ಸಿಂಧನೂರು : ರಾಷ್ಟ್ರೀಯ ಸೇವಾ ಯೋಜನೆ ಘಟಕ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಉಪನ್ಯಾಸದಲ್ಲಿ ಅವರ ಮಾತನಾಡಿ ಸಮಾಜದ ನಾಗರಿಕರು ಯುವಕರು ಮತ್ತು ಶಿಕ್ಷಣವಂತರು ಅರಿವಿಲ್ಲದೆ ಹಾಗೂ ಅದರ ವ್ಯಾಮೋಹಕ್ಕೆ ಒಳಗಾಗಿ ತಮ್ಮನ್ನು ಬಲಿಪಶುಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಬೇಸರದ ಸಂಗತಿ ಎಂದು ತಿಳಿಸಿದರು.
ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಪಂಚಾಕ್ಷರಯ್ಯ ಸ್ವಾಮಿ ಮಾತನಾಡಿ ಎಸ್ ಎಸ್ ವಿಧ್ಯಾರ್ಥಿಗಳ ಕಾರ್ಯ ವೈಖರಿ ಪ್ರಶಂಸಿದರು
ಗ್ರಾಮದ ಹಿರಿಯ ಮುಖಂಡರಾದ ಹನುಮೇಶ ಸಾಲಗುಂದ ಇವರು ಮಾತನಾಡಿ ಸ್ವಯಂ ಸೇವಕರ ಎನ್ ಎಸ್ ಎಸ್ ಸೇವೆ ಕಾರ್ಯ ತಮ್ಮನು ಭವಿಷ್ಯದಲ್ಲಿ ದೊಡ್ಡ ಹುದ್ದೆಗೆ ಕರೆದುಕೊಂಡು ಹೋಗುತ್ತದೆ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಿರಿ ಎಂದರು
ಕುಮಾರಿ ಕಾವೇರಿ ಮೇಡಂ ತಮ್ಮ ಬಾಲ್ಯದ ಎನ್ ಎಸ್ ಎಸ್ ಚಟುವಟಿಕೆಗಳನ್ನು ಸ್ಮರಿಸಿ ಮಕ್ಕಳಿಗೆ ಶುಭ ಹಾರೈಸಿದರು
ಪಂಪಾಪತಿ ರಾಜ್ಯಶಾಸ್ತ್ರ ಉಪನ್ಯಾಸಕರು ಈ ಸಂಧರ್ಭದಲ್ಲಿ ಮಾತನಾಡಿ ಡಿಜಿಟಲ್ ಅಪರಾಧಕ್ಕೆ ಕಾರಣ ಮತ್ತು ಪರಿಣಾಮಗಳನ್ನು ಮಕ್ಕಳಿಗೆ ತಿಳಿಸಿ ಅದರಿಂದ ದೂರವೀರಲೂ ಕಿವಿ ಹೇಳಿದರು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಚನ್ನಬಸಮ್ಮ ಮಲ್ಲಾಪುರ ವಹಿಸಿದ್ದರು, ಇವರು ಇಂದಿನ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಅವಶ್ಯಕ ಎಂದು ತಿಳಿ ಹೇಳಿದರು
ಅತಿಥಿಗಳಾಗಿ ಹೊನ್ನಪ್ಪ ಬೆಳಗುರ್ಕಿ, ಯಂಕೋಬ್ ಬೂದಿವಾಳ ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಭಾನು ಮುಸ್ತಾಕ ತಂಡದವರು ನಿರ್ವಹಿಸಿದರು.
ನಂದಿನಿ ಬಿಕಾಂ ವಿದ್ಯಾರ್ಥಿನಿ ನಿರೂಪಿಸಿದರು, ಸ್ವಾತಿ ತಂಡ ಪ್ರಾರ್ಥಿಸಿತು , ನವೀನ್ ಸ್ವಾಗತಿಸಿದರು, ಆಯೇಷಾ ವಿಧ್ಯಾರ್ಥಿನಿ ವಂದಿಸಿದರು


