ಸಿಂಧನೂರು ತಾಲೂಕಿನ ಅಂಬಾಮಠ ಗ್ರಾಮದಲ್ಲಿ ನಡೆದ ನೊಬೆಲ್ ಪದವಿ ಮಹಾವಿದ್ಯಾಲಯ ಸಿಂಧನೂರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ವಾರ್ಷಿಕ ವಿಶೇಷ ಶಿಬಿರದ 5 ನೇ ದಿನದ ವಿಶೇಷ ಉಪನ್ಯಾಸಕ ಕಾರ್ಯಕ್ರಮದಲ್ಲಿ ಕುಮಾರ್ ಮೌಲಸಾಬ್ ಇತಿಹಾಸ ಉಪನ್ಯಾಸಕರ ಅಧ್ಯಕ್ಷತೆಯಲ್ಲಿ ಶ್ರೀ ಬೀರಪ್ಪ ಶಂಬೋಜಿ ಚುಟುಕು ಸಾಹಿತ್ಯ ರಾಯಚೂರು ಜಿಲ್ಲಾ ಗೌರವ ಅಧ್ಯಕ್ಷರು ಭಾಗವಹಿಸಿ ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ವಿಷಯದ ಅಡಿಯಲ್ಲಿ ಮಕ್ಕಳಿಗೆ ಪರಿಸರ ಮತ್ತು ಎನ್ ಎಸ್ ಎಸ್ ಒಂದನ್ನೊಂದು ಬಿಟ್ಟು ಇಲ್ಲ, ಹಾಗೂ ಮಾನವೀಯ ಮೌಲ್ಯ ಮತ್ತು ಜಾನಪದ ಸೊಗಡು ಸಮಾಜದ ಅವಿಭಾಜ್ಯ ಅಂಗಗಳು ಎಂದು ಮಾತನಾಡಿದರು,

ಅತಿಥಿಗಳಾದ ಕಾಲೇಜಿನ ಕುಮಾರ್ ಮರಿಸ್ವಾಮಿ ಆಂಗ್ಲ ಉಪನ್ಯಾಸಕರು ಮಕ್ಕಳ ಸಾಮಾಜಿಕ ಸೇವಾ ಕಾರ್ಯದ ಪರಿಣಾಮಕಾರಿ ಭಾಗವಹಿಸುವಿಕೆಯನ್ನು ಪ್ರಶಂಸಿದರು

ಕೃಷ್ಣನ್ ರಾಥೋಡ್ ಅರ್ಥ ಶಾಸ್ತ್ರ ಉಪನ್ಯಾಸಕರು ಮಾತನಾಡಿ ಸೇವಾ ಕಾರ್ಯ ಮೆಚ್ಚಿ, ಪರಿಸರ ಮತ್ತು ಸಮಾಜದ ಸಾಮ್ಯತೆಯನ್ನು ತಿಳಿಸಿದರು
ಈ ಸಂಧರ್ಭದಲ್ಲಿ ಕನ್ನಡ ಉಪನ್ಯಾಸಕರು ಉಪಸ್ತಿತರಿದ್ದರು

ಕಾರ್ಯಕ್ರಮವನ್ನು ಬಸವಣ್ಣ ತಂಡದ ಬಸವರಾಜೇಶ್ವರಿ ಮತ್ತು ಹಂಪಯ್ಯ ನಿರೂಪಿಸಿದರು
ರಾಧಿಕಾ ಸ್ವಾಗತಿಸಿದರು
ಅಕ್ಕಮಹಾದೇವಿ ಪ್ರಾರ್ಥಿಸಿದರು
ಅಶ್ವಿನಿ.ಬಿಕಾಂ ವಂದಿಸಿದರು

Leave a Reply

Your email address will not be published. Required fields are marked *