ತಾಳಿಕೋಟಿ:ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ರದ್ದುಗೊಳಿಸಿ ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟಿ ತಾಲೂಕ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹವು ಶುಕ್ರವಾರ 3ನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನ ಶ್ರೀ ಶಿವಶರಣ ಮಾದರ ಚೆನ್ನಯ್ಯ ಸಮಾಜದ ವತಿಯಿಂದ ಈ ಹೋರಾಟಕ್ಕೆ ಬೆಂಬಲಿಸಿ ಸತ್ಯಾಗ್ರಹ ನಡೆಸಿದರು.ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಡಾ. ಶ್ರೀಮತಿ ವಿನಯಾ ಹೂಗಾರ್ ಇವರು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ , ಧರಣಿ ಕೈ ಬಿಡುವಂತೆ ಮನವಿ ಮಾಡಿದರು ಆದರೆ ಮನವಿಗೆ ತಾಲೂಕು ಹೋರಾಟ ಸಮಿತಿಯವರು ಸ್ಪಂದಿಸಲಿಲ್ಲ. ಸರ್ಕಾರ ಈ ಮುಂಚೆ ನಿಗದಿಪಡಿಸಿದ ಸ್ಥಳವನ್ನು ರದ್ದುಗೊಳಿಸಿದರೆ ಮಾತ್ರ ನಾವು ಧರಣಿ ಅಂತ್ಯಗೊಳಿಸುತ್ತೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅನೇಕರು ಮಾತನಾಡಿದರು. ಶ್ರೀ ಶಿವಶರಣ ಮಾದರ ಚೆನ್ನಯ್ಯ ಸಮಾಜದ ಅಧ್ಯಕ್ಷರಾದ ಯಮನಪ್ಪ ಕಟ್ಟಿಮನಿ ಉಪಾಧ್ಯಕ್ಷರಾದ ರಾಮಣ್ಣ ಕಟ್ಟಿಮನಿ ಹಾಗೂ ಸಮಾಜದ ಗಣ್ಯ ವ್ಯಕ್ತಿಗಳಾದ ಹುಲಿಗೆಪ್ಪ ಕಟ್ಟಿಮನಿ ನಾಗಪ್ಪ ಕಟ್ಟಿಮನಿ ಕಾಶಿನಾಥ್ ಕಟ್ಟಿಮನಿ ಬಸವರಾಜ್ ಕಟ್ಟಿಮನಿ , ಕಾಶಿನಾಥ್ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ರಮೇಶ್ ಜಾಧವ, ಶಾಂತಪ್ಪ ಇಂಗಳಗೇರಿ, ರಮೇಶ್ ಹಡಗಿನಾಳ, ಪರಶುರಾಮ ಕಟ್ಟಿಮನಿ, ರಾಜು ಕಟ್ಟಿಮನಿ, ಶರಣು ಜಾಲಹಳ್ಳಿ ಕಾಶಿನಾಥ್ ಕತ್ನೂರ, ಗಿರೀಶ ಕಟ್ಟಿಮನಿ, ಗೋಪಾಲ್ ಕಟ್ಟಿಮನಿ, ಪರಸಪ್ಪ ಕಟ್ಟಿಮನಿ, ತಿಮ್ಮಪ್ಪ ಜಾಲಹಳ್ಳಿ, ಮುತ್ತಪ್ಪ ಆಲೂರು, ನಿಂಗಪ್ಪ ಶಿರೂರ, ಶರಣಪ್ಪ ಹರನಾಳ, ಬಸಪ್ಪ ತಿಪ್ಪಣ್ಣ ಕಟ್ಟಿಮನಿ, ದಶರತಸಿಂಗ್ ಮನಗೂಳಿ, ಆರ್.ಎಸ್.ಪಾಟೀಲ(ಕೂಚಬಾಳ),ಕಾಶಿನಾಥ ಮುರಾಳ,ಮುತ್ತಪ್ಪ ಚಮಲಾಪೂರ,ಪ್ರಕಾಶ ಹಜೇರಿ, ಪರಶುರಾಮ ತಂಗಡಗಿ,ಸಿರಸಕುಮಾರ ಹಜೇರಿ,ರವಿ ಕಟ್ಟಿಮನಿ, ನಾಗೇಶ ಕಟ್ಟಿಮನಿ,ವಿಜಯಸಿಂಗ್ ಹಜೇರಿ, ಮಾಸೂಮಸಾಬ ಕೆಂಭಾವಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *