ್ಮೇಳನ

ಸೈದಾಪುರ : ಡಿ 29 ‘ಪ್ರತಿವರ್ಷದಂತೆ ಈ ವರ್ಷ ಹಾಲುಮತ ಧರ್ಮ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನದ ಮೂರು ದಿನಗಳ ರಾಜಕೀಯೇತರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೀಗಾಗಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಜಿಲ್ಲಾ ಕುರುಬ ಸಮಾಜದ ಮಾಜಿ ಅಧ್ಯಕ್ಷ…

ಅಪ್ರೆಂಟಿಸ್ ತರಬೇತಿಯ ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ ಆಹ್ವಾನ

ರಾಯಚೂರು ಡಿಸೆಂಬರ್ 29 (ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ರಾಯಚೂರು ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು 12 ತಿಂಗಳ ಅವಧಿಯ ಅಪ್ರೆಂಟಿಸ್ ತರಬೇತಿಗೆ…

ಜಿಲ್ಲಾ ಯೋಜನಾ ಸಮಿತಿ ಚುನಾವಣೆ ಅಧಿಸೂಚನೆ ಪ್ರಕಟ

ರಾಯಚೂರು ಡಿಸೆಂಬರ್ 29 (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ರಾಯಚೂರು ರವರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆ-2025) ನಿಯಮಗಳು 1996 ನಿಯಮ 08 ರಡಿ ರಾಯಚೂರು ಜಿಲ್ಲಾ ಯೋಜನಾ…