ತಾಳಿಕೋಟೆ: ತಾಲ್ಲೂಕಿನ ಸುಕ್ಷೇತ್ರ ಚಬನೂರ ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಗ್ರಾಮದ ಶಶಿಕಾಂತ ಹಿರೇಮಠ ಅವರ ಪ್ರಯತ್ನದಿಂದ ಬಿಕೆಜಿ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ರೂ 2.00 ಲಕ್ಷ ಹಾಗೂ ಜೆ ಎಸ್ ಡಬ್ಲು ಸ್ಟೀಲ್ ಲಿಮಿಟೆಡ್ ಕಂಪನಿ ವತಿಯಿಂದ ರೂ 9.80ಲಕ್ಷ ರೂಪಾಯಿಗಳ ಕಾಣಿಕೆಯ ಚೆಕ್ ನ್ನು ಶುಕ್ರವಾರ ಈರಾತಯ್ಯಸ್ವಾಮಿ ಹಿರೇಮಠ ಅವರು ಹಸ್ತಾಂತರಿಸಿದರು. ಈ ಸಮಯದಲ್ಲಿ ದೇವಸ್ಥಾನದ ಅರ್ಚಕ ಸಿದ್ರಾಮಪ್ಪಮುತ್ಯಾ ಒಡೆಯರ, ಪ್ರಕಾಶ ಮುತ್ಯಾ ಒಡೆಯರ, ಸಮಿತಿ ಅಧ್ಯಕ್ಷ ಬಸನಗೌಡ ಬಿ ಪಾಟೀಲ, ಕಾರ್ಯದರ್ಶಿ ಮಶ್ಯಾಕ ವಾಲೀಕಾರ ಸದಸ್ಯ ರಾಮನಗೌಡ ನಾರಾಪಾಟೀಲ ಇದ್ದರು.

