ಸಿಂಧನೂರು : ಚಂದ್ರಶೇಖರ್ ಆಜಾದ್ ಜೀವನ ಮತ್ತು ವಿಚಾರಗಳ ಕುರಿತು ಎಐಡಿವೈಓ ಜಿಲ್ಲಾ ಅಧ್ಯಕ್ಷರಾದ ಚನ್ನಬಸವ ಜಾನೇಕಲ್ ಮಾತನಾಡಿ, ಪಂಡಿತ್ ಜಿ ಎಂದೆ ಪ್ರಖ್ಯಾತರಾದ ಚಂದ್ರಶೇಖರ್ ಆಜಾದ್ ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲೂ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಹೋರಾಟವನ್ನು ನಡೆಸಿದರು. ಜೊತೆಗಾರ ಸಂಗಾತಿಗಳು ಹಲವಾರು ಜನರನ್ನು ಕಳೆದುಕೊಂಡರೂ ಸಹ ಎದೆಗುಂದದೆ ಹೋರಾಟವನ್ನು ಮುಂದುವರಿಸಿದರು. ತಾವು ನಂಬಿದ ವಿಚಾರಕ್ಕಾಗಿ ಎಂದು ರಾಜಿ ಮಾಡಿಕೊಳ್ಳದೆ ಹೋರಾಟವನ್ನು ನಡೆಸಿದರು ಎಂದರು. ಬಾಲ್ಯದಲ್ಲಿ ಹಲವಾರು ಕಷ್ಟ ನಷ್ಟಗಳನ್ನು ಎದುರಿಸಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ನಂತರ ಎಚ್ ಆರ್ ಎ ಕ್ರಾಂತಿಕಾರಿ ಸಂಘಟನೆಯ ಸಂಪರ್ಕಕ್ಕೆ ಬಂದರು. ರಾಮ್ ಪ್ರಸಾದ್ ಬಿಸ್ಮಿಲ್, ಅಶ್ವ ಕುಲ್ಲಾ ಖಾನ್ ಭಗತ್ ಸಿಂಗ್, ಸುಖದೇವ್ ಜೊತೆಗೂಡಿ ಹೋರಾಟವನ್ನು ತೀವ್ರಗೊಳಿಸಿದರು. ದೇಶದ ಸ್ವಾತಂತ್ರ್ಯ ಬರುವುದಷ್ಟೇ ಅಲ್ಲ ಮಾನವನಿಂದ ಮಾನವನ ಶೋಷಣೆ ನಿರ್ಮೂಲನೆ ಗೊಳಿಸುವ ಕನಸು ಕಂಡಿದ್ದರು. ಸಮಾಜವಾದಿ ಸಮಾಜದ ಸ್ಥಾಪನೆ ಅವರ ಗುರಿಯಾಗಿತ್ತು. ಆದರೆ ಅವರು ಕನಸು ಕೈಗೂಡಲಿಲ್ಲ ಎಂದು ಅಭಿಪ್ರಾಯಪಟ್ಟರು. ಅವರ ಕನಸಿನ ಭಾರತ ಕಟ್ಟಲು ಯುವಜನತೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿರುಪಾಕ್ಷಿ ಬಿ. ಎಂ ಅವರು
ಹುತಾತ್ಮ ಚಂದ್ರಶೇಖರ್ ಅಜಾದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಚಂದ್ರಶೇಖರ ಆಜಾದ್ ಮತ್ತಿತರ ಹಲವಾರು ಜನ ಮಹಾನ್ ವ್ಯಕ್ತಿಗಳು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು ಮಾಡಿದರು. ಅವರ ಮಹತ್ವವನ್ನು ನಾವಿಂದು ಹೆಚ್ಚು ಹೆಚ್ಚು ಅರಿತುಕೊಳ್ಳಬೇಕಾಗಿದೆ. ಅವರ ತ್ಯಾಗ ಬಲಿದಾನದಿಂದಲೇ ಇಂದು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಅದನ್ನು ಸರಿಯಾಗಿ ಕಾಪಾಡಿಕೊಂಡು ಭವಿಷ್ಯದ ಭಾರತವನ್ನು ಕಟ್ಟಲು ಯುವಜನರು ವೈಚಾರಿಕವಾಗಿ ಜಾಗೃತರಾಗಬೇಕು ಎಂದರು.
ಉಪನ್ಯಾಸಕರಾದ ಡಾ. ಸವಿತಾ ಅವರು ಮಾತನಾಡಿ ಮೊದಲು ಬ್ರಿಟಿಷರಷ್ಟೇ ನಮ್ಮ ಶತ್ರು ಆಗಿದ್ದು ಇಂದು ನಮ್ಮ ಸುತ್ತಮುತ್ತಲು ಶತ್ರುಗಳಿದ್ದಾರೆ. ಶತ್ರು ಯಾರಂದೇ ಗುರುತಿಸಲು ಸಾಧ್ಯವಾಗದಂತಾಗಿದೆ. ಮೊಬೈಲ್ ಕೂಡ ಒಂದು ಶತ್ರುವಿನ ರೀತಿಯಲ್ಲಿ ನಮ್ಮನ್ನು ನಿಯಂತ್ರಿಸುತ್ತಿದೆ. ಅದರ ಬಗ್ಗೆ ಜಾಗೃತರಾಗಿರಬೇಕು ಎಂದರು.
ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಋತು ಅವರು ಸ್ವಾಗತಿಸಿ ನಿರೂಪಿಸಿದರು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

