ಮಾನವಿ: ಭಾಷುಮಿಯ ಸಾಹುಕಾರ್ ಪ್ರಥಮ ದರ್ಜೆ ಪದವಿ ಕಾಲೇಜ್ ಮಾನ್ವಿಯ ಸಹ ಪ್ರಾಧ್ಯಾಪಕರಾದ ಸೈಯದ್ ಮಿನ್ಹಾಜ್ ಉಲ್ ಹಸನ್ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಯಚೂರು ಜಿಲ್ಲಾ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಿಸಿರುವುದು ಶಿಕ್ಷಣ ಕ್ಷೇತ್ರದ ಸಾಧನೆಗೆ ದೊರೆತ ಮತ್ತೊಂದು ಮೆಚ್ಚುಗೆ.
ಅವರ ಸರಳ ವ್ಯಕ್ತಿತ್ವ, ಸಂಘಟನಾ ನಿಪುಣತೆ ಮತ್ತು ನೌಕರರ ಹಿತಚಿಂತನೆಯು ಈ ಹುದ್ದೆಗೆ ಅವರನ್ನು ಸೂಕ್ತರನ್ನಾಗಿ ಮಾಡಿದೆ. ನೌಕರರ ಸಮಸ್ಯೆಗಳನ್ನು ಆಡಳಿತ ಮಟ್ಟದಲ್ಲಿ ಸಮರ್ಥವಾಗಿ ಮಂಡಿಸುವುದು, ಸದಸ್ಯರ ಹಕ್ಕುಗಳ ಪರ ಹೋರಾಟ ನಡೆಸುವುದು ಹಾಗೂ ಸಂಘದ ಚಟುವಟಿಕೆಗಳನ್ನು ಚುರುಕುಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಲಿದ್ದಾರೆ.
ಶಿಕ್ಷಣ ಮತ್ತು ಸಂಘಟನಾ ಸೇವೆಯನ್ನು ಸಮನ್ವಯಗೊಳಿಸಿ ಉತ್ತಮ ಆಡಳಿತ ಹಾಗೂ ಕಲ್ಯಾಣ ಕಾರ್ಯಗಳನ್ನು ಮುಂದುವರಿಸುವ ಅವರ ದೃಢಸಂಕಲ್ಪವು ಯುವ ನೌಕರರಿಗೆ ಪ್ರೇರಣೆಯಾಗಲಿದೆ. ಈ ನೇಮಕವು ಮಾನ್ವಿ ತಾಲೂಕಿಗೆ ಗೌರವ ತಂದುಕೊಟ್ಟಿದ್ದು, ರಾಯಚೂರು ಜಿಲ್ಲಾ ಘಟಕದ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸಲಿದೆ.
ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದವರು:
ಸುರೇಶ್ ಕುರ್ಡಿ, ತಾಲ್ಲೂಕ ಅಧ್ಯಕ್ಷರು, ಕ.ರಾ.ಸ.ನೌ.ಸಂಘ ಮಾನ್ವಿ
ಹಂಪಣ್ಣ ಚಂಡೂರು, ಪ್ರಧಾನ ಕಾರ್ಯದರ್ಶಿ, ಕ.ರಾ.ಸ.ನೌ.ಸಂಘ ಮಾನ್ವಿ
ಸುರೇಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರು, ಕ.ರಾ.ಸ.ನೌ.ಸಂಘ ರಾಯಚೂರು
ಜೆ.ಎಲ್. ಈರಣ್ಣ, ಪ್ರಾಂಶುಪಾಲರು, ಬಾಷುಮಿಯಾ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ರಂಗನಾಥ್ ಅತ್ತನೂರು, ನಿರ್ದೇಶಕರು, ಕ.ರಾ.ಸ.ನೌ.ಸಂಘ ಮಾನ್ವಿ
ಸೈಯದ್ ಮಿನ್ಹಾಜ್ ಉಲ್ ಹಸನ್ ಅವರಿಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮುಂದಿನ ಕಾರ್ಯಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ.

Leave a Reply

Your email address will not be published. Required fields are marked *