ಮಾಜಿ ಸಚಿವ ವೆಂಕಟರಾವ್ ನಾಡಗೌಡರು ಫೆ.26 ಗುರುವಾರ ಬೆಳಿಗ್ಗೆ 10 ಗಂಟೆಗೆ ಪ್ರೆಸ್‌ ಮೀಟ್ ಮಾಡಿ ರೈತರು ಜೋಳ ಕಟಾವು ಮಾಡಿ, 2 ತಿಂಗಳು ಕಳೆದರೂ ಕೂಡ ಖರೀದಿ ಕೇಂದ ತೆಗೆಯುತ್ತಿಲ್ಲವೆಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು, ಆದರೆ ಸಂಜೆ 5:30ಕ್ಕೆ ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಮಾರ್ಚ್ 4 ರಿಂದ ಸಿಂಧನೂರಿನಲ್ಲಿ ಜೋಳ ಖರೀದಿ ಕೇಂದ್ರ ಆರಂಭ ಮಾಡಲಾಗುವುದೆಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಅಂದು ಅಧೀಕ್ರತವಾಗಿ ಟಿಎಪಿಸಿಎಮ್ಎಸ್ ಆವರಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಪ್ರಾರಂಭ ಮಾಡಲಾಗುವುದು, ಈ ಖರೀದಿ ಕೇಂದ್ರವನ್ನು ಸರ್ಕಾರದ ಮಾರ್ಗಸೂಚನೆಗಳಂತೆ ಆರಂಭಿಸುತ್ತಿದ್ದು, ರೈತರು ತಮ್ಮ ಜೋಳವನ್ನು ಕನಿಷ್ಠ ಬೆಂಬಲ ಬೆಲೆಯ ಅಡಿಯಲ್ಲಿ ನೇರವಾಗಿ ಮಾರಾಟ ಮಾಡಬಹುದಾಗಿದೆ. ಇದರ ಮೂಲಕ ರೈತರಿಗೆ ನ್ಯಾಯ ಸಮ್ಮತ ಬೆಲೆ ಹಾಗೂ ಸುಗಮ ಖರೀದಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದಿದ್ದಾರೆ.

“ರೈತರು ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯಗಳು”

ಎಫ್‌ಎಕ್ಯೂ ಗುಣಮಟ್ಟದ ಜೋಳವನ್ನು ಮಾತ್ರ ಸ್ವೀಕರಿಸಲಾಗುವುದು, ಫಸಲು ನೋಂದಣಿ (ಪ್ರ್ಯೂಟ್ಸ್ ಐಡಿ) ಕಡ್ಡಾಯ ಮಾಡಿದ ರೈತರಿಗೆ ಎಫ್ಐಎಫ್ಒ ಅಡಿಯಲ್ಲಿ ಮೊದಲು ನೋಂದಣಿ ಮಾಡಿದ ರೈತರಿಗೆ ಮೊದಲು ಆದ್ಯತೆ, ಜೋಳವನ್ನು ಸ್ವಚ್ಛವಾಗಿ ಮತ್ತು ಒಣಗಿದ ಸ್ಥಿತಿಯಲ್ಲಿ ತರಬೇಕು, ಎಲ್ಲಾ ರೈತ ಬಂಧುಗಳು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *