ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ನಡೆದ ನೊಬಲ್ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಧ್ವಜಾರೋಹಣ ಮಾತನಾಡಿದ ಅವರು ಶ್ರಮವಿಲ್ಲದ ಎಲ್ಲವೂ ಸಿಗಬೇಕು ಎನ್ನುವಂತಹ ಕಾಲದಲ್ಲಿ ನಾವಿದ್ದೀವಿ. ಆದರೆ ಅದಕ್ಕೆ ಸಿಗುವಂತಹ ಫಲ ಕ್ಷಣಿಕವಾದದ್ದು, ಅದರಿಂದ ಈ ಸಮಾಜಕ್ಕೆ ನಾವು ಏನು ಕೊಡುಗೆಯನ್ನು ನೀಡಬೇಕು ಎನ್ನುವುದು ಮುಖ್ಯವಾಗಿದೆ. ಒಬ್ಬ ವ್ಯಕ್ತಿ ಪರಿಪೂರ್ಣ ಆಗಬೇಕಾದರೆ ಆ ವ್ಯಕ್ತಿಯಲ್ಲಿ ನೈತಿಕತೆಯು ಇರಬೇಕು .ಅದು ಎನ್ ಎಸ್ ಎಸ್ ನಿಂದ ಮಾತ್ರ ಸಾಧ್ಯವಾಗುತ್ತದೆ .ಎಲ್ಲರೂ ಶ್ರದ್ದೆಯಿಂದ ಇದರಲ್ಲಿ ತೊಡಗಿಕೊಂಡು ನಿಮ್ಮ ಜವಾಬ್ದಾರಿಗಳನ್ನು ತಿಳಿದುಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಕಟನಾ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಸಿಂಧನೂರಿನ ತಾಶಿಲ್ದಾರ್ ಆಗಿರುವ ಅರುಣಕುಮಾರ್ ಎಚ್ ದೇಸಾಯಿ ಅವರು ಮಾತನಾಡುತ್ತಾ, ಓ ನನ್ನ ಚೇತನ ಹಾಗೂ ನೀ ಅನಿಕೇತನ ಕುವೆಂಪು ಅವರ ಕವಿತೆಯನ್ನು ನೆನೆಯುತ್ತಾ ನೂರು ಮತದ ಹೊಟ್ಟ ತೋರಿ ಅಂದರೆ ಜಾತಿ ಮತ ಪಂಥ ಭೇದಗಳಿಲ್ಲದೆ ಎಲ್ಲರೂ ಒಂದೇ ಎಂದು ಹೇಳುತ್ತಾ ಸ್ವಾರ್ಥ ರಹಿತ ಸೇವೆ ಎನ್ ಎಸ್ ಎಸ್ ಎಂದು ತಿಳಿಸಿದರು. ವಿದ್ಯಾರ್ಥಿಗಳು ಬರೀ ಶೈಕ್ಷಣಿಕವಾಗಿ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ,ಉನ್ನತ ಸ್ಥಾನವನ್ನು ಪಡೆಯಬೇಕು ನೀವು ಸಹ ಜಿಲ್ಲಾಧಿಕಾರಿಯಾಗಿ ನೇಮಕವಾಗಬೇಕು ಎಂದು ಹೇಳುತ್ತಾ, ಇಂದಿನ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ವ್ಯಸನಿಗಳಾಗುತ್ತಿದ್ದಾರೆ .ನಿಮ್ಮ ತಂದೆ ತಾಯಿಯರ ಬೆವರ ಹನಿಯನ್ನು ಅರ್ಥ ಮಾಡಿಕೊಳ್ಳಿ ಹೆತ್ತವರ ಕನಸನ್ನು ನನಸು ಮಾಡಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯತ ರಾಯಚೂರು ,ಸದಸ್ಯರಾದ ಶ್ರೀ ಬಸವರಾಜ ಹಿರೇಗೌಡರು,ಶ್ರಮ ಯೇವ ಜಯತೆ ಎನ್ನುವ ಮಾತು ಅರ್ಥಪೂರ್ಣವಾಗಿರುವಂಥದ್ದು ,ಶ್ರಮಕ್ಕೆ ತಕ್ಕ ಫಲ ಸಿಕ್ಕೆ ಸಿಗುತ್ತದೆ .ಆದರೆ ಕೆಲಸವನ್ನು ನಿಸ್ವಾರ್ಥ ಸೇವೆ ಮಾಡಬೇಕೇಂದುರ
