ಮಸ್ಕಿ : ಪಟ್ಟಣದಲ್ಲಿ ಬಿಜೆಪಿ ಮಂಡಲ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಹುಟ್ಟುಹಬ್ಬವನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಇಲ್ಲಿನ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿ ಹಾಗೂ ಮಸ್ಕಿ ಹಳೆ ಬಸ್ ನಿಲ್ದಾಣದಲ್ಲಿ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿ ಶುಕ್ರವಾರ ಹುಟ್ಟು ಆಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ಅವರು ಮಾತನಾಡಿ ಬಿಎಸ್
ಯಡಿಯೂರಪ್ಪನವರು ರಾಜ್ಯ ಕಂಡ ಧೀಮಂತ ನಾಯಕರು ರೈತ ಪರ ಹೋರಾಟಗಾರ, ಬಡವರ ಬಂಧು, ಜನನಾಯಕ, ಕಾರ್ಯಕರ್ತರ ಮಾರ್ಗದರ್ಶಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ನನಗೆ ರಾಜಕೀಯ ಕ್ಷೇತ್ರಕ್ಕೆ ಬರಲು ಕಾರಣೀಭೂತರು, ಮಾಗದರ್ಶಕರು ಕರ್ನಾಟಕ ಕಂಡ ಅತ್ಯಂತ ಜನಪ್ರಿಯ ನಾಯಕರು, ಹೋರಾಟದ ಮೂಲಕವೇ ಜನರನ್ನು ಬಡಿದೆಬ್ಬಿಸಿದ ಧೀಮಂತರು ಬಿ.ಎಸ್.ಯಡಿಯೂರಪ್ಪನವರು ಪ್ರತಿಭಟನೆ, ಸಾಧಿಸುವ ಛಲ, ನೆಟ್ಟ ಗುರಿ ಇಟ್ಟ ಹೆಜ್ಜೆ, ರೈತರು, ಬಡವರು, ದೀನದಲಿತರು, ಪರಿಶಿಷ್ಟ ಪಂಗಡ, ಹಿಂದುಳಿದವರ ಪಾಲಿನ ಆಶಾಕಿರಣವಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಪುರಸಭೆ ಅಧ್ಯಕ್ಷ ಸುರೇಶ್ ಹರಸೂರು, ಬಿಜೆಪಿ ಮುಖಂಡರಾದ ಮಲ್ಲಪ್ಪ ಅಂಕಸದೊಡ್ಡಿ, ಡಾ. ಬಿ. ಎಚ್. ದಿವಟರ, ಪಂಪಣ್ಣ ಗುಂಡಳ್ಳಿ ಯಲ್ಲೋ ಜಿ ರಾವ್ ಕೊರೆೇಕಾರ, ಪ್ರಸನ್ನ ಪಾಟೀಲ, ಶಿವಶಂಕ್ರಪ್ಪಹಳ್ಳಿ, ಶ್ರೀನಿವಾಸ್ ಇಲ್ಲೂರು, ಶಿವಕುಮಾರ್, ಸುಗಣ್ಣ ಬಾಳೆಕಾಯಿ, ನಾಗರಾಜ್ ಎಂಬಲದ, ರಮೇಶ್ ಉದ್ಬಾಳ್, ಮೌನೇಶ್ ನಾಯಕ್, ರಮೇಶ್ ತೀರ್ಥಭಾವಿ, ಪುರಸಭೆ ಸದಸ್ಯರಾದ ಮೌನೇಶ್ ಮುರಾರಿ, ಚೇತನ್ ಪಾಟೀಲ್, ಮಲ್ಲಿಕಾರ್ಜುನ ಬ್ಯಾಳಿ, ಭರತ್ ಕುಮಾರ್, ರಮೇಶ್ ಗುಡಸಲಿ, ಬಸವರಾಜ್ ಬುಕ್ಕಣ್ಣ, ಡಾ. ವೆಂಕಟೇಶ್ ಕೋಳಬಾಳ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *