ಸಿಂಧನೂರು : ಫೆ.28 ಶನಿವಾರದಿಂದ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ವಿಷಯ ಬರೆಯಲಿಕ್ಕೆ 3752 ವಿದ್ಯಾರ್ಥಿಗಳು ಹಾಜರಾಗಿದ್ದು, ಶಾಂತಿ ಮತ್ತು ಶಿಸ್ತಿನಿಂದ ಪರೀಕ್ಷೆ ನಡೆದಿದೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು, ಚೀಟಿ ಎಡವಟ್ಟುಗಳು ನಡೆಯದಂತೆ ನಿಗಾವಹಿಸಲು ಪೊಲೀಸರನ್ನು ನಿಯೋಜನೆ ಮಾಡಿ ಬಂದೋಬಸ್ತ್ ಒದಗಿಸಲಾಗಿತ್ತು.

ಸಿಂಧನೂರು ತಾಲೂಕಿನಲ್ಲಿ ದ್ವಿತೀಯ ಪಿಯುಸಿಯ
9 ಪರೀಕ್ಷಾ ಕೇಂದ್ರಗಳಿದ್ದು, 4004 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಅದರಲ್ಲಿ 252 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಪ್ರತಿಯೊಂದು ಕೊಠಡಿಯಲ್ಲೂ ಕೂಡ ಸಿ.ಸಿ ಕ್ಯಾಮರಾಗಳನ್ನು ಆಳವಡಿಸಲಾಗಿದೆ. ವಿದ್ಯಾರ್ಥಿಗಳು ಎಲ್ಲವನ್ನೂ ಗಮನಿಸಿ ಸೂಕ್ಷ್ಮವಾಗಿ ಪರೀಕ್ಷೆ ಬರೆದರು.

Leave a Reply

Your email address will not be published. Required fields are marked *