ಸಿಂಧನೂರು ನಗರದ ರಾಜಕಾರಣಿಗಳು ಮತ್ತು ಅಧಿಕಾರಿಗಳ ತಾರತಮ್ಯ ಧೋರಣೆಯನ್ನು ನಮ್ಮ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಕೂಡಲೇ ಹಳೆ ಬಜಾರ್ ನಲ್ಲಿ ತೆರವು ಕಾರ್ಯ ಚರಣೆಯನ್ನು ನಡೆಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದಿಂದ ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಅವರ ಮೂಲಕ ಜಿಲ್ಲಾ ಡಿಸಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಒಂದು ವೇಳೆ ವಿಳಂಬ ಧೋರಣೆ ಅನುಸರಿಸಿದಲ್ಲಿ ನಮ್ಮ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚತಚರಿಸುತ್ತಾ, ನಗರದ ಚನ್ನಮ್ಮ ಸರ್ಕಲ್ (ಹಳೆ ಬಜಾರ) ನಿಂದ ಟಿಪ್ಪು ಸುಲ್ತಾನ್ ಸರ್ಕಲ್ ವರೆಗೂ ಎಡ ಮತ್ತು ಬಲ ಭಾಗದ ರಸ್ತೆ ಅತಿಕ್ರಮಿಸಿದ ಬಿಲ್ಡಿಂಗ್ ಗಳನ್ನು ತೆರವುಗೊಳಿಸಿ, ಜನರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಒತ್ತಾಯ
ನಗರವು ದಿನದಿಂದ ದಿನಕ್ಕೆ ಅತಿ ವೇಗವಾಗಿ ಬೆಳೆಯುತ್ತಿದೆ, ಇದರಿಂದಾಗಿ ನಗರದ ಪ್ರಮುಖ ಏರಿಯಾಗಳಲ್ಲಿ ಜನಸಂದಣಿ ಜಾಸ್ತಿಯಾಗುತ್ತಿದ್ದು, ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಹಳೆಬಜಾರ್ ಪ್ರದೇಶವೂ ಕೂಡ ಒಂದಾಗಿದೆ. ರಸ್ತೆಯಲ್ಲಿ ಜನಸಾಮಾನ್ಯರು ಸಂಚರಿಸುವುದಕ್ಕೆ ದಿನವೂ ಹರಸಹಾಸ ಪಡುತ್ತಿದ್ದಾರೆ. ಹೀಗಾಗಿ ರಸ್ತೆ ಅಗಲೀಕರಣ ಅತ್ಯಂತ ಅವಶ್ಯಕತೆ ಇರುತ್ತದೆ ಎಂದು ಮನವಿ ಪತ್ರದಲ್ಲಿ ಸಂಘಟಕರು ಪ್ರಸ್ತಾಪಿಸಿದ್ದಾರೆ.
40 ಫೀಟ್ ಇದ್ದ ರಸ್ತೆ 20 ಫೀಟ್‌ಗೆ ಬಂದಿದೆ !
ಕಳೆದ 2004ರಲ್ಲಿ ಸರ್ಕಾರ ಚನ್ನಮ್ಮ ಸರ್ಕಲ್ ನಿಂದ ಟಿಪ್ಪು ಸುಲ್ತಾನ್ ಸರ್ಕಲ್ ವರೆಗೂ ಇರುವ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿದ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ಇದ್ದರು ಸಹ ಮತ್ತು ಎರಡು ಬದಿಯಲ್ಲಿ ಮಾರ್ಕ್ಔಟ್ ಮಾಡಿದ್ದೂ ಹಾಗೆಯೇ ಉಳಿದಿರುತ್ತದೆ. ಆದರೆ 22 ವರ್ಷಗಳುವರ್ಷಗಳು ಕಳೆದರೂ ಇಲ್ಲಿಯವರೆಗೆ ರಸ್ತೆ ಅಗಲೀಕರಣ ಮಾಡುವ ಕೆಲಸ ಮಾತ್ರ ನಡೆದಿರುವುದಿಲ್ಲ. ಎರಡೂ ಬದಿಗಳಲ್ಲಿ 40 ಫೀಟ್ ಇರಬೇಕಾದ ರಸ್ತೆಯನ್ನು ಅತಿಕ್ರಮಿಸಿದ್ದ 20 ಫೀಟ್ ಗೆ ತಂದಿಳಿಸಿದ್ದಾರೆ. ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗಿರುತ್ತದೆ. ಹಾಗಾಗಿ ಕೂಡಲೇ ಎರಡೂ ಬದಿಯ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಬೀದಿ ವ್ಯಾಪಾರಸ್ಥರಿಗೆ ಒಂದು ನ್ಯಾಯ, ಬಿಲ್ಡಿಂಗ್ ಧಣಿಗಳಿಗೆ ಒಂದು ನ್ಯಾಯವೇ ?
ಕಳೆದ ವರ್ಷ 2024 ಡಿಸೆಂಬರ್ 25ರಂದು ಹೈಕೋರ್ಟ್ ಆದೇಶವಿದೆಯೆಂದು ಬೀದಿ ಬದಿಯ ವ್ಯಾಪಾರಸ್ಥರನ್ನುವ್ಯಾಪಾರಸ್ಥರನ್ನು ಬೀದಿಗೆ ತಳ್ಳಿದ ನಗರಸಭೆ ಪೌರಾಯುಕ್ತರು, ತಹಶೀಲ್ದಾರ್, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆಯವರು, ಸೇರಿಕೊಂಡು ಸಣ್ಣಪುಟ್ಟ ವ್ಯಾಪಾರಸ್ಥರನ್ನುವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿ, ರಸ್ತೆ ಅತಿಕ್ರಮಣ ಬಿಲ್ಡಿಂಗ್ ಧಣಿಗಳಿಗೆ ದಯೆ ತೋರಿಸಿ ಬಚಾವ್ ಮಾಡಿದ್ದಾರೆ.
ಬೀದಿ ವ್ಯಾಪಾರಸ್ಥರನ್ನು ಹಟಾವ್ ಮಾಡಿ, ಸರ್ಕಾರಕ್ಕೆ ಸೈ ಎನಿಸಿಕೊಂಡಿದ್ದಾರೆ. ಹೈಕೋರ್ಟ್ ಆದೇಶಆದೇಶ ಇರುವುದು ರಸ್ತೆ ಮಧ್ಯದ ಭಾಗದಿಂದ 21 ಮೀಟರ್ ಅತಿಕ್ರಮಿಸಿದ ಬಿಲ್ಡಿಂಗ್ ಗಳನ್ನು ತೆರವುಗೊಳಿಸಬೇಕೆಂದು ಇದೆ, ಅಲ್ಲಿ ಪ್ರಯೋಗ ಮಾಡಲಾಗದೇ ದುಡಿದುಕೊಂಡು ತಿನ್ನುವವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿರುವುದು ಯಾವ ನ್ಯಾಯ ಇದಕ್ಕೆ ನಾವು ಸಿಂಧನೂರು ಅಭಿವೃದ್ಧಿ ಎನ್ನಬಹುದೇ? ಎಂದು ಮನವಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಈ ವೇಳೆ: ಕೆಆರ್ ಎಸ್ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಕೆ.ಆರ್.ಎಸ್.ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ್ಗಿ, ಸೇರಿದಂತೆ ಇನ್ನಿತರರು ಇದ್ದರು.

