ಮಾನವಿ : ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ರಾಯಚೂರ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಾನ್ವಿ ನಗರದ ಬಹುದಿನಗಳ ಬೇಡಿಕೆಯಾದ ಜಿಲ್ಲಾ ಮಟ್ಟದ ಮೌಲಾನ ಆಜಾದ್ ಮಾದರಿ (ಆಂಗ್ಲ ಭಾಷೆ ) ಶಾಲೆಯ / ಕಾಲೇಜು ಕಟ್ಟಡ ನಿರ್ಮಾಣದ ಅಂದಾಜು ಮೊತ್ತ 5 ಕೋಟಿ 27 ಲಕ್ಷ ರೂಪಾಯಿಗಳ ಕಟ್ಟಡ ಕಾಮಗಾರಿಯನ್ನು ಭೂಮಿ ಪೂಜ ಕಾರ್ಯಕ್ರಮವನ್ನು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪರಿಷತ್ತಿನ ಸಭಾ ನಾಯಕ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಬೋಸರಾಜ್ ಜೀ ಅವರು ಮತ್ತು ಶಾಸಕರ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹಾಗೂ ಗುತ್ತೇದಾರರಿಗೆ ಮಾನ್ಯ ಸಚಿವರು ಮತ್ತು ಶಾಸಕರು ನಿಗದಿತ ಸಮಯದಲ್ಲಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಹಾಗೂ ಕಾಮಗಾರಿಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಿ ಎಂದು ಅಧಿಕಾರಿಗಳಿಗೆ ಮತ್ತು ಗುತ್ತೇದಾರರಿಗೆ ಸೂಚನೆಯನ್ನು ನೀಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ಲ್ಗ
ಗಪೂರ್ ಸಾಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿಕೆ
ಅಂಬರೇಶಪ್ಪ ವಕೀಲರು, ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ರೌಡ್ರು ಮಹಾಂತೇಶ ಸ್ವಾಮಿ, ಹುಸೇನ್ ಬೈಗ್, ಶೇಕ್ ಜಮೀಲ ಅಹಮದ್, ಸಾಬಿರ ಪಾಷಾ, ಎಂಡಿ ಇಸ್ಮಾಯಿಲ್ ಸಾಬ್, ಸೈಯದ್ ನಜರುದ್ದೀನ್ ಖಾದ್ರಿ ಕುರುಡಿ ಚಂದ್ರಶೇಖರ್, ಬಾಗಲವಾಡ ತಿಪ್ಪಣ್ಣ ವಕೀಲರು, c ಗುರುನಾಥ್ ನಾಯಕ್, ಗುತ್ತೇದರಾದ ಸೈಯದ್ ಅಕ್ಬರ್ ಪಾಷಾ ಹುಸೇನಿ,ಮುಸ್ತಾಕ್ ಸಾಬ್ ಮೆಕಾನಿಕ್, ಎಂಡಿ ಶಫಿ, ಗುಡಿದಿನ್ನಿ ಶರಣಯ್ಯ ನಾಯಕ್, ದೇವೇಂದ್ರಪ್ಪ ಬೊಮ್ಮನಾಳ, ಆರಿಫ್ ಮಿಯಾ ಚಾಗ್ಭಾವಿ, ಸತ್ತರ್ ಬಂಗ್ಲೆವಲೇ,ನೂರುಸಾಬ್ ಜಾಗಿರ್ ಪನ್ನೋರ್, ಅನ್ವರ ಸಾಬ್,ಸೂರ್ಯನಾರಾಯಣ ಯಾದವ್, ಕಾಮೇಶ್ ಹಂಪಯ್ಯ ನಾಯಕ್ ಬೆಳಗನಪೇಟೆ, ಹಸನ್ ಸಾಬ್, ಚುಮ್ಲಾಪುರ್, ತಾಲೂಕ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳಾದ ಭಾಗಯ್ಯ ನಾಯಕ್, ಮೌಲಾನ ಅಬ್ದುಲ್ ಕಲಾಂ ಆಜಾದ್ ಶಾಲೆಯ ಮುಖ್ಯಪಾದ್ಯಾಯಣಿ ರೇಣುಕಾ, ಶಾಲೆಯ ಸಿಬ್ಬಂದಿ ವರ್ಗ ಸಾರ್ವಜನಿಕರು ಉಪಸ್ಥಿತರಿದ್ದರು.