ಇದೆ ವೇಳೆ ಆರ್ ಸಿ ಪಾಟೀಲ್ ಅಧ್ಯಕ್ಷರು ಪಾಟಿಲ್ ಶಿಕ್ಷಣ ಸಂಸ್ಥೆ ಸಿಂಧನೂರು ಇವರು ಕಾರ್ಯಕ್ರಮದ ಕುರಿತು ನಾನು ಸಹ ಎನ್ ಎಸ್ ಎಸ್ ಶಿಬಿರದಲ್ಲಿ ಪಾಲ್ಗೊಂಡ ನಂತರ ವೇದಿಕೆಯ ಮೇಲೆ ನಿಂತುಕೊಳ್ಳಲು ಸಾಧ್ಯವಾದದ್ದು ಧೈರ್ಯವನ್ನು ಕಳಿಸಿದ್ದು ,ಎನ್ಎಸ್ಎಸ್ ಎಂದು ತಮ್ಮ ಅನುಭವಗಳ ನೆನಪುಗಳನ್ನು ಮೆಲಕು ಹಾಕುತ್ತಾ ಏನನ್ನು ಬಯಸದೆ ನಿಸ್ವಾರ್ಥವಾಗಿ ಮಾಡುವ ಸೇವೆಯೇ ಎನ್ಎಸ್ಎಸ್. ಇದು ಎಲ್ಲವನ್ನು ಕಲಿಸುತ್ತ ಜೀವನದಲ್ಲಿ ಅನುಭವವನ್ನು ಉಂಟುಮಾಡುತ್ತದೆ. ನಾನು ಇವಾಗ ಎಲ್ಲಿಗೆ ಹೋದರು ಹೊಂದಿಕೊಂಡು ಹೋಗುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಈ ಎನ್ ಎಸ್ ಎಸ್ ಆಗಿದೆ ಯಾಕಂದರೆ ಶಿಬಿರದಲ್ಲಿ ಏನು ಇಲ್ಲದೆ ಇದ್ದರೂ ಬದುಕುವಂತಹ ಪಾಠವನ್ನು ಕಲಿತಿದ್ದೇವೆ. ನನ್ನಲ್ಲಿರುವ ನಾನು ಎನ್ನುವ ಅಹಂ ಅನ್ನು ತೆಗೆದು ಹಾಕುತ್ತದೆ ನಾನು ಅಲ್ಲ ನಾವು ಎನ್ನುವಂತಹ ತತ್ವವನ್ನು ಬೋಧಿಸುತ್ತದೆ .ಜೀವನದಲ್ಲಿ ಎಷ್ಟೇ ಕಷ್ಟ ಬರಲಿ ಅದನ್ನು ಎದುರಿಸುವಂತಹ ಧೈರ್ಯವನ್ನು ತುಂಬಿಸುತ್ತದೆ. ನಾವು ಒಂದಾಗಿ ಬಾಳೋಣ ಎನ್ನುವಂತಹ ಸಹಕಾರ ಸೌಹಾರ್ದಿಂದ ಕೂಡಿರುವ ಗುಣವನ್ನು ಬೆಳೆಸುತ್ತದೆ .ನಮ್ಮ ಮಾತುಗಳು ಹೇಗೆ ಇರಬೇಕೆಂಬುದು ಊಟವನ್ನು ವ್ಯರ್ಥ ಮಾಡಬಾರದು. ಯಾಕೆಂದರೆ ಎಷ್ಟೋ ಜನರಿಗೆ ತಿನ್ನಲು ಆಹಾರವೇ ಇರುವುದಿಲ್ಲ ಆದ ಕಾರಣ ಈ ಎನ್ ಎಸ್ ಎಸ್ ಈ ರೀತಿಯ ಒಳ್ಳೆಯ ನೈತಿಕ ಹಾಗೂ ನಾಯಕತ್ವದ ಗುಣವನ್ನು ಕಲಿಸುತ್ತದೆ .ಕಾಯಕವೇ ಕೈಲಾಸ ಎನ್ನುವಂತಹ ತತ್ವವನ್ನು ಬೋಧಿಸುತ್ತದೆ ಎಂದು ಹೇಳುತ್ತಾ, ಜೀವನದಲ್ಲಿ ಏನು ಆಗಬೇಕು? ಈಗಲೆಂದಲೇ ದೊಡ್ಡ ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ ನನಸಾಗಿಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಸಿಂಧನೂರಿನ ತಾಶಿಲ್ದಾರ್ ಆಗಿರುವ ಶ್ರೀ ಅರುಣ್ ಕುಮಾರ್ ಎಚ್ ದೇಸಾಯಿ ಅವರು ಮಾತನಾಡುತ್ತಾ ಓ ನನ್ನ ಚೇತನ ಹಾಗೂ ನೀ ಅನಿಕೇತನ ಕುವೆಂಪು ಅವರ ಕವಿತೆಯನ್ನು ನೆನೆಯುತ್ತಾ ನೂರು ಮತದ ಹೊಟ್ಟ ತೋರಿ ಅಂದರೆ ಜಾತಿ ಮತ ಪಂಥ ಭೇದಗಳಿಲ್ಲದೆ ಎಲ್ಲರೂ ಒಂದೇ ಎಂದು ಹೇಳುತ್ತಾ ಸ್ವಾರ್ಥ ರಹಿತ ಸೇವೆ ಎನ್ ಎಸ್ ಎಸ್ ಎಂದು ತಿಳಿಸಿದರು. ವಿದ್ಯಾರ್ಥಿಗಳು ಬರೀ ಶೈಕ್ಷಣಿಕವಾಗಿ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ,ಉನ್ನತ ಸ್ಥಾನವನ್ನು ಪಡೆಯಬೇಕು ನೀವು ಸಹ ಜಿಲ್ಲಾಧಿಕಾರಿಯಾಗಿ ನೇಮಕವಾಗಬೇಕು ಎಂದು ಹೇಳುತ್ತಾ, ಇಂದಿನ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ವ್ಯಸನಿಗಳಾಗುತ್ತಿದ್ದಾರೆ .ನಿಮ್ಮ ತಂದೆ ತಾಯಿಯರ ಬೆವರ ಹನಿಯನ್ನು ಅರ್ಥ ಮಾಡಿಕೊಳ್ಳಿ ಹೆತ್ತವರ ಕನಸನ್ನು ನನಸು ಮಾಡಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ ರಾಘವೇಂದ್ರ ಶ್ರೀ ಗಂಗೋತ್ರಿ ಟ್ರಸ್ಟ್ ಸೋಮಲಾಪುರ ಇವರು ಮಾತನಾಡಿ, ಎನ್ಎಸ್ಎಸ್ ನ ಮೂಲ ಮಂತ್ರ ನನಗಾಗಿ ಅಲ್ಲ ನಮಗಾಗಿ ಎನ್ನುವ ಘೋಷಣೆಯನ್ನು ಹೊಂದಿದೆ .ನಾನು ಎನ್ನುವುದು ಮರೆತು ನಾವು ಎನ್ನುವ ಭಾವನೆಯನ್ನು ಹೊಂದಬೇಕೆಂದು ತಿಳಿಸಿದರು .ಜಗತ್ತಿನಲ್ಲಿ ನಾವು ಕಣ್ಮರೆಯಾದರೂ ನಮ್ಮ ಸೇವೆಯು ನಮ್ಮನ್ನು ಗುರುತಿಸುತ್ತದೆ ಎಂದು ತಿಳಿಸಿದರು.
ಹಾಗೆಯೇ ಮುಖ್ಯಅತಿಥಿಗಳಾಗಿ ಶ್ರೀ ಅಶೋಕ ಬೆನ್ನೂರ್ ಅವರು ಸೇವಾ ಮನೋಭಾವನೆ ಈ ಎನ್ಎಸ್ಎಸ್ ಕಾರ್ಯಕ್ರಮಗಳಿಂದ ಉಂಟಾಗುತ್ತದೆ. ಮನೆಯಲ್ಲಿ ಮಾಡದೇ ಇರುವಂತಹ ಕೆಲಸವನ್ನು ಇಲ್ಲಿಗೆ ಬಂದ ನಂತರ ಕಲಿಯುತ್ತೇವೆ. ಅದು ನಿಸ್ವಾರ್ಥವಾಗಿ ಸೇವೆಯನ್ನು ಮಾಡಲು ಕಲಿಯುತ್ತೇವೆ. ಅಂಬಾ ದೇವಿ ಸನ್ನಿಧಾನದಲ್ಲಿ ಈ ಶಿಬಿರವನ್ನು ಮಾಡುವ ಅವಕಾಶ ನಿಮಗೆ ಸಿಕ್ಕಿದ್ದು ಪುಣ್ಯ ಎಂದು ತಿಳಿಸಿದರು.
ಶ್ರೀ ಸತ್ಯನಾರಾಯಣ ಶ್ರೇಷ್ಠಿ ಅವರು
ಓದುವ ಮಕ್ಕಳ ಮನಸ್ಥಿತಿ ಇಂದಿನ ದಿನಮಾನಗಳಲ್ಲಿ ಹದಗೆಡುತ್ತಿದೆ .ಅಂತಹ ಮನಸ್ಥಿತಿಯನ್ನು ಸುಧಾರಿಸುವ ಕೆಲಸವನ್ನು ಎನ್ಎಸ್ಎಸ್ ಮಾಡುತ್ತದೆ. ಓದಿದ ಕೂಡಲೇ ಸರಕಾರಿ ನೌಕರಿ ಬೇಕು ಅಂತ ಅನ್ನೋದಕ್ಕಿಂತ ನೀವು ಕೊಡುವ ಮಟ್ಟದಲ್ಲಿ ಬೆಳೆಯಬೇಕು ಎಂದು ಹೇಳುತ್ತಾ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮವನ್ನು ಎಲ್ಲಾ ಕಾಲೇಜಿನವರು ಸೇರಿ ಮಾಡೋಣ ಎನ್ನುವಂತಹ ಮಾತನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ ಅವರು ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ,ಗ್ರಾಮದಲ್ಲಿರುವ ಜನರಿಗೆ ಅರಿವನ್ನು ಮೂಡಿಸೋಣ ಇರುವಂತಹ ಅವಕಾಶ ಬಳಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು . ಇದೇ ಸಂದರ್ಭದಲ್ಲಿ ರಾಯಚೂರು ವಿಶ್ವವಿದ್ಯಾಲಯದ ವಿದ್ಯಾ ವಿದೇಶ ಪರಿಷತ್ತಿನ ಸದಸ್ಯರಾದ ಸತ್ಯನಾರಾಯಣ ಸೃಷ್ಟಿ ಮತ್ತು ಅನಿಲ್ ಕುಮಾರ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪರಶುರಾಮ ಮಲ್ಲಾಪುರ ರವರು ವಹಿಸಿದ್ದರು. ಪ್ರಾಸ್ತಾವಿಕ ನುಡಿ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳು ಶ್ರೀ ಹೊನ್ನಪ್ಪ ಬೆಳಗುರ್ಕಿ ನುಡಿದರು. ಶ್ರೀ ಮಂಜುನಾಥ ದಾಸರ,ಸಾಲ್ಗುಂದ, ಶ್ರೀ ಹುಸೇನಪ್ಪ ಜಿ ಗ್ರಾಮ ಪಂಚಾಯತ್ ಸದಸ್ಯರ ಸೋಮಲಾಪುರ, ಎಂ ರಂಗನಗೌಡ,ಶ್ರೀ ಎಸ್ ಎಸ್ ಜಿ ನೂರ್, ನೊಬಲ್ ಕಾಲೇಜಿನ ಕಾರ್ಯದರ್ಶಿಗಳಾದ ಡಾ. ಅರುಣಕುಮಾರ ಬೆರಗಿ, ಖಜಾಂಚಿಗಳಾದ ಜಯಪ್ಪ ಗೊರೆಬಾಳ, ಪ್ರಾಂಶುಪಾಲರಾದ ಶ್ರೀಮತಿ ಐಶ್ವರ್ಯ ದಳವಾಯಿ, ಪ್ರಾಚಾರ್ಯರಾದ ಶಿವಕುಮಾರ ಬಿಂಗಿ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತಿಯಲ್ಲಿದ್ದರು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಚೆನ್ನಬಸಮ್ಮ ಮಲ್ಲಾಪುರ ನೆರವೇರಿಸಿದರು
ಕುಮಾರಿ ಜ್ಯೋತಿ ಸ್ವಾಗತಿಸಿದರು.

