ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ 5ನೇ ವಾರ್ಡಿನಲ್ಲಿರುವ ಸುಭಾನ್ ಸಾಬ್ ತಂದೆ ರಾಜನಾಯಕ
ಅವರ ಮನೆಯ ಪ್ರೀಜ್ ಏಕಾಏಕಿಯಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡು ಅಪಾರ ಪ್ರಮಾಣದ ಬಟ್ಟೆ, ಕಾಳು, ಭತ್ತ, ಜೋಳ, 2 ಲಕ್ಷ ರೂ. ಮೌಲ್ಯದ ಬಂಗಾರದ ಒಡವೆಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.
ಮನೆಯ ಮಾಲಿಕ ಬೇರೆ ಊರಿಗೆ ತೆರಳಿದ್ದಾಗ ಇಂತಹ ಘಟನೆ ನಡೆದಿದೆ. ನಂತರ ಬೆಂಕಿ ಹತ್ತಿದ ವಿಷಯವನ್ನು ಪಕ್ಕದ ಮನೆಯವರು ತಿಳಿಸಿದ್ದಾರೆ, ನಾನು ಬೇರೆ ಊರಿಗೆ ಬಂದಿದ್ದೇನೆ, ನೀವು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿ ಎಂದಿದ್ದಾರೆ. ಪಕ್ಕದ ಮನೆಯವರು ಮತ್ತು ಗ್ರಾಮಸ್ಥರು ಸೇರಿ ಮನೆಯಲ್ಲಿನ ಪ್ರೀಜ್ ಶಾರ್ಟ್ ಸರ್ಕ್ಯೂಟ್ ನಿಂದ ಬ್ಲಾಸ್ಟ್ ಆಗಿ ಬೆಂಕಿ ಹತ್ತಿಕೊಂಡು
ಧಗ ಧಗ ಉರಿಯುತ್ತಿದ್ದ ಮನೆಯನ್ನು ನೀರು ಹಾಕಿ ಆರಿಸಲು ಪ್ರಯತ್ನ ಪಟ್ಟರು ಕೂಡ ಮನೆಯಲ್ಲಿದ್ದ ಅಗತ್ಯ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪೋಟೋ ತೆಗೆದುಕೊಂಡು ಹೋಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.


