ತಾಲೂಕಿನ ಮಾಡಸಿರವಾರ ಗ್ರಾಮದಲ್ಲಿ ಪುರುಷರು ಹಾಗೂ ಯುವಕರು ಆದಿಯಾಗಿ ಮದ್ಯ ವ್ಯಸನಕ್ಕೆ ದಾಸರಾಗುತ್ತಿದ್ದಾರೆ, ನಾವು ಮಹಿಳೆಯರು ದುಡಿದು ತಂದ ಹಣವನ್ನು ಗಂಡಸರ ಕುಡಿತಕ್ಕೆ ದುರ್ಬಳಕೆ ಆಗುತ್ತಿದೆ, ಇದರಿಂದ ಸಾಕಷ್ಟು ಬಡ ಕುಟುಂಬಗಳು ನಲಿಗೆ ಹೋಗಿವೆ. ಈ ಕೂಡಲೇ ಮದ್ಯಪಾನ ಮುಕ್ತ ಗ್ರಾಮವನ್ನಾಗಿ ಮಾಡಿ ಎಂದು ಅನೇಕ ಮಹಿಳೆಯರು ಸ್ವಯಂ ಪ್ರೇರಿತರಾಗಿ ಕೆ.ಆರ್.ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ನಿರುಪಾದಿ ಕೆ.ಗೋಮರ್ಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸಿಂಧನೂರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಫೆ.27 ಶುಕ್ರವಾರದಂದು ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ “ಬೀರು ಬೇಡ ನೀರು ಕೊಡಿ, ಸಾರಾಯಿ ಅಂಗಡಿ ಬೇಡ ಶಿಕ್ಷಣ ಬೇಕು ಯುವಕರನ್ನು ಉಳಿಸಿ ಸಾರಾಯಿ ನಿಷೇಧಿಸಿ” ಎಂಬ ಹಲವಾರು ಘೋಷಣೆಗಳನ್ನು ಕೂಗುವ ಮೂಲಕ
ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವ ಕಿರಾಣಿ ಅಂಗಡಿ, ಹೋಟೆಲ್, ಸಣ್ಣ ಕಪಾಟು ಅಂಗಡಿಗಳು ಸೇರಿದಂತೆ ಪ್ರತಿಯೊಂದು ಕಡೆ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ತಡೆದು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು.
ಮದ್ಯ ವ್ಯಸನಿಗಳಿಂದ ಮನೆಯಲ್ಲಿನ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ಜೊತೆಗೆ ಕುಟುಂಬದ ಸದಸ್ಯರು ಬೀದಿಗೆ ಬಿಳುತ್ತಾರೆ, ಮಾಡಶಿರವಾರ ಗ್ರಾಮದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಪರಿಗಣನೆಗೆ ತೆಗೆದುಕೊಂಡು ದಾಳಿ ನಡೆಸಿ, ಮದ್ಯ ಮುಕ್ತ ಗ್ರಾಮ ಮಾಡುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಡಿ ಎಂದು ಆಗ್ರಹಿಸಿದರು.
ಇದೇ ವೇಳೆ: ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಬಸವರಾಜ ಗೋಡಿಹಾಳ ಸೇರಿದಂತೆ ಮಾಡಸಿರವಾರ ಗ್ರಾಮದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡಿದರು.

