ತಾಳಿಕೋಟಿ: ತಾಲೂಕಿನ ನೀರಲಗಿ ಗ್ರಾಮದಲ್ಲಿ ಇದೇ ಫೆಬ್ರವರಿ 15 ರಂದು ಶ್ರೀ ಹೊಳೆ ಹುಚ್ಚೇಶ್ವರ ಮೂರ್ತಿ ಪ್ರತಿಷ್ಠಾಪನೆಯ ಜಾತ್ರಾ ಮಹೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು , ಮೊದಲನೇಯದಾಗಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ಶ್ರೀ ಹುಚ್ಚೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಮ.ನಿ.ಪ್ರ ಹುಚ್ಚೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದು , ಗುಳೇದಗುಡ್ಡ ಹಾಗೂ ಮೈಲೇಶ್ವರ ಮುರುಘಾ ಮಠದ ಮಹಾಸ್ವಾಮಿಗಳಾದ ಶ್ರೀ.ಮ.ನಿ.ಪ್ರ ಕಾಶೀನಾಥ ಮಹಾಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಬುಧವಾರ ಫೆ.4 ರಿಂದ ಪ್ರತಿನಿತ್ಯ ಸಾಯಂಕಾಲ 7:30 ರಿಂದ 9:30ವರೆಗೆ ಹಾನಗಲ್ಲ ಶ್ರೀ ಶಿವಕುಮಾರ ಶಿವಯೋಗಿಗಳು ಪ್ರವಚನವನ್ನು ನೀಡಲಿದ್ದಾರೆ. ಫೆ.14 ಸಾಯಂಕಾಲ 9:30ರಂದು ಹರ ಗುರು ಚರಮೂರ್ತಿ ರವರ ಸಮ್ಮುಖದಲ್ಲಿ ಪುರಾಣ ಪ್ರವಚನ ಮಹಾಮಂಗಳಗೊಳ್ಳಲಿದೆ.
ಫೆ.15 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಹೊಳೆ ಹುಚ್ಚೇಶ್ವರ ಮಹಾಮೂರ್ತಿಗೆ ರುದ್ರಾಭಿಷೇಕ , ಸಹಸ್ರ ಬಿಲ್ವಾರ್ಚನೆ ಜರುಗುವುದು. ಬೆ. 8.30 ಕ್ಕೆ ಪುರಾಣ ಮೆರವಣಿಗೆ ಜೊತೆಗೆ ಸುಮಂಗಲೆಯರಿಂದ ಕುಂಬ , ಕಳಸ , ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ತಲುಪುಲಾಗುವುದು.
ಕೊನೆಯದಾಗಿ ದೇವಸ್ಥಾನದ ಆವರಣದಲ್ಲಿ ಧರ್ಮಸಭೆ ಜರುಗುತ್ತದೆ. ಮಧ್ಯಾಹ್ನ 12:30 ರಿಂದ ಮಹಾಪ್ರಸಾದ ನಡೆಸಲಾಗುವುದು. ಗ್ರಾಮದ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ವಿಜೃಂಭಣೆಯಿಂದ ಜಾತ್ರೆ ಹಾಗೂ “ನೀರಲಗಿ ಉತ್ಸವ-2026” ವನ್ನು ನೆರವೇರಿಸಬೇಕಾಗಿ ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *