ಮಸ್ಕಿ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ತಾಲೂಕಾಡಳಿತದಿಂದ ಭಾನುವಾರ ಆಚರಿಸಲಾಯಿತು.
ತಹಸೀಲ್ದಾರ್ ಮಂಜುನಾಥ ಭೋಗಾವತಿಯವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಸರ್ವೆ ಇಲಾಖೆ ಯ ಬುಜ್ಜಪ್ಪ, ಬಸವರಾಜಸ್ವಾಮಿ ಹಸಮಕಲ್, ಘನಮಠದಯ್ಯ, ಬರಿಬಸಯ್ಯಸ್ವಾಮಿ, ಗಂಗಾಧರ, ವಿರುಪಾಕ್ಷಯ್ಯಸ್ವಾಮಿ ಅಂತರಗಂಗಿ ಸೇರಿದಂತೆ ಸಮಾಜದ ಅನೇಕರಿದ್ದರು.
ವಿವಿಧೆಡೆ: ತಾಲೂಕು ಪಂಚಾಯಿತಿ, ಪುರಸಭೆ ಕಾರ್ಯಾಲಯ, ನೀರಾವರಿ ಇಲಾಖೆ, ನಗರ ಯೋಜನಾ ಪ್ರಾಧಿಕಾರ ಕಛೇರಿ, ರೈತ ಸಂಪರ್ಕ ಕೇಂದ್ರ, ಸರ್ವೆ ಮತ್ತು ಭೂ ದಾಖಲೆ ಇಲಾಖೆ, ಮಸ್ಕಿ ನಾಲಾ ಯೋಜನಾ ಕಛೇರಿ, ಶಾಸಕರ ಕಾರ್ಯಾಲಯ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಕಾರ್ಯಾಲಯಗಳಲ್ಲಿ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು

