ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳು ಮಹಿಳೆಯರ ಸಂಕಷ್ಟಗಳನ್ನು ತೀವ್ರ ಗೊಳಿಸಿದ್ದು, ಮಹಿಳೆಯರ ಬದುಕಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ. ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ದೌರ್ಜನ್ಯ ಮುಕ್ತ ಬದುಕನ್ನು ಖಾತ್ರಿಗೊಳಿಸದೆ, ಪರಿಪೂರ್ಣ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲವೆಂಬುದನ್ನು ಸರ್ಕಾರಗಳು ಅರ್ಥಮಾಡಿಕೊಂಡು ಪರಿಹಾರ ಒದಗಿಸುಬೇಕೆಂದು ಒತ್ತಾಯಿಸಿ ಮಾರ್ಚ್ 5 ರಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ವಿಧಾನಸೌಧ ಚಲೋ ಹಮ್ಮಿಕೊಂಡಿದ್ದು, ರಾಯಚೂರು ಜಿಲ್ಲೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್ ಹೇಳಿದರು.

ಮಹಿಳಾ, ಕೂಲಿಕಾರ ವಿರೋಧಿ ವಿಬಿ ಗ್ರಾಮ್ ಜಿ ಮಸೂದೆಗೆ ವಿರೋಧ, ಮನರೇಗಾ ಉಳಿಸಿ, ನಗರಕ್ಕೆ ಉದ್ಯೋಗ ಖಾತ್ರಿ ವಿಸ್ತರಿಸಿ, 200 ದಿನ ಕೆಲಸ, 600 ರೂಪಾಯಿ ಕೂಲಿಗೆ ಒತ್ತಾಯ. ಮರ್ಯಾದೆಗೇಡು ಹತ್ಯೆಗಳ ತಡೆಗಾಗಿ ವಿಶೇಷ ಕಾನೂನು ಜಾರಿಗಾಗಿ, ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ, ಅಸಹಜ ಸಾಹುಗಳ ಸಮಗ್ರ ತನಿಖೆಗಾಗಿ, ನ್ಯಾಯಮೂರ್ತಿ ವರ್ಮಾ ಸಮಿತಿ ಆಯೋಗದ ಹಾಗೂ ಉಗ್ರಪ್ಪ ಸಮಿತಿ ಶಿಫಾರಸ್ಸುಗಳ ಜಾರಿಗಾಗಿ, ನಿವೇಶನ ಹಾಗು ವಸತಿ ಸೌಲಭ್ಯಕ್ಕಾಗಿ, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ವೇತನವನ್ನು 5 ಸಾವಿರ ರೂ.ಗೆ ಹೆಚ್ಚಿಸಲು. ಸ್ವಸಹಾಯ ಗುಂಪುಗಳಿಗೆ ಶೇ.4ರ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ದಿರ್ಘಾವಧಿ ಬ್ಯಾಂಕ್ ಸಾಲ ನೀಡಲು. ಗ್ರಾಮ ಪಂಚಾಯತ ವ್ಯಾಪ್ತಿಯ ಸಂಜೀವಿನಿ ಒಕ್ಕೂಟಗಳಿಗೆ 1 ಕೋಟಿ ಹಣ ಬಿಡುಗಡೆ ಮಾಡಿ, ಒಕ್ಕೂಟ ಸದಸ್ಯರಿಗೆ ತರಬೇತಿ, ಕಚ್ಚಾ ವಸ್ತುಗಳನ್ನು ನೀಡಿ, ಮಾರುಕಟ್ಟೆ ವ್ಯವಸ್ಥೆ ಸರ್ಕಾರ ಒದಗಿಸಬೇಕು. ಮೈಕ್ರೋ ಫೈನಾನ್ಸ್ ಎಂಬ ಕರಾಳ ಸಾಲದ ಬಡ್ಡಿ ಚಕ್ರಬಡ್ಡಿಯಿಂದ ವಿಮುಕ್ತಿ ಮತ್ತು ಕಿರುಕುಳ ತಪ್ಪಿಸಲು ಒತ್ತಾಯಿಸಿ, ಇದೇ ತಿಂಗಳು 5ರಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ವಿಧಾನಸೌಧ ಚಲೋ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಯಚೂರು ಜಿಲ್ಲೆಯಿಂದ ಮಹಿಳೆಯರು ನಾಳೆ ಜಿಲ್ಲೆಯ ಎಲ್ಲಾ ತಾಲುಕಿನಿಂದ ಸಂಘಟನೆಯ ಮುಖಂಡರು ಸದಸ್ಯರು ಭಾಗವಹಿಸುತ್ತಿದ್ದಾರೆಂದು ಪತ್ರಿಕಾ ಪ್ರಕಟಣೆ ಮೂಲಕ ಜೆಎಂಎಸ್ ಸಂಘಟನೆಯ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *