ಸಿಂಧನೂರು ತಾಲೂಕಿನ ಸಾಲಗುಂದ ಹೋಬಳಿಯ ಸೋಮಲಾಪುರ ಗ್ರಾಮದಲ್ಲಿ ಸರ್ವೆ ನಂ-197|1 ಮತ್ತು 198|2 ರಲ್ಲಿ ಈಗಾಗಲೇ ಸುಮಾರು 40 ವರ್ಷಗಳಿಂದ ವಾಸ ಮಾಡುತ್ತಿರುವ ಎಲ್ಲಾ ಸಮುದಾಯದ 80ಕ್ಕೂ ಹೆಚ್ಚು ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸುವಂತಹ ತಂತ್ರಗಾರಿಕೆ ನಡೆಯುತ್ತಿದೆ ಎಂದು ಸೋಮಲಾಪುರ ನಿವಾಸಿಗರು ಆರೋಪ ಮಾಡಿದರು.
ನಾವು ವಾಸ ಮಾಡುತ್ತಿರುವ ಸ್ಥಳದಲ್ಲಿ ಸರ್ಕಾರದಿಂದ ನೀಡುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನಮ್ಮ ಗ್ರಾಮ ಪಂಚಾಯತಿಯಿಂದ ಪಡೆದುಕೊಂಡು ಇಲ್ಲಿತನಕ
ಯಾವುದೇ ಅಡ್ಡಿ ಆತಂಕಳು, ಯಾರ ಆಕ್ಷೇಪಣೆಗಳು ಸಹ ಇಲ್ಲದೇ ನಾವು ಬಡವರು ವಾಸ ಮಾಡಿ ನಮ್ಮ ಬದುಕು ಕಟ್ಟಿಕೊಂಡಿದ್ದೇವೆ, ಆದರೆ ಇತ್ತೀಚೆಗೆ ಸರ್ವೆ ನಂಬರಿಗೆ ಸಂಬಂಧಿಸಿದಂತೆ ಊರಿನ ಕೆಲವು ಪ್ರಭಾವಿ ವ್ಯಕ್ತಿಗಳು ಹಾಗೂ ಮಧ್ಯವರ್ತಿಗಳ ಮುಖಾಂತರ ಅಲ್ಲಿ ವಾಸ ಮಾಡುವ ನಮ್ಮೆಲ್ಲ ಕುಟುಂಬದವರಿಗೂ ಜೀವ ಬೆದರಿಕೆ ಹಾಕಿ, ಮನೆಗಳನ್ನು ತೆರವು ಮಾಡುವಂತೆ ದೌರ್ಜನ್ಯ ಎಸಗುತ್ತಿದ್ದಾರೆ.
ಈ ಕಾರಣದಿಂದ ನಮಗೆ ಜೀವ ಭಯ ಕಾಡುವುದರ ಜೊತೆಗೆ 40 ವರ್ಷಗಳಿಂದಲೂ ವಾಸ ಮಾಡುತ್ತಿರುವ 80 ಕುಟುಂಬಗಳಿಗೆ ತುಂಬಾ ಅನ್ಯಾಯವಾಗುತ್ತಿದೆ. ಜೀವನ ನಡೆಸಲು ಕೂಡ ಕಷ್ಟವಾಗುತ್ತಿದೆ. ನಮಗೆ ಈಗ ಇದ್ದ ಜಾಗದಲ್ಲೇ ಇರಲು ಅವಕಾಶ ಮಾಡಿಕೊಡಬೇಕು.
ಸರ್ಕಾರದ ಸವಲತ್ತಿಗೆ ಒಳಪಡಿಸಿ, ಆ ಜಾಗದಲ್ಲಿರುವ ಕುಟುಂಬಗಳಿಗೆ ಮಂಜೂರು ಮಾಡಿಕೊಟ್ಟು ಬಡವರು ಸಮಾಜದಲ್ಲಿ ಬದುಕಲು ನೇರವಾಗುವಂತೆ ತಾಲೂಕು ದಂಡಾಧಿಕಾರಿ ಅರುಣ್ ಕುಮಾರ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿ ವಿನಂತಿ ಮಾಡಿಕೊಂಡರು.
(ಬಾಕ್ಸ್:
ಇದೇ ವೇಳೆ ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ ಆಗಮಿಸಿ ನಿರಾಶ್ರಿತರ ಪರವಾಗಿ ತಹಶೀಲ್ದಾರರಿಗೆ ಮನವಿ ಮಾಡಿ, ಕಾರಟಗಿ ತಾಲೂಕಿನ ಗುರುಶಾಂತಪ್ಪ ಅವರ ಜಾಗದಲ್ಲಿ ಸುಮಾರು ವರ್ಷಗಳಿಂದಲೂ ವಾಸ ಮಾಡುತ್ತಿರುವ ಸುಮಾರು 80 ಬಡ ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡಿ, 3 ಎಕರೆಗಿಂತಲೂ ಹೆಚ್ಚು ಇರುವ ಭೂಮಿಯನ್ನು ಮನೆಯಿಲ್ಲದ ಬಡವರಿಗಾಗಿ ಮನೆಯಿಲ್ಲದವರು ಮನೆಯನ್ನೋ, ಗುಡಿಸಲನ್ನೋ, ಹಾಕಿಕೊಂಡು ಇರಲಿ ಎಂದು ಬಿಟ್ಟು ಹೋಗಿದ್ದಾರೆ, ಬಿಟ್ಟು ಹೋದ ಜಾಗದಲ್ಲಿ 40 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಈ ಬಡ ಕುಟುಂಬದವರಿಗೆ ನೆರವಾಗಿ ಎಂದು ದಂಡಾಧಿಕಾರಿಗಳಿಗೆ ತಿಳಿಸಿದರು.)
ಈ ಸಂದರ್ಭದಲ್ಲಿ: ರಾಘವೇಂದ್ರ, ಚಂದ್ರಶೇಖರ, ಯಂಕೋಬ, ಹುಸೇನಪ್ಪ, ನಾಗರಾಜ, ಶೇಕ್ಷಾವಲಿ, ವೀರೇಶಪ್ಪ ಕೋರಿ, ದುರುಗಪ್ಪ, ಸಣ್ಣರಡ್ಡೆಪ್ಪ, ಪ್ರಕಾಶ, ಹನುಮಂತ, ಮಹಿಬೂಬ್, ಭಾಷಾಸಾಬ್, ರಡ್ಡೆಪ್ಪ, ಸಿದ್ದಲಿಂಗಪ್ಪ, ಮುನ್ನಮ್ಮ, ಅಸನಬಿ, ಈರಮ್ಮ, ಹಾಗೂ ಗಂಗಮ್ಮ, ಅಲೀಂಬೇಗಂ, ಸೇರಿದಂತೆ ಅನೇಕರಿದ್ದರು.

