ಹಾಲಾಪೂರ: ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಿವರಾತ್ರಿ ಅಮಾವಾಸ್ಯೆಯ ನವಮಿಯಂದು ಜಾತ್ರಾ ನಿಮಿತ್ಯವಾಗಿ ಬೆಳಗಿನ ಜಾವ ರುದ್ರಭಿಷೇಕ, ಬಿಲ್ವಪತ್ರೆ, ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮವನ್ನು ಶ್ರೀ ಬಸವರಾಜ ಸ್ವಾಮಿ ಕಾಳಹಸ್ತಿಮಠ, ಶ್ರೀ ಮಂಜುನಾಥಸ್ವಾಮಿ ಹಳೆಕೋಟಿ ಇವರಿಂದ ನೆರೆವೇರಿಸಿ, ದೇವಸ್ಥಾನದ ಅರ್ಚಕರಾದ ಶ್ರೀ ಚೆನ್ನಯ್ಯ ತಾತನವರು ಉಪಸ್ಥಿತರಿದ್ದರು. ನಂತರ ಜಾತ್ರೆಗೆ ಬಂದ ಸರ್ವ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಜರುಗಿತು. ಸಂಜೆ ಗಂಗೆಸ್ಥಳಕ್ಕೆ ಪೂಜೆ, ಆರು ಗಂಟೆಗೆ ಶ್ರೀ ಬಸವೇಶ್ವರರ ಉಚ್ಚಯ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಪೂಜ್ಯರು, ಗಣ್ಯರು ಹಾಗೂ ಹಾಲಾಪೂರ ಸುತ್ತಮುತ್ತಲಿನ ಗ್ರಾಮಗಳ ಸರ್ವ ಸದ್ಭಕ್ತಾದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *