ಕಲಾಕೃತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಅಲಂಕಾರಗೊಳಿಸಿ ಕಾಳು ಮತ್ತು ನೀರು ಹಾಕಿ ಗಿಡಮರಗಳಿಗೆ ಕಟ್ಟಿ ಪ್ರಾಣಿ ಪಕ್ಷಿಗಳಿಗೆ ಮಾನವೀಯತೆ ತೋರುತ್ತಿರುವ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ…. ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಅಮರೇಗೌಡ ಮಲ್ಲಾಪುರ
ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳೇ ಮಡಿಕೆಗಳಿಗೆ ಕಲಾಕೃತಿಗಳನ್ನು ಬಿಡಿಸುವ ಮೂಲಕ ಅಲಂಕಾರಗೊಳಿಸಿ ಶಾಲೆಯಲ್ಲಿರುವ ಎಲ್ಲಾ ಗಿಡಗಳಿಗೆ ಮಡಿಕೆಗಳನ್ನು ಕಟ್ಟಿ ಕಾಳು ಮತ್ತು ನೀರು ಹಾಕಿ ಪ್ರಾಣಿ ಪಕ್ಷಿಗಳಿಗೆ ಬಿಸಿಲು ಮತ್ತು ನೀರಿನ ದಾಹ ತೀರಿಸಲು ಮುಂದಾಗಿರುವುದು ಎಲ್ಲ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.
ಇದೇ ಸಂಧರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷ ಅಮರೇಗೌಡ ಮಲ್ಲಾಪುರ ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಮಲ್ಲಾಪುರ ಶಾಲೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕೈಗೊಳ್ಳಲಾಗಿದೆ. ಇಲ್ಲಿನ ಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು ಬೇಸಿಗೆ ಕಾಲ ಆರಂಭವಾಗಿರುವುದರಿಂದ ಪ್ರಾಣಿ ಪಕ್ಷಿಗಳ ಸಂತತಿ ಉಳುವಿಗಾಗಿ ಸ್ವತಃ ತಾವೇ ಮಣ್ಣಿನ ಮಡಿಕೆಗಳಿಗೆ ಕಲಾಕೃತಿ ಮೂಲಕ ಅಲಂಕಾರಗೊಳಿಸಿ ಗಿಡಮರಗಳಿಗೆ ಕಟ್ಟಿ ಕಾಳು ಮತ್ತು ನೀರು ಹಾಕಿ ಮಾನವೀಯತೆ ತೋರುತ್ತಿರುವ ಕಾರ್ಯ ಶ್ಲಾಘನೀಯ.ಇದೇ ರೀತಿ ಪ್ರತಿಯೊಬ್ಬರೂ ತಮ್ಮ ಶಾಲೆ,ಮನೆ ಮಹಡಿಗಳ ಮೇಲೆ ಹಾಗೂ ಸುತ್ತಮುತ್ತ ಇರುವ ಗಿಡಗಳ ರಂಬೆ ಕೊಂಬೆಗಳಿಗೆ ಮಣ್ಣಿನ ಮಡಿಕೆಗಳನ್ನು ಕಟ್ಟಿ ಕಾಳು ನೀರು ಹಾಕಿ ಪ್ರಾಣಿ ಪಕ್ಷಿಗಳ ಸಂಕುಲ ಉಳಿಸಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಷಣ್ಮುಖಗೌಡ CRP ಸಮೂಹ ಸಂಪನ್ಮೂಲ ಕೇಂದ್ರ ಪಗಡದಿನ್ನಿ,ಸಂಗಪ್ಪ ಮುಖ್ಯ ಗುರುಗಳು,ಶಿಕ್ಷಕರಾದ ಅಮರೇಶ, ವನಸಿರಿ ಪೌಂಡೇಷನ್ ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷ ಚನ್ನಪ್ಪ ಕೆ.ಹೊಸಹಳ್ಳಿ,ಶ್ರೀಮತಿ ಅನುಸೂಯ
ಶ್ರೀಮತಿ ಅಂಬಮ್ಮ
ಶ್ರೀಮತಿ ಸುಗಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು .

