ತಾಲೂಕಿನ ಶ್ರೀನಿವಾಸ ಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್‌.ಡಿ.ಎಂ.ಸಿ ರಚನೆ ಮಾಡಲಾಯಿತು ರಚನಾ ಸಭೆಯಲ್ಲಿ ಸಿ.ಆರ್.ಸಿ ಸಂಪನ್ಮೂಲ ವ್ಯಕ್ತಿಗಳಾದ ರಾಜೇಸಾಬ್ ಹಾಗೂ ಗುರುರಾಜ್ ದೇಸಾಯಿ ಆಗಮಿಸಿ, ಎಸ್.ಡಿ.ಎಂ.ಸಿಯ ಕರ್ತವ್ಯಗಳು ಜವಾಬ್ದಾರಿಗಳನ್ನ ವಿವರಿಸಿದರು.

ಎಲ್ಲ ಸದಸ್ಯರು, ಪೋಷಕರು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಹುಚ್ಚಾರೆಡ್ಡಿ ಬಾಗಲವಾಡ, ಹಾಗೂ ಉಪಾಧ್ಯಕ್ಷರನ್ನಾಗಿ ವಿಜಯಲಕ್ಷ್ಮೀ ಅಯ್ಯಪ್ಪ ನಾಯಕ ಕೂಡ್ಲೂರು, ಮತ್ತು ಸದಸ್ಯರನ್ನಾಗಿ ಬಸವರಾಜ, ಅಮರೇಶ ಮಾನೇಗಾರ, ಜಯಶ್ರೀ ದುರುಗಪ್ಪ ಲಿಂಗಸುಗೂರು, ನಿಂಗಪ್ಪ ಪನ್ನೂರು, ಲಕ್ಕಪ್ಪ ಕೋಟೆಗುಡ್ಡ, ತಾಯಮ್ಮ ಹನುಮಂತಪ್ಪ, ರೇಣುಕಮ್ಮ ನಾಗರಾಜ ಚಿರತನಾಳ, ಜಮುನಕ್ಕ ಹೇಮಣ್ಣ, ಮಲ್ಲಿಕಾರ್ಜುನ ಪೂಜಾರಿ, ಮಲ್ಲೇಶ ನಾಯಕ, ಹುಸೇನಬಿ ಚಾಂದ್ ಸಾಬ್, ರೇಣುಕಾ ಭೀರಪ್ಪ, ಹನುಮಂತಮ್ಮ ಸಿದ್ರಾಮೇಶ ಗುರಿಕಾರ, ಶರಣಪ್ಪ ಉಪ್ಪಾರ, ಬಾಷಾಸಾಬ್ ಶಫೀಯಾ ಬೇಗಂ, ನಬೀಸಾಬ್, ಆಯ್ಕೆ ಮಾಡಲಾಯಿತು.

ಮುಖ್ಯ ಗುರುಗಳಾದ ದುರುಗಪ್ಪ ಗುಡದೂರು ಸ್ವಾಗತಿಸಿದರು, ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಗುರು ಹಿರಿಯರು ಮತ್ತು ಶಿಕ್ಷಕರಾದ ಯಮನೂರಪ್ಪ, ವೀರೇಶ, ಶ್ರೀದೇವಿ, ಅಂಗನವಾಡಿ ಕಾರ್ಯಕರ್ತೆಯರಾದ ಬಸಮ್ಮ, ಮದ್ಯಾನಮ್ಮ, ಹಾಗೂ ಮಕ್ಕಳು ಹಾಜರಿದ್ದರು. ಇದೇ ವೇಳೆ ನೂತನ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *