ರಾಯಚೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಕರ್ನಾಟಕ, ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವ ರಾಯಚೂರು ಜಿಲ್ಲಾ ವ್ಯಾಪ್ತಿಯ ಕಾಲೇಜುಗಳ ಸಂಘ, ದಿಶಾಬೋಧ್ ಫೌಂಡೇಶನ್ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅವರ ಸಂಯುಕ್ತಾಶ್ರಯದಲ್ಲಿ “ಯುವ ಶುದ್ಧಿ ಅಭಿಯಾನ” ಎಂಬ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಅಡಿಯಲ್ಲಿ ನಶಾಮುಕ್ತ ಭಾರತ, ನಶಾಮುಕ್ತ ಕರ್ನಾಟಕ, ನಶಾಮುಕ್ತ ಕ್ಯಾಂಪಸ್ ಮತ್ತು ಅಂಗಾಂಗ ದಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ (Walkathon) ನಡೆಯಲಿದೆ.
ಜಾಥಾ ನಡೆಯುವ ದಿನಾಂಕ: 06.03.2026 (ಶುಕ್ರವಾರ)
ಸಮಯ: ಬೆಳಿಗ್ಗೆ 7.30 ಗಂಟೆಗೆ
ಸ್ಥಳ: ಎಸ್.ಪಿ. ಪರೇಡ್ ಮೈದಾನ, ರಾಯಚೂರು.
ಈ ಬೃಹತ್ ಅಭಿಯಾನದ ಕುರಿತು ಹೆಚ್ಚಿನ ಮಾಹಿತಿ ನೀಡಲು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (RIMS) ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಗೋಷ್ಠಿಗೆ ಎಲ್ಲಾ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಪ್ರತಿನಿಧಿಗಳು ಹಾಜರಿರಬೇಕೆಂದು ಕೋರಲಾಗಿದೆ.
ಪತ್ರಿಕಾಗೋಷ್ಠಿ ದಿನಾಂಕ: 04.03.2026 (ಬುಧವಾರ)
ಸಮಯ: ಬೆಳಿಗ್ಗೆ 11.15 ಗಂಟೆಗೆ
ಸ್ಥಳ: ರಿಮ್ಸ್ (RIMS) ಕಾಲೇಜು ಸಭಾಂಗಣ ಕೊಠಡಿ, ರಾಯಚೂರು.

Leave a Reply

Your email address will not be published. Required fields are marked *